ಡಾಽಽ ಪಂಡಿತ್ ಪುಟ್ಟರಾಜ ಕವಿ ಗವಾಯಿಗಳವರ ಹದಿನೈದನೇ ಸ್ವರ ಶ್ರದ್ದಾಂಜಲಿ ಕಾರ್ಯಕ್ರಮ
ಕೊಟ್ಟೂರು 08: ನಗರದ ಚಿರಿಬಿ ರಸ್ತೆಯಲ್ಲಿರುವ ಇಂದು ಕಾಲೇಜ್ ನಲ್ಲಿ 13.12.2024 ರ ಶುಕ್ರವಾರ ಸಂಜೆ 6ಕ್ಕೆ ಡಾ: ಪಂಡಿತ್ ಪುಟ್ಟರಾಜ ಕವಿ ಗವಾಯಿಗಳವರ ಹದಿನೈದನೇ ಸ್ವರ ಶ್ರದ್ಧಾಂಜಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆಯೆಂದು ಡಾ: ಪಂಡಿತ್ ಪುಟ್ಟರಾಜ ಕವಿ ಗವಾಯಿಗಳವರ ಸೇವಾ ಸಮಿತಿಯ ಅಧ್ಯಕ್ಷರಾದ ಪ.ಪಂ. ಮಾಜಿ ಸದಸ್ಯ ಹಿರಿಯ ಮುಖಂಡ ಸುಧಾಕರ್ ಪಾಟೀಲ್ ಪತ್ರಿಕೆ ತಿಳಿಸಿದ್ದಾರೆ.
ಪತ್ರಿಕೆಯೊಂದಿಗೆ ಮಾತನಾಡಿದ ಸುಧಾಕರಾ ಪಾಟೀಲ್ ಉಭಯ ಗಾನ ವಿಶಾರದರು ತ್ರಿಭಾಷಾ ಕವಿವರ್ಯ, ಸಕಲ ವಾದ್ಯ ಕಂಠೀರವ ನಾಡೋಜ ಹಾಗೂ ಕಾಳಿದಾಸ ಪ್ರಶಸ್ತಿ ವಿಜೇತರು ಪರಮಪೂಜ್ಯ ಡಾ: ಪಂಡಿತ್ ಪುಟ್ಟರಾಜ ಗವಾಯಿಗಳವರ ಹದಿನೈದನೇ ಸ್ವರ ಶ್ರದ್ದಾಂಜಲಿ ಕಾರ್ಯಕ್ರಮವನ್ನು ದಿನಾಂಕ 13.12.2024ರ ಶುಕ್ರವಾರದಂದು ಸಂಜೆ 6 ಗಂಟೆಗೆ ಕೊಟ್ಟೂರಿನ ಚಿರಿಬಿ ರಸ್ತೆಯಲ್ಲಿರುವ ಇಂದು ಕಾಲೇಜ್ ಸಭಾಂಗಣದಲ್ಲಿ ಅಯೋಜನೆ ಮಾಡಲಾಗಿದ್ದು, ಅಂದು ಸಂಜೆ ಕನ್ನಡ ಕೋಗಿಲೆ ಕಾರ್ಯಕ್ರಮ ಖ್ಯಾತಿಯ ಗಾಯಕಿ ಕಲಾವತಿ ದಯಾನಂದ್ ಮತ್ತು ಸರಿಗಮಪ ಸೀಸನ್ 13ರ ಗಾಯಕಿ ಪೂಜಾ ವಿಭೂತಿಮಠ್ ಇವರಿಂದ ಸಂಗೀತ ಕಾರ್ಯಕ್ರಮವಿರುತ್ತದೆ ಆತ್ಮೀಯ ಕಲಾಭಿಮಾನಿಗಳು, ಕಲಾ ಪ್ರೋತ್ಸಾಹಕರ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಲು ಕೋರಿದ್ದಾರೆ. ಈ ಸಂಧರ್ಭದಲ್ಲಿ ಡಾ: ಪಂಡಿತ್ ಪುಟ್ಟರಾಜ ಕವಿ ಗವಾಯಿಗಳವರ ಸೇವಾ ಸಮಿತಿಯ ಕೆ.ಅಯ್ಯನಹಳ್ಳಿ ಗ್ರಾಮದ ಯುವ ಪ್ರತಿಭೆ ವಿನಯ್ , ಉದ್ಯಮಿಗಳಾದ ಯುವಮುಖಂಡ ಅಟವಾಳ್ಗಿ ಸಂತೋಷ್, ಕಾರ್ತಿಕ್, ಅಪ್ಪಾಜಿ ಅಟವಾಳ್ಗಿ ಜಗದೀಶ್, ಜರ್ನಾಧನ ಶೆಟ್ಟಿ, ಪ.ಪಂ. ಮಾಜಿ ಅಧ್ಯಕ್ಷರಾದ ಕಾಮಶೆಟ್ಟಿ ಕೊಟ್ರೇಶಿ ಹಣ್ಣಿನ ವ್ಯಾಪಾರಿ ಕಲಾಸಕ್ತರಾದ ಕೆ.ಎಂ.ಕೊಟ್ರಯ್ಯ, ಪೋರಜ್ಜ, ಅರಮನಿ ಮಹೇಶ್, ಪ್ರಭಾಕರಶೆಟ್ಟಿ ಎನ್. ಕೊಟ್ರೇಶಿ, ಸೇರಿದಂತೆ ಅನೇಕರು ಹಾಜರಿದ್ದು ಕಾರ್ಯಕ್ರಮ ಯಶಸ್ವಿಗೊಳಿಸಲು ಕಂಕಣಬದ್ಧರಾಗಿ ನಿಂತಿದ್ದಾರೆ.