ಗುಜರಾತ್ ಕರಾವಳಿಯಲ್ಲಿ ಐವರು ಪಾಕಿಸ್ತಾನಿ ಕಳ್ಳಸಾಗಾಣಿಕೆದಾರರ ಬಂಧನ, 35 ಕೆಜಿ ಹೆರಾಯಿನ್ ವಶ

ಅಹಮದಾಬಾದ್/ ಭುಜ್,  ಜ 6           ಗುಜರಾತ್   ಕಛ್  ಜಿಲ್ಲೆಯ  ಜಕಾವು ಕರಾವಳಿಯ ಅರಬ್ಬಿ ಸಮುದ್ರ  ಪ್ರದೇಶದಲ್ಲಿ   ಮಾದಕ ವಸ್ತು  ಕಳ್ಳ ಸಾಗಾಣಿಕೆ  ನಡೆಸುತ್ತಿದ್ದ  ಪಾಕಿಸ್ತಾನ ದೋಣಿಯೊಯನ್ನು  ಮುಟ್ಟುಗೋಲುಹಾಕಿಕೊಂಡಿರುವ   ಭಯೋತ್ಪಾದಕ ನಿಗ್ರಹ ದಳ- ಎಟಿಎಸ್  ಪೊಲೀಸರು ಸುಮಾರು  175 ಕೋಟಿ ರೂ ಮೌಲ್ಯದ 35 ಕೆಜಿ ಹೆರಾಯಿನ್ ವಶಪಡಿಸಿಕೊಂಡು, ಐವರು ಪಾಕಿಸ್ತಾನಿ  ನಾಗರೀಕರನ್ನು ಬಂಧಿಸಿದ್ದಾರೆ 

ಗುಜರಾತ್  ಕರಾವಳಿಯ ಮೂಲಕ   ಪಾಕಿಸ್ತಾನಿಯರು  ಮಾದಕ ವಸ್ತು ಕಳ್ಳಸಾಗಾಣಿಕೆ ನಡೆಸುತ್ತಿರುವ ಕುರಿತು ಖಚಿತ ವರ್ತಮಾನ  ಅನುಸರಿಸಿ ಕಾಯರ್ಾಚರಣೆ ನಡೆಸಲಾಯಿತು ಎಂದು  ಎಟಿಎಸ್ ಮುಖ್ಯಸ್ಥ ಹಿಮಾಂಶು ಹೇಳಿದ್ದಾರೆ 

ಮೀನುಗಾರಿಕಾ ದೋಣಿಯಲ್ಲಿ   ಪಾಕಿಸ್ತಾನದಿಂದ  ಮಾದಕ ವಸ್ತು  ಹೆರಾಯಿನ್   ಕಳ್ಳಸಾಗಾಣಿಕೆ  ನಡೆಸುತ್ತಿರುವ  ನಿಖರ ಮಾಹಿತಿ ಪಡೆದುಕೊಂಡ  ಎಟಿಎಸ್  ಅಧಿಕಾರಿಗಳು  ಭಾರತೀಯ  ತಟ ರಕ್ಷಣಾ ಪಡೆಯ ಸಂಪರ್ಕಿಸಿ  ಜಂಟಿ ಕಾರ್ಯಾಚರಣೆ ನಡೆಸಿ   ಐವರು ಪಾಕಿಸ್ತಾನ   ನಾಗರೀಕರನ್ನು ಬಂಧಿಸಿ, ಮಾದಕ ವಸ್ತು ವಶಪಡಿಸಿಕೊಳ್ಳಲಾಗಿದೆ.  

ಎಟಿಎಸ್  ಅಧಿಕಾರಿಗಳ ತಂಡ, ಭಾರತೀಯ ತಟ ರಕ್ಷಣಾ ಪಡೆಯ ವೇಗದ  ಇಂಟರ್ ಸೆಪ್ಟರ್  ದೋಣಿಯಲ್ಲಿ   ಕಚ್ ನ  ಜಕಾವುಗೆ  ತೆರಳಿ    ಜಂಟಿ ಕಾರ್ಯಾಚರಣೆ  ನಡೆಸಿ  ಕಳ್ಳಸಾಗಾಣಿಕೆದಾರರನ್ನು  ಬಂಧಿಸಿದೆ. 

ಬಂಧಿತ ಪಾಕಿಸ್ತಾನ ಕಳ್ಳಸಾಗಾಣಿಕೆದಾರರನ್ನು  ಅನೀಸ್ ಇಸಾ ಭಟ್ಟಿ(30), ಇಸ್ಮಾಯಿಲ್ ಮೊಹಮದ್ ಕಚ್ಚಿ(50) ಅಶ್ರಫ್ ಉಸ್ಮಾನ್ ಕುಟಚಿ(42) ಕರೀಂ ಅಬ್ದುಲ್ಲಾ ಕುಟಚಿ(37) ಅಬೂಬಕರ್ ಅಶ್ರಫ್ ಸುಮಾರ(55) ಎಂದು ಗುರುತಿಸಲಾಗಿದೆ.