ಮುಂಬೈ, ಸೆ 14 ವಾಣಿಜ್ಯ ನಗರಿ ಮುಂಬೈನ ಕಾಟನ್ ಗ್ರೀನ್ ರೈಲ್ವೆ ನಿಲ್ದಾಣದ ಹೊರಗಡೆ ಇರುವ ಪಾದಚಾರಿ ಮೇಲ್ಸೇತುವೆ ಮಾರ್ಗದಲ್ಲಿ ಶನಿವಾರ ಬೆಳಗ್ಗೆ ಬೆಂಕಿ ಕಾಣಿಸಿಕೊಂಡಿದೆ. ಎರಡು ಅಗ್ನಿಶಾಮಕ ವಾಹನಗಳ ಮೂಲಕ ಬೆಂಕಿಯ ಜ್ವಾಲೆ ನಂದಿಸಲಾಯಿತು. ಒಂದು ಗಂಟೆಯೊಳಗೆ ಪರಿಸ್ಥಿತಿ ಹತೋಟಿಗೆ ಬಂದಿತು ಎಂದು ವರದಿಯಾಗಿದೆ. ಈವರೆಗೆ ಯಾವುದೇ ಸಾವು ನೋವಿನ ವರದಿ ಲಭ್ಯವಾಗಿಲ್ಲ.