ಚಿಕ್ಕಬಳ್ಳಾಪುರ, ಮಾ.28, ಜಿಲ್ಲೆಯ ಗೌರಿಬಿದನೂರಿನಲ್ಲಿ ಶನಿವಾರ ಮತ್ತೆ ಐವರಲ್ಲಿ ಕೋವಿಡ್-19 ಸೋಂಕು ದೃಢಪಟ್ಟಿದ್ದು, ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 8ಕ್ಕೇರಿದೆ. ಮಾರ್ಚ್ 24ರಂದು 70 ವರ್ಷ ಪ್ರಾಯದ ವೃದ್ಧೆಯೊಬ್ಬರು ತೀವ್ರ ಅಸ್ವಸ್ಥರಾಗಿ ಮೃತಪಟ್ಟಿದ್ದರು. ಬಳಿಕ ಅವರಲ್ಲಿ ಕೋವಿಡ್ 19 ಸೋಂಕು ಇರುವುದು ದೃಢಪಟ್ಟಿತ್ತು.ಕೋವಿಡ್ 19 ಸೋಂಕು ದೃಢಪಟ್ಟ ಮೂವರನ್ನು ಸಂಪರ್ಕಿಸಿದ ಒಟ್ಟು 22 ಮಂದಿಯನ್ನು ಹೋಮ್ ಕ್ವಾರಂಟೈನ್‌ನಲ್ಲಿ ಇಡಲಾಗಿದೆ. ಈ ಪೈಕಿ ಐವರಲ್ಲಿ ಪಾಸಿಟಿವ್ ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಆರ್. ಲತಾ ತಿಳಿಸಿದ್ದಾರೆ.
ಸೋಂಕಿತರೆಲ್ಲರನ್ನೂ ಹಳೆಯ ಜಿಲ್ಲಾ ಆಸ್ಪತ್ರೆ ಕಟ್ಟಡದಲ್ಲಿ ಪ್ರತ್ಯೇಕ ವಾರ್ಡ್‌ಗಳಿಗೆ ಸ್ಥಳಾಂತರಿಸಲಾಗಿದೆ.ಮೊದಲ ಪಾಸಿಟಿವ್ ಪ್ರಕರಣ ಮಾರ್ಚ್ 21 ರಂದು ವರದಿಯಾಗಿದ್ದರೆ, ಎರಡನೆಯದು ಮತ್ತು ಮೂರನೆಯದು ಮಾರ್ಚ್ 23 ಮತ್ತು 24 ರಂದು ವರದಿಯಾಗಿತ್ತು ಈ ಮೂವರೂ ಮೆಕ್ಕಾದಿಂದ ಹಿಂದಿರುಗಿದ್ದರು. ಆಂಧ್ರಪ್ರದೇಶದ ಹಿಂದೂಪುರ ಮೂಲದ ವೃದ್ಧ ಮಹಿಳೆ ತನ್ನ ಮಗನನ್ನು ನೋಡಲು ಗೌರಿಬಿದನೂರಿಗೆ ಬಂದಿದ್ದರು. ಅನಾರೋಗ್ಯಕ್ಕೆ ಒಳಗಾದ ಅವರು ಆಸ್ಪತ್ರೆಗೆ ದಾಖಲಾಗಿದ್ದರು ಮತ್ತು ನಂತರ ಅವರನ್ನು ಬೆಂಗಳೂರಿನ ರಾಜೀವ್ ಗಾಂಧಿ ಇನ್ಸ್ಟಿಟ್ಯೂಟ್ ಆಫ್ ಎದೆ ರೋಗಗಳ ಆಸ್ಪತ್ರೆ (ಆರ್‌ಜಿಐಸಿಡಿ)ಗೆ ಸ್ಥಳಾಂತರಿಸಲಾಯಿತು, ಅಲ್ಲಿ ಅವರು ಮೃತಪಟ್ಟಿದ್ದರು.ಅವರಲ್ಲಿ ಇಬ್ಬರು ಆರ್‌ಜಿಐಸಿಡಿಯಲ್ಲಿ ಚೇತರಿಸಿಕೊಳ್ಳುತ್ತಿದ್ದರೆ, ಮೂರನೆಯವರು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.