ಪರಿಷ್ಕೃತ ಜಾಗತಿಕ ಬಾಸ್ಕೆಟ್ ಬಾಲ್ ವೇಳಾಪಟ್ಟಿ ಘೋಷಿಸಿದ ಫಿಬಾ

ಮೈಸ್ (ಸ್ವಿಜರ್ಲೆಂಡ್), ಏ 10,ಕೋವಿಡ್ -19 ರೋಗ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ವಿಶ್ವ ಬಾಸ್ಕೆಟ್ ಬಾಲ್ ಆಡಳಿತ ಮಂಡಳಿ (ಎಫ್ ಬಿಎ) ತನ್ನ ಜಾಗತಿಕ ಬಾಸ್ಕೆಟ್  ಬಾಲ್ ವೇಳಾಪಟ್ಟಿಯ ನವೀಕರಿಸಿದ ಆವೃತ್ತಿಯನ್ನು ಶುಕ್ರವಾರ ಪ್ರಕಟಿಸಿದೆ.2020ರ ಟೋಕಿಯೊ ಒಲಿಂಪಿಕ್ ಕ್ರೀಡಾಕೂಟವನ್ನು ಮುಂದೂಡಿದ ಆಧಾರದ ಮೇರೆಗೆ  ಫಿಬಾ ಕಾರ್ಯಕಾರಿ ಸಮಿತಿ ವಿಡಿಯೊ ಸಮ್ಮೇಳನ ನಡೆಸಿ ಪರಿಷ್ಕೃತ ಬಾಸ್ಕೆಟ್ ಬಾಲ್ ವೇಳಾಪಟ್ಟಿ ಪ್ರಕಟಿಸುವ ಕುರಿತು ಒಪ್ಪಂದಕ್ಕೆ ಬಂದಿದೆ.ಫಿಬಾ ಒಲಿಂಪಿಕ್ ಅರ್ಹತಾ ಟೂರ್ನಿಗಳು  2021ರ ಜೂನ್ 22ರಿಂದ ಮತ್ತು ಜುಲೈ 24ರವರೆಗೆ ನಡೆಯಲಿದ್ದು, ನಿಖರವಾದ ದಿನಾಂಕಗಳನ್ನು ಘೋಷಿಸಲು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ)ಯ ಅನುಮೋದನೆಗೆ ಎದುರು ನೋಡುತ್ತಿದೆ.2021ರ ಫಿಬಾ ಯುರೋ ಬಾಸ್ಕೆಟ್  ಬಾಲ್ ಮತ್ತು ಫಿಬಾ ಅಮೆರಿಕ ಕಪ್ ಅನ್ನು 2022ರ ಸೆಪ್ಟೆಂಬರ್ 1 ಮತ್ತು 18 ನಡುವಿನ ಅವಧಿಗೆ ಮರು ನಿಗದಿಪಡಿಸಲಾಗಿದೆ.