ಕುಮಟಾದಲ್ಲಿ ಸ್ಥಗಿತಗೊಂಡ ಮೀನು ವ್ಯಾಪಾರ

ಲೋಕದರ್ಶನ ವರದಿ

ಕುಮಟಾ 7: ಮಲ್ಪೆಯಲ್ಲಿ ಮೀನುಗಾರರು ಪ್ರತಿಭಟನೆಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಭಾನುವಾರ ಕುಮಟಾದ ಮೀನು ಮಾರುಕಟ್ಟೆಯಲ್ಲಿ ಮೀನು ವ್ಯಾಪಾರ ಸ್ಥಗಿತಗೊಂಡಿರುವುದರಿಂದ ಪಟ್ಟಣದ ಚಿಕನ್ ಹಾಗೂ ಮಟನ್ ಅಂಗಡಿಗಳಲ್ಲಿ ಜನದಟ್ಟನೆಯಿಂದ ಕೂಡಿದ ಮತ್ಸ್ಯ ಪ್ರೀಯರು ಚಿಕನ್ ಖರೀದಿಗೆ ಮೂಗಿಬಿದ್ದಿರುವ ದೃಶ್ಯ ಕಂಡುಬಂತು.

    ಡಿಸೆಂಬರ್ 13 ರಂದು ಮೀನುಗಾರಿಕೆಗೆ ತೆರಳಿದ್ದ ಮಲ್ಪೆಯ ಸುವರ್ಣ ತ್ರಿಭುಜ ಬೋಟ್ ಹಾಗೂ ಅದರಲ್ಲಿದ್ದ 7 ಮೀನುಗಾರರು ಕಣ್ಮರೆಯಾಗಿದ್ದಾರೆ. ಅವರನ್ನು ಹುಡುಕಿ ಸುರಕ್ಷಿತವಾಗಿ ತರಬೇಕೆಂದು ಮೀನುಗಾರರು ಸಂಬಂದಪಟ್ಟ ಇಲಾಖೆಯ ಅಧಿಕಾರಿಗಳಿಗೆ ಮನವಿ ನೀಡಿದ್ದರು. 24 ದಿನಗಳು ಕಳೆದರೂ ಮೀನುಗಾರರ ಸುಳಿವು ಸಿಕ್ಕದೇ ಇರುವುದರಿಂದ ಮೀನುಗಾರಿಕೆಗೆ ತೆರಳಿರುವ ಮೀನುಗಾರರ ಕುಟುಂಬಗಳು ತೀವ್ರ ಆತಂಕಕ್ಕೀಡಾಗಿದ್ದಾರೆ. ಇದರಿಂದ ರಾಜ್ಯ ಮತ್ತು ಕೇಂದ್ರ ಸಕರ್ಾರ ಮೀನುಗಾರರನ್ನು ಹುಡುಕುವಲ್ಲಿ ವಿಳಂಬ ನೀತಿ ಹಾಗೂ ನಿರ್ಲಕ್ಷ ಧೋರಣೆಯಿಂದ ಮೀನುಗಾರರು ಆಕ್ರೋಶಗೊಂಡಿದ್ದಾರೆ. ಹಾಗಾಗಿ ಎರಡೂ ಸಕರ್ಾರಗಳಿಗೆ ಬಿಸಿ ಮುಟ್ಟಿಸಲು ಮೀನುಗಾರರ ಸಂಘಟನೆಗಳು ಮಲ್ಪೆಯಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳನ್ನು ಮಂತ್ರಿಗಳು ಹಾಗೂ ರಾಜ್ಯ ಮತ್ತು ಕೇಂದ್ರ ಸಕರ್ಾರಗಳು ನಾಪತ್ತೆಯಾದ 7 ಜನ ಮೀನುಗಾರರನ್ನು ಸುರಕ್ಷಿತವಾಗಿ ಮರಳಿ ತರಬೇಕೆಂದು ಒತ್ತಾಯಿಸಲಾಗಿದೆ. ಅಲ್ಲದೇ 4 ದಿನದೊಳಗೆ ಬೇಡಿಕೆ ಈಡೇರದಿದ್ದರೆ ಮೀನುಗಾರರು ಜಿಲ್ಲೆಯಾದ್ಯಂತ ಉಗ್ರ ಪ್ರತಿಭಟನೆ ನಡೆಸಲಾಗುವದೆಂದು ಈ ಹಿಂದೆ ಮೀನುಗಾರರು ಎಚ್ಚರಿಕೆ ನೀಡಿದ್ದರು. ಬೇಡಿಕೆ ಈಡೇರದ ಕಾರಣ ಆಕ್ರೋಶಗೊಂಡ ಮೀನುಗಾರರು ಭಾನುವಾರ ಮಲ್ಪೆಯಲ್ಲಿ ಪ್ರತಿಭಟನೆ ನಡೆಸಿರುವುದರಿಂದ ಕುಮಟಾದ ಮೀನು ಮಾರುಕಟ್ಟೆಯಲ್ಲಿ ಮೀನು ವ್ಯಾಪಾರ ಸ್ಥಗಿತಗೊಂಡಿತ್ತು. ಹಾಗಾಗಿ ಮೀನು ಮಾರುಕಟ್ಟೆ ಕಾಲಿ ಕಾಲಿಯಾಗಿ ಬಿಕೋ ಎನಿಸುತ್ತಿದ್ದಲ್ಲದೇ ಭಣಗೆಡುತ್ತಿತ್ತು. ರವಿವಾರ ರಜಾ ದಿನ ಇರುವುದರಿಂದ ಮತ್ಸ್ಯ ಪ್ರೀಯರು ಹೆಚ್ಚಿನ ಸಂಖ್ಯೆಯಲ್ಲಿ ಮೀನು ಖರೀದಿಗೆ ಮಾರುಕಟ್ಟೆಗೆ ತೆರಳಿ ಬರಿಗೈಯಲ್ಲಿ ವಾಪಸ್ಸಾಗುತ್ತಿದ್ದರು. ಮೀನು ವ್ಯಾಪಾರ ಸ್ಥಗಿತಗೊಂಡಿದ್ದರಿಂದ ಜನರು ಬೇಸರವನ್ನು ವ್ಯಕ್ತ ಪಡಿಸಿದರು. ಮೀನಿಲ್ಲದೆ ಬರಿಗೈಯಲ್ಲಿ ತೆರಳಿದ ಜನರು ಪಟ್ಟಣದ ಚಿಕನ್ ಹಾಗೂ ಮಟನ್ ಅಂಗಡಿಗಳಲ್ಲಿ ಮುಗಿ ಬಿದ್ದಿರುವ ದೃಶ್ಯ ಕಂಡುಬಂದಿತು. 

   ಈ ಸಂದರ್ಭದಲ್ಲಿ ಮತ್ಸ್ಯ ಪ್ರೀಯರಾದ ಶ್ರೀಧರ ವೆಂಕಟೇಶ ಶೇಟ್ ಕಾಗಲ, ಬೆನಕಾ ಗೌಡ, ಸಾವೇರ ನೊರೊನ್ಹಾ, ಗಜಾನನ ನಾಯ್ಕ, ರಾಜೇಶ ಮಡಿವಾಳ, ಮಂಜುನಾಥ ಕುಮಟಾಕರ್, ಮಾರುತಿ ಶೇಟ್, ತಿಮ್ಮಪ್ಪ ಮುಕ್ರಿ, ಮಹಮದ್ ಆಝಾದ್ ಶೇಖ್ ಮಾತನಾಡಿ, ಮೀನುಗಾರರು ನಡೆಸುತ್ತಿರುವ ಪ್ರತಿಭಟನೆಗೆ ನಾವು ಬೆಂಬಲಿಸುತ್ತೇವೆ. ಆದರೆ, ಪ್ರತಿದಿನ ಮೀನು ತಿನ್ನದೇ ಇದ್ದರೂ ಭಾನುವಾರದಂದು ಮೀನು ತಿನ್ನಬೇಕೆಂದು ನಮಗೆ ಆಸೆಇರುತ್ತದೆ. ಮೀನುಗಾರರ ಪ್ರತಿಭಟನೆಯಿಂದ ಮಾರುಕಟ್ಟೆಯಲ್ಲಿ ಮೀನಿನ ವ್ಯಾಪಾರ ಸ್ಥಗಿತಗೊಂಡಿರುವುದರಿಂದ ಚಿಕಿನ ಖರೀದಿಸುವುದು ನಮಗೆ ಅನಿವಾರ್ಯವಾಗಿದೆ ಎಂದರು. 

   ಈ ಕುರಿತು "ಕನ್ನಡಮ್ಮ" ಪತ್ರಿಕೆಗೆ ಪ್ರತಿಕ್ರಿಯಿಸಿದ ಮೀನುಗಾರ ಮಹಿಳೆ ಮಂಗ್ಲಿ ಹರಿಕಂತ್ರ ಅವರು, ಡಿಸೆಂಬರ್ 13 ರಂದು ರಾತ್ರಿ ಮಲ್ಪೆಯ ಸುವರ್ಣ ತ್ರಿಭುಜ ಬೋಟ್ನಲ್ಲಿ ಆಳ ಸಮುದ್ರದ ಮೀನುಗಾರಿಕೆಗೆ ತೆರಳಿದ 7 ಮೀನುಗಾರರು ನಾಪತ್ತೆಯಾಗಿದ್ದು, ಅವರನ್ನು ಶೋಧಿಸುವಲ್ಲಿ ರಾಜ್ಯ ಹಾಗೂ ಕೇಂದ್ರ ಸಕರ್ಾರ ನಿರ್ಲಕ್ಷ್ಯ ತೋರಿರುವುದರಿಂದ ಮಲ್ಪೆಯಲ್ಲಿ ಬೃಹತ್ ಪ್ರತಿಭಟನೆ ಕೈಗೊಂಡಿರುವುದರಿಂದ ಮೀನು ಮಾರುಕಟ್ಟೆಯಲ್ಲಿ ಮೀನು ವ್ಯಾಪಾರ ಸ್ಥಗಿತಗೊಳಿಸಲಾಗಿದೆ ಎಂದು ತಿಳಿದರು.