ಸೆನ್ಸೆಕ್ಸ್ 41,945.37 ರಲ್ಲಿ ಸ್ಥಿರ

ಮುಂಬೈ, ಜ 17 :     ಇಂಧನ, ದೂರಸಂಪರ್ಕ, ವಿದ್ಯುತ್ ಮತ್ತು ತಂತ್ರಜ್ಞಾನ ಷೇರುಗಳಿಗೆ ಹೆಚ್ಚಿದ ಖರೀದಿ ಬೇಡಿಕೆಯಿಂದ ಮುಂಬೈ ಷೇರು ಪೇಟೆ ಸೂಚ್ಯಂಕ ಸೆನ್ಸೆಕ್ಸ್ ಶುಕ್ರವಾರ 12.81 ಅಂಕಗಳ ಅಲ್ಪ ಏರಿಕೆಯೊಂದಿಗೆ ಸ್ಥಿರವಾಗಿ ದಿನದ ವಹಿವಾಟು ಅಂತ್ಯ ಕಂಡಿದೆ.  

ಆದರೆ, ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ(ಎನ್ಎಸ್ಇ)ದ ಸೂಚ್ಯಂಕ ನಿಫ್ಟಿ 3.15 ಅಂಕ ಇಳಿಕೆಯೊಂದಿಗೆ ದಿನದಂತ್ಯಕ್ಕೆ 12,352.35ರಲ್ಲಿತ್ತು. ನಿಫ್ಟಿ ದಿನದ ಗರಿಷ್ಠ 12,385.45 ರಲ್ಲಿ ಹಾಗೂ ಕನಿಷ್ಠ 12,321.40ರಲ್ಲಿತ್ತು.  

ಶುಕ್ರವಾರ ಇಡೀ ದಿನ ಮಾರುಕಟ್ಟೆಯಲ್ಲಿ ನೀರಸ ವಹಿವಾಟು ನಡೆದಿತ್ತು. ನಕಾರಾತ್ಮಕವಾಗಿಯೇ 41,929.02 ರೊಂದಿಗೆ ಆರಂಭವಾದ ಸೆನ್ಸೆಕ್ಸ್ ಒಂದು ಹಂತದಲ್ಲಿ 82 ಅಂಕ ಕುಸಿತದೊಂದಿಗೆ ದಿನದ ಕನಿಷ್ಠ ಮಟ್ಟವಾದ 41,850.29ಕ್ಕೆ ಇಳಿದಿತ್ತು. ಅಂತಿಮವಾಗಿ 12.81 ಅಂಕ ಇಳಿಕೆಯೊಂದಿಗೆ 41,945.37ಕ್ಕೆ ತಲುಪಿದೆ.  

ಭಾರ್ತಿ ಏರ್ ಟೆಲ್, ರಿಲಯೆನ್ಸ್ ಇಂಡಸ್ಟ್ರೀಸ್, ಸನ್ ಫಾರ್ಮ, ಟಿಸಿಎಲ್ ಟೆಕ್ ಮತ್ತು ಮಾರುತಿ ಸುಜುಕಿ ಷೇರುಗಳು ಹೆಚ್ಚಿನ ಲಾಭ ಕಂಡಿವೆ.  

ಒಟ್ಟಾರೆ ಮುಂಬೈ ಷೇರು ಪೇಟೆಯಲ್ಲಿ 1324 ಕಂಪೆನಿಗಳ ಷೇರುಗಳು ಏರಿಕೆ ಕಂಡರೆ, 1217 ಕಂಪೆನಿಗಳ ಷೇರುಗಳು ಇಳಿಕೆ ಕಂಡಿವೆ. ಉಳಿದಂತೆ 175 ಕಂಪೆನಿಗಳ ಷೇರುಗಳು ಯಥಾಸ್ಥಿತಿಯಲ್ಲಿದ್ದವು.