ಬೀಜಿಂಗ್, ಜೂನ್ 13, ಚೀನಾದ ಮುಖ್ಯಭೂಭಾಗದಲ್ಲಿ ಐದು ಹೊಸ ಆಮದು ಕರೋನ ಪ್ರಕರಣ ಶುಕ್ರವಾರ ವರದಿಯಾಗಿದೆ. ಪರಿಣಾಮವಾಗಿ ಆಮದು ಒಟ್ಟು ಪ್ರಕರಣಗಳ ಸಂಖ್ಯೆ 1,808 ಕ್ಕೆ ಏರಿಕೆಯಾಗಿದೆ ಎಂದು ರಾಷ್ಟ್ರೀಯ ಆರೋಗ್ಯ ಆಯೋಗ ಶನಿವಾರ ತಿಳಿಸಿದೆ.ಟಿಯಾಂಜಿನ್, ಶಾಂಘೈ, ಗುವಾಂಗ್‌ಡಾಂಗ್, ಹೈನಾನ್ ಮತ್ತು ಸಿಚುವಾನ್ ತಲಾ ಒಂದು ಆಮದು ಕರೋನ ಪ್ರಕರಣ ವರದಿಯಾಗಿದೆ ಎಂದು ಆಯೋಗ ತಿಳಿಸಿದೆ.ಮುಖ್ಯ ಭೂಭಾಗದಲ್ಲಿ ಆಮದು ಪ್ರಕರಣಗಳಲ್ಲಿ 1,742 ಚೇತರಿಸಿಕೊಂಡಿದ್ದು ನಂತರ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ ಆದರೆ ಇನ್ನೂ 66 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಮದು ಕರೋನ ಪ್ರಕರಣಗಳಿಂದ ಯಾವುದೇ ಸಾವಿನ ಪ್ರಕರಣ ವರದಿಯಾಗಿಲ್ಲ.