ಆಟೋ ರಿಕ್ಷಾಕ್ಕೆ ಕಾರು ಡಿಕ್ಕಿ: ಐವರು ಸಾವು

ನಿಜಾಮಬಾದ್, ನ.18 :      ಆಟೋ ರಿಕ್ಷಾವೊಂದಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮಹಿಳೆಯರು ಸೇರಿ ಐವರು ಸಾವನ್ನಪ್ಪಿರುವ ಘಟನೆ ತೆಲಂಗಾಣದ ನಿಜಾಮಾಬಾದ್ ಜಿಲ್ಲೆಯ ಯೆಡಪಳ್ಳೆ ಮಂಡಲದ ಥಾನಕಲನ್ ಗ್ರಾಮದಲ್ಲಿ ನಿನ್ನೆ ಸಂಜೆ ನಡೆದಿದೆ. ಉತ್ಸವವೊಂದರಲ್ಲಿ ಪಾಲ್ಗೊಂಡು ಆಟೋ ರಿಕ್ಷಾದಲ್ಲಿ ಕಂದೂರ್ನಿಂದ ಜಂಕಮಪೇಟೆಗೆ ಹೋಗುತ್ತಿದ್ದಾಗ ಈ ದುರಂತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದು, ಇತರ ಮೂವರು ಆಸ್ಪತ್ರೆಗೆ ಕೊಂಡೊಯ್ಯುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಓರ್ವ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆಕುಲಾ ಬಾಲಮಣಿ (56), ಜಕ್ಕಮ್ ಗಂಗಮಣಿ (60), ಕಲ್ಲೇಪುರಂ ಸೈಲು (70), ಚಿಕ್ಕಲಾ ಸೈಲು (65),  ಶೈಕ್ ನಯೀಮ್  ಮೃತಪಟ್ಟವರು. ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.