ಉಜಾಲಾ ಮತ್ತು ಎಸ್ ಎಲ್ ಎನ್ ಪಿ ಉಪಕ್ರಮಗಳಿಗೆ ಐದು ವರ್ಷದ ಸಂಭ್ರಮ

ನವದೆಹಲಿ, ಜ 6, ದೇಶವನ್ನು ಬೆಳಗಿಸುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಾದ ಉಜಾಲಾ ಯೋಜನೆ ಮತ್ತು ಬೀದಿ ದೀಪ ರಾಷ್ಟ್ರೀಯ ಕಾರ್ಯಕ್ರಮ (ಎಸ್‌ಎಲ್‌ಎನ್‌ಪಿ) ಭಾನುವಾರ ಐದು ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದೆ. ಉಜಾಲಾ (ಕೈಗೆಟಕುವ ಎಲ್ ಇ ಡಿ ಮೂಲಕ ಉನ್ನತ ಜ್ಯೋತಿ) ಉಪಕ್ರಮದ ಮೂಲಕ ದೇಶಾದ್ಯಂತ 36.13 ಕೋಟಿಗೂ ಹೆಚ್ಚು ಎಲ್‌ಇಡಿ ಬಲ್ಬ್ ಗಳನ್ನು ವಿತರಿಸಲಾಗಿದೆ. ಇದರಿಂದಾಗಿ ವರ್ಷಕ್ಕೆ 46.92 ಶತಕೋಟಿ ಕಿಲೋವ್ಯಾಟ್ ಇಂಧನ ಉಳಿತಾಯ ಸಾಧ್ಯವಾಗಿದೆ. ಉಜಾಲಾ (ಉನ್ನತ ಜ್ಯೋತಿ ಬೈ ಅಫರ್ಡೆಬಲ್ ಎಲ್ ಇ ಡಿ ಸ್ ಫಾರ್ ಆಲ್)  ಯೋಜನೆಯಿಂದ ಇಂಧನ ವಲಯದ ಮಾರುಕಟ್ಟೆ ಭಾರಿ ಪರಿವರ್ತನೆ ಕಂಡು ಬಂದಿದೆ. ಉಜಾಲಾ ಕಾರ್ಯಕ್ರಮದಡಿ ಎಲ್‌ಇಡಿ ಬಲ್ಬ್‌ ಗಳ ವಿತರಣೆಯಿಂದ ಅವುಗಳ ದರ ತಮ್ಮ ಮೂಲ ಬೆಲೆಗಿಂತ ಹತ್ತನೇ ಒಂದು ಭಾಗಕ್ಕೆ ಇಳಿದಿದೆ.

2015 ರಲ್ಲಿ 310 ರೂಪಾಯಿಯಿದ್ದ ಎಲ್ ಇ ಡಿ ಬಲ್ಬ್ ದರ 2018 ರಲ್ಲಿ 38 ರೂಪಾಯಿಗೆ ಇಳಿಕೆ ಕಂಡಿದೆ. ಅಸಮರ್ಥ ಪ್ರಕಾಶಮಾನ ಬಲ್ಬ್‌ ಗಳಿಂದ ಎಲ್‌ಇಡಿಗಳಿಗೆ ಬದಲಾಯಿಸುವುದರಿಂದ ಕುಟುಂಬಗಳ ವಿದ್ಯುತ್ ಬಿಲ್ ಕೂಡ ಕಡಿಮೆಯಾಗಲು ಸಾಧ್ಯವಾಗಿದೆ. ಈ ಮೂಲಕ ಕುಟುಂಬಗಳು ಕಡಿಮೆ ದರದಲ್ಲಿ ಪ್ರಕಾಶಮಾನ ಬೆಳಕು ಪಡೆಯಲು ಸಾಧ್ಯವಾಗಿದೆ.ಬೀದಿ ದೀಪ ರಾಷ್ಟ್ರೀಯ ಕಾರ್ಯಕ್ರಮದಡಿ ಇಲ್ಲಿಯವರೆಗೆ 1.03 ಕೋಟಿಗೂ ಹೆಚ್ಚು ಸ್ಮಾರ್ಟ್ ಎಲ್ಇಡಿ ಬೀದಿ ದೀಪಗಳನ್ನು ಅಳವಡಿಸಲಾಗಿದೆ. ಇದರಿಂದಾಗಿ ವರ್ಷಕ್ಕೆ 6.97 ಶತಕೋಟಿ ಕಿಲೋವ್ಯಾಟ್ ಇಂಧನ ಉಳಿತಾಯವಾಗಿದೆ.ಮೇಕ್ ಇನ್ ಇಂಡಿಯಾ ಉಪಕ್ರಮದಡಿ ದೇಶಾದ್ಯಂತ ಸುಮಾರು 13,000 ಉದ್ಯೋಗಗಳನ್ನು ಸೃಷ್ಟಿಸಲು ಸಹ ಈ ಎಲ್ ಇ ಡಿ ಬೀದಿ ದೀಪ ಅಳವಡಿಕೆ ಕ್ರಮದಿಂದ ಸಾಧ್ಯವಾಗಿದೆ.