ವರ್ಷದ ಮೊದಲ ಚಂದ್ರ ಗ್ರಹಣ ನಾಳೆ ಗೋಚರ

ನವದೆಹಲಿ, ಜನವರಿ 9, ಈ ವರ್ಷದ ಮೊದಲ ಚಂದ್ರಗ್ರಹಣ ಶುಕ್ರವಾರ (ನಾಳೆ)  ಸಂಭವಿಸಲಿದ್ದು, ಭಾರತ, ಆಫ್ರಿಕಾ, ಯುರೋಪ್ ಮತ್ತು ಆಸ್ಟ್ರೇಲಿಯಾದಲ್ಲಿ ಇದು ಗೋಚರವಾಗಲಿದೆ. ನಾಳೆ ರಾತ್ರಿ  10ಗಂಟೆಯ ನಂತರ   ಚಂದ್ರಗ್ರಹಣ ಸಂಭವಿಸಲಿದೆ. ರಾತ್ರಿ 10.37ಕ್ಕೆ ಶುರುವಾಗಿ ಜ.11ಮುಂಜಾನೆವರೆಗೆ  ಗ್ರಹಣ ಜರುಗಲಿದೆ .ಸೂರ್ಯ ಮತ್ತು ಚಂದ್ರರ ನಡುವೆ ಭೂಮಿ ಬಂದಾಗ ಈ ಗ್ರಹಣ ಸಂಭವಿಸಲಿದೆ, ಭೂಮಿಯ ನೆರಳು ಚಂದ್ರನ ಮೇಲೆ ಬೀಳುತ್ತದೆ. ಈ ಸಂದರ್ಭದಲ್ಲಿ ಚಂದ್ರ ಸಾಮಾನ್ಯಕ್ಕಿಂತ ಹೆಚ್ಚು ದೊಡ್ಡದಾಗಿ ಗೋಚರವಾಗಲಿದೆ. ಸೂರ್ಯಗ್ರಹಣದಂತೆ ಚಂದ್ರಗ್ರಹಣವನ್ನು ನಾವು ಕಾಣಬಹುದು. ವಿಶೇಷ ಎಂದರೆ ಇದನ್ನು ಬರೀ ಗಣ್ಣಿನಿಂದ ನೋಡಲು ಸಾಧ್ಯ. ಬರೀಗಣ್ಣಿಗೆ ಗೋಚರವಾಗುವ ಈ ಚಂದ್ರಗ್ರಹಣವನ್ನು ಮಸೂರ ಬಳಸಿ ನೋವುವುದು  ಉತ್ತಮ ಎಂಬುದು ತಜ್ಞರ ಸಲಹೆ. ಇದೆ ವರ್ಷದಲ್ಲಿ ಇನ್ನೂ  ಚಂದ್ರಗ್ರಹಣ ಸಂಭವಿಸಲಿದ್ದು, ಮೊದಲ ಚಂದ್ರಗ್ರಹಣ ನಾಳೆ ಸಂಭವಿಸಿದರೆ, ಜೂನ್ 5, ಜುಲೈ 5 ಹಾಗೂ ನವೆಂಬರ್ 30 ರಂದು ಉಳಿದ ಮೂರು ಗ್ರಹಣ ಗೋಚರವಾಗಲಿವೆ.