ಐದನೆ ಹಂತದ ಲಾಕ್ ಡೌನ್ ವಿಸ್ತರಣೆ: ಸದ್ಯವೇ ತೀರ್ಮಾನ

ನವದೆಹಲಿ, ಮೇ  29, ಇನ್ನು ಕೆಲವೇ ಗಂಟೆಗಳಲ್ಲಿ   ನಾಲ್ಕನೆ ಹಂತದ ಲಾಕ್ ಡೌನ್ ಕೊನೆಗೊಳ್ಳಲಿದ್ದು, ದೇಶದಲ್ಲಿ  ಐದನೇ  ಹಂತದ ಲಾಕ್ ಡೌನ್ ವಿಸ್ತರಣೆ  ಕುರಿತು ಇಂದು ಗೃಹ ಸಚಿವ ಅಮಿತ್ ಶಾ ಪ್ರಧಾನಿ ನರೇಂದ್ರ ಮೋದಿ ಮಹತ್ವದ ಮಾತುಕತೆ ನಡೆಸಿದ್ದು ಕೇಂದ್ರದ ತೀರ್ಮಾನ ಸದ್ಯವೇ  ಪ್ರಕಟವಾಗಲಿದೆ.  ಇದಕ್ಕ್ಕೂ ಮೊದಲು ಗೃಹ ಸಚಿವರು  ಎಲ್ಲಾ ರಾಜ್ಯದ ಮುಖ್ಯಮಂತ್ರಿಗಳ ಜೊತೆಗೆ ಮಾತುಕತೆ ಮಾಡಿದ್ದಾರೆ. ಇದೀಗ ಮುಖ್ಯಮಂತ್ರಿಗಳ ಅಭಿಪ್ರಾಯವನ್ನು ತಿಳಿಸಿ, ಅಂತಿಮ ನಿರ್ಧಾರ ಕೈಗೊಳ್ಳಲು ಅನುವಾಗುವಂತೆ ಪ್ರಧಾನಿ ನರೇಂದ್ರ ಮೋದಿಯವರ ಜೊತೆ ಚರ್ಚೆ ನಡೆಸಿದ್ದಾರೆ. ಬೆಂಗಳೂರು  ನಗರ ಸೇರಿದಂತೆ ದೇಶದ  ಪ್ರಮುಖ 11 ನಗರಗಳಲ್ಲಿ ಇನ್ನು ಎರಡು ವಾರ  ಲಾಕ್ ಡೌನ್ ವಿಸ್ತರಿಸಲು ಕೇಂದ್ರ ತೀರ್ಮಾನಿಸಿದ್ದು ಇನ್ನು ಒಂದೆರಡು ದಿನಗಳಲ್ಲಿ  ಈ ಕುರಿತು  ಅಂತಿಮ ತೀರ್ಮಾನ ಹೊರಬರಲಿದೆ ಎಂದೂ  ಹೇಳಲಾಗಿದೆ.