ಮಾಸ್ಕೋ, ಏ 9, ಮಾಲ್ಟಾದಲ್ಲಿ ಕೊರೊನಾ ವೈರಾಣು ಸೋಂಕು ತಗುಲಿ ಓರ್ವ ವ್ಯಕ್ತಿ ಮೃತಪಟ್ಟಿದ್ದು ಇದು ಅಲ್ಲಿನ ಮೊದಲ ಸಾವಿನ ಪ್ರಕರಣವಾಗಿದೆ ಎಂದು ವರದಿಯಾಗಿದೆ. ಮೃತ ಮಹಿಳೆಗೆ 92 ವರ್ಷ ವಯಸ್ಸಾಗಿದ್ದು ಅವರು ಸಕ್ಕರೆ ಕಾಯಿಲೆ, ಹೃದ್ರೋಗ ಇತ್ತು ಎಂದು ಅಲ್ಲಿನ ಆರೋಗ್ಯ ಸಚಿವರು ತಿಳಿಸಿದ್ದಾರೆ. ಈವರೆಗೆ ಮಾಲ್ಟಾದಲ್ಲಿ 299 ಜನರಲ್ಲಿ ಸೋಂಕು ದೃಢಪಟ್ಟಿದ್ದು ಐವರು ಗುಣಮುಖರಾಗಿದ್ದಾರೆ. ಮಾರ್ಚ್ 11 ರಂದು ವಿಶ್ವ ಆರೋಗ್ಯ ಸಂಸ್ಥೆ ಡಬ್ಲ್ಯು ಎಚ್ ಒ ಕೋವಿಡ್ 19 ಅನ್ನು ಸಾಂಕ್ರಾಮಿಕ ಎಂದು ಘೋಷಿಸಿತ್ತು. ಈವರೆಗೆ ಜಗತ್ತಿನಾದ್ಯಂತ 15 ಲಕ್ಷಕ್ಕೂ ಹೆಚ್ಚು ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು 87000 ಜನರು ಮೃತಪಟ್ಟಿದ್ದಾರೆ ಎಂದು ಜಾನ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ವರದಿ ಮಾಡಿದೆ.