ನವದೆಹಲಿ, ಸೆ 17 ಪ್ರಧಾನಿ ನರೇಂದ್ರ ಮೋದಿ ಅವರ ಜೀವನಗಾಥೆ ಆಧರಿಸಿ ನಿರ್ಮಾಣವಾಗುತ್ತಿರುವ 'ಮನ್ ಬೈರಾಗಿ' ಚಿತ್ರದ ಫಸ್ಟ್ ಲುಕ್ ಅನ್ನು ಬಾಲಿವುಡ್ ನಟ ಅಕ್ಷಯ್ ಕುಮಾರ್ ಮಂಗಳವಾರ ಬಿಡುಗಡೆಗೊಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರ 69ನೇ ಜನ್ಮದಿನದಂದು ಈ ಕುರಿತು ಟ್ವೀಟ್ ಮಾಡಿರುವ ಅಕ್ಷಯ್ ಕುಮಾರ್, ಸಂಜಯ್ ಲೀಲಾ ಬನ್ಸಾರಿ ಹಾಗೂ ಮಹಾವೀರ್ ಜೈನ್ ಅವರ ವಿಶೇಷ ಚಿತ್ರ ಮನ್ ಬೈರಾಗಿಯ ಫಸ್ಟ್ ಲುಕ್ ಬಿಡುಗಡೆಗೊಳಿಸಿದ್ದು ಅತ್ಯಂತ ಸಂತೋಷ ತಂದಿದೆ ಎಂದು ಹೇಳಿದ್ದು, ಫಸ್ಟ್ ಲುಕ್ ಪೋಸ್ಟರ್ ಅನ್ನು ಶೇರ್ ಮಾಡಿದ್ದಾರೆ.
ಬನ್ಸಾಲಿ ಪ್ರೊಡಕ್ಷನ್ಸ್ ನೀವು ತಿಳಿದಿರುವ ವ್ಯಕ್ತಿಯ ತಿಳಿಯದ ಕ್ಷಣಗಳನ್ನು ಹೊಂದಿರುವ ನಮ್ಮ ಮುಂದಿನ ನಿರ್ಮಾಣದ ಚಿತ್ರದ ಮೊದಲ ನೋಟವನ್ನು ಮಹಾವೀರ್ ಜೈನ್ ಅವರೊಂದಿಗೆ ಪ್ರಸ್ತುತಪಡಿಸುತ್ತಿದ್ದೇವೆ, 'ಮನ್ ಬೈರಾಗಿ' ನಮ್ಮ ಪ್ರಧಾನಮಂತ್ರಿಯ ಜೀವನದ ನಿರ್ಣಾಯಕ ಕ್ಷಣಗಳಿಗೆ ಮೀಸಲಾಗಿರುವ ವಿಶೇಷ ಚಿತ್ರ 'ಹ್ಯಾಪಿ ಬತರ್್ಡೇ ಪ್ರಧಾನಿ ಮೋದಿ' ಎಂದು ಟ್ವೀಟ್ ಮಾಡಿದೆ.
ಮನ್ ಬೈರಾಗಿಯ ಫಸ್ಟ್ ಲುಕ್ ಪೋಸ್ಟರ್ ಅನ್ನು ನಟ ಪ್ರಭಾಸ್ ಇನ್ ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ್ದು, ಈ ವಿಶೇಷ ದಿನದಂದು ವಿಶೇಷ ವ್ಯಕ್ತಿಯ ವಿಶೇಷ ನಿರ್ಮಾಪಕರೊಬ್ಬರ ವಿಶೇಷ ಚಿತ್ರ, ಜನ್ಮದಿನದ ಶುಭಾಶಯಗಳು ನರೇಂದ್ರ ಮೋದಿ ಸರ್ ಎಂದು ಬರೆದುಕೊಂಡಿದ್ದಾರೆ ಹಾಗೂ ಪ್ರಧಾನಮಂತ್ರಿಯವರ ಬಗ್ಗೆ ಕೇಳಿರದ ವಿಚಾರಗಳನ್ನು ತಿಳಿಸುತ್ತಿರುವ ಸಂಜಯ್ ಲೀಲಾ ಬನ್ಸಾಲಿ ಮತ್ತು ಮಹಾವೀರ್ ಜೈನ್ ಅವರ 'ಮನ್ ಬೈರಾಗಿ' ಫಸ್ಟ್ ಲುಕ್ ಅನ್ನು ಪ್ರಸ್ತುತಪಡಿಸಲು ಸಂತೋಷವಾಗಿದೆ. ಸಂಜಯ್ ತ್ರಿಪಾಠಿ ನಿರ್ದೇಶಿಸಿದ್ದಾರೆ ಎಂದು ತಿಳಿಸಿದ್ದಾರೆ
ಸಂಜಯ್ ತ್ರಿಪಾಠಿ ನಿರ್ದೇಶನ ಹಾಗೂ ಸಂಜಯ್ ಲೀಲಾ ಬನ್ಸಾಲಿ ಮತ್ತು ಮಹಾವೀರ್ ಜೈನ್ ಬಂಡವಾಳ ಹೂಡಿರುವ 'ಮನ್ ಬೈರಾಗಿ' ಚಿತ್ರ ಚಳಿಗಾಲದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.