ವಿಜಯಪುರ 14: ಆನೆಕಾಲು ರೋಗವನ್ನು ಸಂಪೂರ್ಣವಾಗಿ ನಿಯಂತ್ರಿಸಬಹುದಾಗಿದೆ ಎಂದು ಬಿ.ಎಲ್.ಡಿ.ಇ. ಡೀಮ್ಡ್ ವಿಶ್ವವಿದ್ಯಾಲಯದ ಬಿ. ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯದ ಶಸ್ತ್ರಚಿಕಿತ್ಸಾ ವಿಭಾಗದ ಸಹಾಯಕ ಪ್ರಾಧ್ಯಾಪಕ ಮತ್ತು ಪ್ಲಾಸ್ಟಿಕ್ ಸರ್ಜನ್ ಡಾ. ಅನಿಕೇತನ ವಲ್ಲಭ ಹೇಳಿದ್ದಾರೆ.
ಮಂಗಳವಾರ ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯದ ಶಸ್ತ್ರಚಿಕಿತ್ಸೆ ವಿಭಾಗದ ವತಿಯಿಂದ, ನಗರದ ಸರಕಾರಿ ಬಾಲಕಿಯರ ಪದವಿ ಪೂರ್ವ ಮಹಾವಿದ್ಯಾಲಯದ ಸ್ಕೌಟ್ಸ್ ಮತ್ತುಗೈಡ್ಸ್ ಹಾಗೂ ಎನ್.ಎಸ್.ಎಸ್ ಸಹಯೋಗದೊಂದಿಗೆ ದುಗ್ಧರಸ ಆನೆಕಾಲು ರೋಗ (ಫೈಲೇರಿಯಾಸಿಸ್) ಕುರಿತು ಆಯೋಜಿಸಲಾಗಿದ್ದ ಆರೋಗ್ಯ ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಆನೆಕಾಲು ರೋಗವು ವುಚೆರೇರಿಯಾ ಬ್ಯಾಂಕ್ರಾಫ್ಟಿ ಎಂಬ ಪರಾವಲಂಬಿ ಜೀವಿಯಿಂದ, ಕ್ಯೂಲೆಕ್ಸ ಎಂಬ ಸೊಳ್ಳೆ ಕಡಿತದಿಂದ, ಮನುಷ್ಯರಿಗೆ ಸಾಂಕ್ರಾಮಿಕವಾಗಿ ಹರಡುವ ಕಾಯಿಲೆಯಾಗಿದೆ. ಸ್ವಚ್ಛ ಭಾರತ, ಸ್ವಸ್ಥ ಭಾರತ ಎಂಬ ಧ್ಯೇಯದೊಂದಿಗೆ, ಪರಿಸರದ ಸ್ವಚ್ಛತೆಯನ್ನುಕಾಪಾಡಿದರಿದಇದನ್ನು ಸಂಪೂರ್ಣವಾಗಿ ನಿಯಂತ್ರಿಸಬಹುದಾಗಿದೆ. ಈ ರೋಗವು ಶರೀರವನ್ನು ವಿಕಾರಗೊಳಿಸಿ, ದೈನಂದಿನ ಚಟುವಟಿಕೆಗಳಿಗೆ ತೊಂದರೆಯನ್ನುಂಟು ಮಾಡುತ್ತದೆಎಂದು ಹೇಳಿದ ಅವರು, ಈ ರೋಗಕ್ಕೆ ಲಭ್ಯವಿರುವ ನಾನಾ ರೀತಿಯ ಶಸ್ತ್ರಚಿಕಿತ್ಸೆ ಪದ್ಧತಿಗಳನ್ನು ಪ್ರಾತ್ಯಕ್ಷಿಕೆಯೊಂದಿಗೆ ವಿವರಿಸಿದರು.
ಶಸ್ತ್ರಚಿಕಿತ್ಸೆ ವಿಭಾಗದ ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿ ಡಾ. ಹೇಮಂತ, ಆನೆಕಾಲು ರೋಗವು ಹರಡುವ ವಿಧಾನ, ಪರಾವಲಂಬಿ ಜೀವಿಯ ಜೀವನಚಕ್ರ, ರೋಗದ ವಿವಿಧ ಗುಣಲಕ್ಷಣಗಳು, ಅದನ್ನು ಕಂಡು ಹಿಡಿಯುವ ಬಗೆ, ರೋಗವನ್ನು ನಿಯಂತ್ರಿಸುವ ವಿಧಾನಗಳು ಹಾಗೂ ಡಿ.ಇ.ಸಿ ಜೊತೆಗೆ ಅದರ ಇತರ ಓಫಧಿ ಚಿಕಿತ್ಸಾ ಪದ್ಧತಿಗಳ ಕುರಿತು ಮಾಹಿತಿ ನೀಡಿದರು.
ಕಾಲೇಜಿನ ಪ್ರಾಚಾರ್ಯ ಸಿ. ಬಿ. ನಾಟೀಕಾರ ಮಾತನಾಡಿ, ಬಿ.ಎಲ್.ಡಿ.ಇ. ಆಸ್ಪತ್ರೆಯಜನಾನುರಾಗಿ ಕಾರ್ಯಗಳು ಮತ್ತು ನಿರಂತರಆರೋಗ್ಯಅರಿವು ಕಾರ್ಯಕ್ರಮಗಳ ಆಯೋಜನೆಯನ್ನು ಶ್ಲಾಘಿಸಿದರು.
ಪ್ಸಾಸ್ತಾವಿಕವಾಗಿ ಮಾತನಾಡಿದಕಾಲೇಜಿನ ಸ್ಕೌಟ್ಸ್ ಮತ್ತುಗೈಡ್ಸ್ ಲೀಡರ್ ಛಾಯಾಧೇವಿ ವಿದ್ಯಾಪುರ ಮಾತನಾಡಿ, ಈ ರೋಗ ನಿಯಂತ್ರಣ ಮತ್ತುಜಾಗೃತಿ ಕೈಗೊಳ್ಳಲು ಶಸ್ತ್ರಚಿಕಿತ್ಸೆ ವಿಭಾಗದ ಮುಖ್ಯಸ್ಥಡಾ. ಮಂಜುನಾಥಕೋಟೆಣ್ಣವರ ಮತ್ತು ಪ್ರಾಧ್ಯಾಪಕಿಯಾದಡಾ. ವಿಜಯಾ ಪಾಟೀಲ ಅವರ ಮಾರ್ಗದರ್ಶನವನ್ನು ಸ್ಮರಿಸಿದರು.
ಈ ಸಂದರ್ಭದಲ್ಲಿ ಉಪನ್ಯಾಸಕರಾದ ಎಸ್. ಎಸ್. ದೀಕ್ಷಿತ, ಎ. ಜಿ. ಸಕ್ರಿ ಮತ್ತು ಬಿ.ಎಲ್.ಡಿ.ಇ. ಆಸ್ಪತ್ರೆಯಕಿರಿಯ ವೈದ್ಯರು, ಸಂವಾದ ನಡೆಸಿದರು. ಈ ವೇಳೆ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಎನ್.ಎಸ್.ಎಸ್ ಸಂಚಾಲಕರಾದಡಾ. ಮಹಾದೇವಿ ಸುಂಗಾರೆ ವಂದಿಸಿದರು.