ಐದು ಟ್ರಿಲಿಯನ್ ಆಥರ್ಿಕತೆ : ಸಿ ಎ ಜಿ ಸಹಕಾರ ಕೋರಿದ ಪ್ರಧಾನಿ

ನವದೆಹಲಿ,  22 ಬರುವ 2022 ರ ವೇಳೆಗೆ ದೇಶದ ಆಥರ್ಿಕ ಸ್ಥಿತಿಯನ್ನು ಐದು ಟ್ರಿಲಿಯನ್ ಡಾಲರ್ ಗುರಿ ಮುಟ್ಟಿಸಲು ಸಿ ಎ ಜಿ ಸಕರ್ಾರದ ಜೊತೆ ಕೈಜೋಡಿಸಬೇಕು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.    ಈ ಕುರಿತು ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಕರ್ಾರಿ ಸಂಸ್ಥೆಗಳು ಮನಸ್ಸು ಮಾಡಿದರೆ ಇದನ್ನು ಸಾಧಿಸುವುದು ಕಷ್ಟಕರವೇನಲ್ಲ ಎಂದರು.     ಈ ಗುರಿಯನ್ನು ಮುಟ್ಟಲು ಸಿ ಎ ಜಿ ಸಂಸ್ಥೆ ಹೊಸ ಮಾರ್ಗ, ಹೊಸ ಚಿಂತನೆಯನ್ನು ಅಳವಡಿಸಿಕೊಳ್ಳಬೇಕಾದ ಅಗತ್ಯವನ್ನು ಪ್ರಧಾನಿ ಒತ್ತಿ ಹೇಳಿದ್ದಾರೆ.    ವರ್ಷಕ್ಕೆ ಒಂದು ಟ್ರಿಲಿಯನ್ ಡಾಲರ್ ನಂತೆ ಐದು ವರ್ಷದ ಅವಧಿಯಲ್ಲಿ ಐದು ಲಕ್ಷ ಕೋಟಿ ಡಾಲರ್ ಆಥರ್ಿಕ ಪ್ರಗತಿ ಸಾಧಿಸಬೇಕು ಎಂದು ಪ್ರಧಾನಿ ದೇಶದ ಒಳಗೆ ಮತ್ತು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಈ ವಿಚಾರವನ್ನು ಪ್ರಮುಖವಾಗಿ ಪ್ರಸ್ತಾಪ ಮಾಡುತ್ತಲೇ ಬಂದಿದ್ದಾರೆ.    ಗುರುವಾರವಷ್ಟೇ ವಿಶ್ವದ ಕುಬೇರ ಎನಿಸಿಕೊಂಡಿರುವ ಬಿಲ್ ಗೇಟ್ಸ್ ,ಪ್ರಧಾನಿಯೊಂದಿಗೆ ಆಥರ್ಿಕ ವಿಚಾರ ಕುರಿತು ಮಹತ್ವದ ಮಾತುಕತೆ ನಡೆಸಿದ್ದರು. ಅಲ್ಲದೇ ಮುಂದಿನ ದಶಕದ ಅವಧಿಯಲ್ಲಿ ಭಾರತ ನಿರೀಕ್ಷೆಗೂ ಮೀರಿ ಆಥರ್ಿಕ ಪ್ರಗತಿ ಸಾಧಿಸಲಿದೆ ಎಂಬ ಆಶಯವನ್ನು ಬಿಲ್ ಗೇಟ್ಸ್ ವ್ಯಕ್ತಪಡಿಸಿದ್ದರು.