ತುಂಬಿದ ಹಿಡಕಲ್ ಜಲಾಶಯ: 9,000 ಕ್ಯೂಸೆಕ್ಸ್ ನೀರು ಹೊರಕ್ಕೆ


ಉಳ್ಳಾಗಡ್ಡಿ-ಖಾನಾಪೂರ 08: ಬೆಳಗಾವಿ ಹಾಗೂ ಬಾಗಲಕೋಟ ಜಿಲ್ಲೆಗಳ ಜೀವನಾಡಿಯಾದ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ [ಹಿಡಕಲ್] ರಾಜಾಲಖಮಗೌಡಾ ಜಲಶಯದಿಂದ ಬುಧವಾರ ಸಂಜೆ ಜಲಾಶಯದ ಹತ್ತು ಕ್ರಸ್ಟ್ ಗೇಟ್ ಗಳಿಂದ 9 ಸಾವೀರ ಕ್ಯೂಸೆಕ್ಷ್ ಜಲರಾಶಿಯನ್ನು ಇಂದು ಜಲಾಶಯದಿಂದ ಹೊರಕ್ಕೆ ಬಿಡಲಾಯಿತು,

ಕಳೆದ ನಾಲ್ಕುವರ್ಷಗಳಲ್ಲಿ ಇಷ್ಟೊಂದು ನೀರು ಜಲಾಶಯಕ್ಕೆ ಹರಿದು ಬಂದಿರಲಿಲ್ಲ  ಆದರೆ ಈ ಬಾರಿ ಘಟಪ್ರಭಾ ನದಿಯಿಂದ ಮಹಾರಾಷ್ಟ್ರದ ಘಟಪ್ರದೇಶಗಳಲ್ಲಿ ಭಾರಿ ಮಳೆಯಾದ ಹಿನ್ನೆಲೆಯಲ್ಲಿ ಸುಮಾರು 9 ಸಾವೀರ ಕ್ಯೂಸೆಕ್ಸ್ ನೀರು ಹಿನ್ನಿರಿನ ಪ್ರದೇಶದಿಂದ ಹರಿದು ಬರುತ್ತಿದ್ದು ಹರಿದು ಬರುತ್ತಿರುವ 9 ಸಾವೀರ ಕ್ಯೂಸೆಕ್ಸ್ ನೀರನ್ನು ಘಟಪ್ರಭಾ ನದಿಗೆ ಇಂದು ಹರಿಬಿಡಲಾಯಿತು,

51 ಟಿಎಮ್ಸಿ ನೀರು ಜಲಾಸಯದಲ್ಲಿ ಸಂಗ್ರಹವಾದ ಹಿನ್ನೆಲೆಯಲ್ಲಿ ಈ ನೀರನ್ನು ಘಟಪ್ರಭಾ ನದಿಗೆ ಹರಿಬಿಡಲಾಗಿದೆಗಿದೆ ಎಂದು ಜಲಾಶಯದ ಸಹಾಯಕ ಅಭಿಯಂತರರಾದ ಅಲೋಕಶೆಟ್ಟಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ  ಮುಖ್ಯ ಅಭಿಯಂತರರಾದ ಎಮ್,ನಾರಾಯಣ ಹಾಗೂ ಅಧೀಕ್ಷಕರಾದ ಸಿ,ಬಿ,ಹೀರೇಮಠ, ಹಾಗೂ ಹಿಡಕಲ್ ಡ್ಯಾಂ ನ ಮಹಾಮಂಡಳದ ಅಧ್ಯಕ್ಷರು ಉಪಾಧ್ಯಕ್ಷರು ನಿದೇಶಕ ಮಂಡಳಿಯವರು ಉಪಸ್ಥಿತರಿದ್ದರು.