ಲೋಕದರ್ಶನ ವರದಿ
ಬೆಳಗಾವಿ 23: ನಾಯ್ಕರ್ ಎಜ್ಯುಕೇಶನ್ ಸೊಸೈಟಿಯ ರವೀಂದ್ರನಾಥ ಟ್ಯಾಗೋರ್ ಪಿಯು ಕಾಲೇಜು ಅರ್ಹ ಪ್ರತಿಭಾವಂತ ವಿದ್ಯಾಥರ್ಿಗಳಲ್ಲಿ ಸ್ಫೂತರ್ಿ ತುಂಬಿ ಜೀವನದಲ್ಲಿ ಬದಲಾವಣೆ ತರುವ ಗುರಿ ಹೊಂದಿದೆ. ಯುವಕರನ್ನು ಶಿಕ್ಷಣವಂತರಾಗಿ ಮಾಡುವುದು ಕೇವಲ ಒಬ್ಬ ವಿದ್ಯಾಥರ್ಿ ಮಾತ್ರವಲ್ಲ, ಆತನ ಕುಟುಂಬ, ಸಮಾಜ ಹಾಗೂ ದೇಶದ ಮೇಲೆ ಪರಿಣಾಮ ಬೀರುತ್ತದೆ.
ಆದರೆ ಹೆಚ್ಚುತ್ತಿರುವ ಶೈಕ್ಷಣಿಕ ವೆಚ್ಚದಿಂದಾಗಿ ಅನೇಕ ಅರ್ಹ ವಿದ್ಯಾಥರ್ಿಗಳ ಉನ್ನತ ಶಿಕ್ಷಣದ ಕನಸು ಕನಸಾಗಿಯೇ ಉಳಿಯುತ್ತಿದೆ. ದೆಹಲಿಯ ಇನ್ಸ್ಟಿಟ್ಯೂಟ್ ಆಫ್ ಪಾಲಿಸಿ ರಿಸಚರ್್ ಸ್ಟಡೀಸ್ (ಪಿಆರ್ಎಸ್) ಕೈಗೊಂಡಿರುವ ಅಧ್ಯಯನದ ಪ್ರಕಾರ 10ನೇ ತರಗತಿಗೆ ಪ್ರವೇಶ ಪಡೆದ ಶೇ. 77 ವಿದ್ಯಾಥರ್ಿಗಳಲ್ಲಿ ಕೇವಲ ಶೇ. 52 ರಷ್ಟು ವಿದ್ಯಾಥರ್ಿಗಳು ಮಾತ್ರ 11 ನೇ ತರಗತಿಗೆ ಪ್ರವೇಶ ಪಡೆಯುತ್ತಾರೆ. ತರಗತಿಯಿಂದ ಹೊರಗುಳಿಯುವ ವಿದ್ಯಾಥರ್ಿಗಳ ಭಾರಿ ಸಂಖ್ಯೆ ವಿದ್ಯಾಥರ್ಿ ವೇತನದ ಅಗತ್ಯತೆಯನ್ನು ನಿಚ್ಚಳವಾಗಿ ತೋರಿಸುತ್ತದೆ.
ನಾಯ್ಕರ್ ಎಜ್ಯುಕೇಶನ್ ಸೊಸೈಟಿಯ ರವೀಂದ್ರನಾಥ ಟ್ಯಾಗೋರ್ ಪಿಯು ಕಾಲೇಜು ವೃತ್ತಪರ ಶಿಕ್ಷಣಕ್ಕೆ ಹೆಸರು ನೋಂದಾಯಿಸಿರುವ ಪ್ರತಿಭಾವಂತ ಬಡ ವಿದ್ಯಾಥರ್ಿಗಳಿಗಾಗಿ ವಿದ್ಯಾಥರ್ಿ ವೇತನ ಯೋಜನೆ ತಂದಿದೆ. ಪ್ರತಿಭೆ ಆಧಾರದಲ್ಲಿ ಭಾರತದಲ್ಲಿ ಪ್ರವೇಶ ಪಡೆದ ಅರ್ಹ ವಿದ್ಯಾಥರ್ಿಗಳಿಗೆ ಸಹಾಯ ಮಾಡುವುದು ಯೋಜನೆ ಉದ್ದೇಶವಾಗಿದೆ. ವಿದ್ಯಾಥರ್ಿ ವೇತನವನ್ನು ಪದವಿ ಪೂರ್ವ ವಿಜ್ಞಾನ ಹಾಗೂ ವಾಣಿಜ್ಯ ವಿಷಯ ಅಭ್ಯಸಿಸುತ್ತಿರುವ ವಿದ್ಯಾಥರ್ಿಗಳಿಗೆ ನೀಡಲಾಗುತ್ತದೆ. ವಿದ್ಯಾಥರ್ಿ ವೇತನಕ್ಕಾಗಿ ಆಸಕ್ತರು ದಿ.25 ರಂದು ಮಧ್ಯಾಹ್ನ 3 ಗಂಟೆಯಿಂದ 5 ಗಂಟೆ ಮಧ್ಯೆ ಬೆಳಗಾವಿಯ ರವೀಂದ್ರನಾಥ ಟ್ಯಾಗೋರ್ ಪಿಯು ಕಾಲೇಜಿನಲ್ಲಿ ಹೆಸರು ನೋಂದಾಯಿಸಬೇಕು.