ಢಾಕಾ, ಜ 18 ,ಇದೇ ತಿಂಗಳು ಕೊನೆಯಲ್ಲಿ ಪಾಕಿಸ್ತಾನಕ್ಕೆ ಮೊದಲ ಪ್ರವಾಸ ಕೈಗೊಳ್ಳಲಿರುವ ಬಾಂಗ್ಲಾದೇಶ ತಂಡದೊಂದಿಗೆ ತೆರಳಲು ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಮುಷ್ಪಿಕುರ್ ರಹೀಮ್ ಹಾಗೂ ನಾಲ್ವರು ಕೋಚಿಂಗ್ ಸಿಬ್ಬಂದಿ ನಿರಾಕರಿಸಿದ್ದಾರೆ.ಸೀಮಿತ ಓವರ್ ಗಳ ಬ್ಯಾಟಿಂಗ್ ಕೋಚ್ ನೀಲ್ ಮೆಕೆಂಜಿ, ಫೀಲ್ಡಿಂಗ್ ಕೋಚ್ ರ್ಯಾನ್ ಕುಕ್ ಅವರು ಸೇರಿ ನಾಲ್ಕು ಮಂದಿ ಪಾಕ್ ಪ್ರವಾಸದಿಂದ ಹಿಂದೆ ಸರಿದಿದ್ದಾರೆ ಎಂದು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ ಕ್ರಿಕೆಟ್ ಕಾರ್ಯಾಚರಣೆಯ ಮುಖ್ಯಸ್ಥ ಅಕ್ರಂ ಖಾನ್ ತಿಳಿಸಿದ್ದಾರೆ.
ನ್ಯೂಜಿಲೆಂಡ್ ತಂಡದ ಮಾಜಿ ನಾಯಕಿ ಡೇನಿಯಲ್ ವೆಟ್ಟೋರಿ ಬಿಸಿಬಿಗೆ ಸ್ಪಿನ್ ಸಲಹೆಗಾರರಾಗಿ ನೇಮಗೊಂಡಿದ್ದಾರೆ. ಪಾಕಿಸ್ತಾನ ವಿರುದ್ಧದ ಚುಟುಕು ಸರಣಿಗೆ ಅವರನ್ನು ಪರಿಗಣಿಸಿಲ್ಲ. ತಂಡದ ವಿಶ್ಲೇಷಕರಾಗಿರುವ ಶ್ರೀನಿವಾಸ್ ಚಂದ್ರಶೇಖರನ್ ಅವರು ಭಾರತ ಪ್ರಜೆಯಾಗಿರುವುದರಿಂದ ಅವರನ್ನು ಪಾಕ್ ಪ್ರವಾಸಕ್ಕೆ ಕರೆದಿಲ್ಲ.ಬಾಂಗ್ಲಾದೇಶ ಮುಖ್ಯ ಕೋಚ್ ರಸೆಲ್ ಡೊಮಿಂಗೊ, ಫಿಜಿಯೊ ಜೂಲಿಯನ್, ಸೊಹೆಲ್ ಇಸ್ಲಾಮ್ (ಫೀಲ್ಡಿಂಗ್ ಕೋಚ್) ಹಾಗೂ ತುಷಾರ್ ಕಾಂತಿ ಸೇರಿದಂತೆ ನಿಯಮಿತಿ ಸಹಾಯಕ ಸಿಬ್ಬಂದಿ ಪಾಕ್ ಪ್ರವಾಸ ಕೈಗೊಳ್ಳಲಿದೆ.ಬಾಂಗ್ಲಾದೇಶ ತಂಡ ಜನವರಿ ಯಿಂದ ಏಪ್ರಿಲ್ ನಡುವೆ ಮೂರು ಪಂದ್ಯಗಳ ಟಿ-20 ಸರಣಿ ಹಾಗೂ ಎರಡು ಪಂದ್ಯಗಳ ಟೆಸ್ಟ್ ಸರಣಿ ಆಡಲಿದೆ. ಚುಟುಕು ಸರಣಿ ಜನವರಿ 24 ರಿಂದ 27ರವರೆಗೆ ನಡೆಯಲಿದೆ. ಮೊದಲನೇ ಟೆಸ್ಟ್ ಪಂದ್ಯ ಫೆಬ್ರುವರಿ 7 ರಿಂದ 11ರವರೆಗೆ ಜರುಗಲಿದೆ. ಬಾಂಗ್ಲಾದೇಶ ಮತ್ತೆ ಏಪ್ರಿಲ್ ತಿಂಗಳಲ್ಲಿ ಪಾಕಿಸ್ತಾನಕ್ಕೆ ಮರಳಲಿದೆ. ಏಪ್ರಿಲ್ 3 ರಂದು ಒಂದು ಏಕದಿನ ಪಂದ್ಯ ಹಾಗೂ ಏ.5 ರಿಂದ 11ರವರೆಗೆ ಎರಡನೇ ಪಂದ್ಯವಾಡಲಿದೆ.