ನವದೆಹಲಿ,ಸೆಪ್ಟೆಂಬರ್ 18 ಭಾರತಿಯ ಸಿನಿಮಾರಂಗದಲ್ಲಿ ಭಯಾನಕ ಚಿತ್ರಗಳಿಗೆ ಹೆಸರುವಾಸಿಯಾಗಿದ್ದ ಚಲನಚಿತ್ರ ನಿರ್ಮಾಪಕ ಶ್ಯಾಮ್ ರಾಮ್ಸೆ ಮುಂಬೈನಲ್ಲಿ ಬುಧವಾರ ನಿಧನಹೊಂದಿದರು ಅವರಿಗೆ 67 ವರ್ಷ ವಯಸ್ಸಾಗಿತ್ತು.
ಕೆಲ ಕಾಲದಿಂದ ನ್ಯುಮೋನಿಯಾದಿಂದ ಬಳಲುತ್ತಿದ್ದ ಅವರು ಮುಂಬೈನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.1970 ಮತ್ತು 1980 ರ ದಶಕಗಳಲ್ಲಿ ಭಾರತೀಯ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಏಳು ಜನ ರಾಮ್ಸೇ ಸಹೋದರರಲ್ಲಿ ಶಾಮ್ ರಾಮ್ಸೆ ಸಹ ಒಬ್ಬರಾಗಿದ್ದರು. ಶ್ಯಾಮ್ ಅವರನ್ನು ಈ ಗುಂಪಿನ ಮುಖ್ಯ ಕಲಾವಿದರೆಂದೂ ಗುರುತಿಸಲಾಗಿತ್ತು. ಅವರು ಪುರಾನಿ ಹವೇಲಿ'ವೀರಾನ 'ದರ್ವ್ಜಾಪುರಾಣ ಮಂದಿರ ಎಂಬ ಭಯಾನಕ ಚಲನಚಿತ್ರಗಳನ್ನು ನಿರ್ಮಿಸಿದ್ದರು.