ಜನ ಜಾಗೃತಿ ಮೂಡಿಸಲು ಕ್ಷೇತ್ರ ಪ್ರಚಾರ ಕಾರ್ಯಕ್ರಮ

ಗದಗ: ಗದಗ ಜಿಲ್ಲೆಯ ಶಿರಹಟ್ಟಿ  ತಾಲೂಕಿನಲ್ಲಿ  ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಗದಗ ಹಾಗೂ ಗ್ರಾಮ ಪಂಚಾಯತ ಮಾಗಡಿ ಇವರ ಸಹಯೋಗದಲ್ಲಿ ಗ್ರಾಮ ಸಂಪರ್ಕ ಯೋಜನೆ ಅಡಿಯಲ್ಲಿ ಜಾನಪದ ಮತ್ತು ಬೀದಿ ನಾಟಕದ ಮೂಲಕ ಸರ್ಕಾರದ ಯೋಜನೆಯ ಕುರಿತು ಜನ ಜಾಗೃತಿ ಮೂಡಿಸಲು ಕ್ಷೇತ್ರ ಪ್ರಚಾರ ಕಾರ್ಯಕ್ರಮವನ್ನು  ಗ್ರಾಮ ಪಂಚಾಯತ ಸದಸ್ಯರಾದ ಶಿವರಾಜಗೌಡ ಪಾಟೀಲ ಇವರು ಉದ್ಘಾಟಿಸಿದರು.

ಬಸವ ಬಳಗ ಜಾನಪದ ಕಲಾ ತಂಡ ಕೋತಬಾಳ ಹಾಗೂ ಜೈಭೀಮ ಗೀಗೀ ಮೇಳ ನೀಲಗುಂದ ಕಲಾ ತಂಡದವರು  ಗ್ರಾಮದ ಸ್ವಚ್ಚತೆ ಹಾಗೂ ಸರ್ಕಾರದ ವಿವಿಧ ಜನಪರ ಯೋಜನೆಗಳಾದ ಕಿಸಾನ್ ಸಮ್ಮಾನ್, ಸಹಾಯಧನ, ನೇಕಾರರು, ಮೀನುಗಾರರ ಸಾಲಮನಾ, ರೈತರ ಸಾಲಮನ್ನಾ,  ಆಯುಷ ಸಮ್ಮಾನ್ ಕಾರ್ಡ್ ಯೋಜನೆ, ವಿದ್ಯಾಶ್ರೀ ಯೋಜನೆ,ಮಾತೃ ಯೋಜನೆ, ಬೇಟಿ ಬಚಾವೋ ಬೇಟಿ ಪಡಾವೋ ಭಾಗ್ಯಶ್ರೀ ಯೋಜನೆ, ಗಂಗಾ ಕಲ್ಯಾಣ ಯೋಜನೆಗಳ  ಕುರಿತು ಆಯಾ ಇಲಾಖೆಯಲ್ಲಿ ಮಾಹಿತಿ ಪಡೆದು ರೈತರು ಇದರ ಸದುಪಯೋಗ ಪಡಿಸಿಕೊಳ್ಳಬೇಕು.  ಜನಪದ ಗೀತೆ ಹಾಗೂ ಬೀದಿ ನಾಟಕದ ಮೂಲಕ ಸಾರ್ವಜನಿಕರಿಗೆ ಜನಜಾಗೃತಿ ಕಾರ್ಯಕ್ರಮಗಳನ್ನು ಪ್ರಸ್ತುತಿಸಿದರು. ಈ ಸಂದರ್ಭದಲ್ಲಿ ಗ್ರಾ.ಪಂ ಸದಸ್ಯರಾದ ಶೇಖರಪ್ಪ ಬಡ್ನಿ ಗ್ರಾಮದ ಮುಖಂಡರಾದ ಶೇಕರಯ್ಯ ವಿಭೂತಿಮಠ ಗ್ರಾಮಪಂಚಾಯತ ಸಿಬ್ಬಂದಿಗಳಾದ ರವಿ ಕೋಟೆ, ದಾನಪ್ಪ ಹಡಪದ ಹಾಗೂ ವಾತರ್ಾ ಮತ್ತು ಸಂಪರ್ಕ ಇಲಾಖೆಯ ಸಿಬ್ಬಂದಿ ಎಮ್.ಟಿ.ನೇಮರಾಜ ಇದ್ದರು.