ಕೊರೊನಾ ಸಾಂಕ್ರಾಮಿಕ ರೋಗ ಕುರಿತಂತೆ ವಿಶ್ವಸಂಸ್ಥೆ ಭದ್ರತಾ ಮಂಡಳಿ ಮೊದಲ ಸಭೆ

ವಿಶ್ವಸಂಸ್ಥೆ, ಏ 10,ವಿಶ್ವಸಂಸ್ಥೆ ಭದ್ರತಾ ಮಂಡಳಿ ಶುಕ್ರವಾರ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಕೊರೊನಾ ವೈರಾಣು ಸೋಂಕು ಸಾಂಕ್ರಾಮಿಕ ರೋಗ ಕುರಿತಂತೆ ಮೊದಲ ಸಭೆ ನಡೆಸಿದೆ.
ಕೋವಿಡ್ 19 ಸಾಂಕ್ರಾಮಿಕ ಕುರಿತಂತೆ ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಭೆ ನಡೆದಿದ್ದು ವಿಶ್ವಸಂಸ್ಥೆ ಪ್ರಧಾನಕಾರ್ಯದರ್ಶಿ ಸಂಕ್ಷಿಪ್ತ ವಿವರ ನೀಡಿದ್ದಾರೆ ಎಂದು ಯುಎನ್ಎಸ್ ಸಿ ಯ ಡಾಮಿಯನ್ ರಿಪಬ್ಲಿಕ್ ಟ್ವೀಟ್ ತಿಳಿಸಿದೆ.ಕೊರೊನಾ ಸೋಂಕಿನ ಸಂದರ್ಭದಲ್ಲಿನ ಶಾಂತಿ ಮತ್ತು ಭದ್ರತೆಯ ನಿರ್ಣಾಯಕ ಪರಿಣಾಮಗಳಿಗೆ ಭದ್ರತಾ ಮಂಡಳಿ ಮಹತ್ವದ ಪಾತ್ರ ವಹಿಸಲಿದೆ ಎಂದು ಗ್ಯುಟೆರಸ್ ಇದೇ ವೇಳೆ ಹೇಳಿದ್ದಾರೆ.ಈ ಮಧ್ಯೆ ಒಗ್ಗಟ್ಟಿನ ಸಂಕೇತ ಮತ್ತು ಮಂಡಳಿಯಿಂದ ಪರಿಹಾರ ಹೆಚ್ಚು ಪರಿಣಾಮಕಾರಿಯಾಗಿರಲಿದೆ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ