ಬಳ್ಳಾರಿ 25: ಬಿಜೆಪಿಯ ಹಿರಿಯ ಕಾರ್ಯಕರ್ತೆ, ಸಮಾಜ ಸೇವಕಿ ಶೈಲಜಾ ಸೀತಾರಾಮ್ ಪಾಚಂಗೆ ಅವರಿಗೆ ಚಿತ್ರದುರ್ಗದಲ್ಲಿ ಕರ್ನಾಟಕ ರಾಜ್ಯ ಸಿಳ್ಳೆಕ್ಯಾತರ ಪರಿಶಿಷ್ಟ ಜಾತಿ ಅಭಿವೃದ್ಧಿ ಸಂಘದಿಂದ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಚಿತ್ರದುರ್ಗದ ಶ್ರೀ ರಾಘವೇಂದ್ರ ಸಭಾಂಗಣದಲ್ಲಿ ಹಮ್ಮಿಕೊಂಡ ನೂತನ ಪದಾಧಿಕಾರಿಗಳ ಕಾರ್ಯಕ್ರಮದಲ್ಲಿ ಸಂಘದ ರಾಜ್ಯಾಧ್ಯಕ್ಷರಾದ ಕೆ.ನಾಗಪ್ಪ, ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಶೈಲಜಾ ಸೀತಾರಾಮ್ ಪಾಚಂಗೆ, ಪ್ರಧಾನ ಕಾರ್ಯದರ್ಶಿಯಾಗಿ ವಿಲಾಸ್ ಸಿಂಧೆ, ಉಪಾಧ್ಯಕ್ಷರಾಗಿ ಶ್ರೀಕಾಂತ್ ದುರ್ವೇಕರ್, ಕೋಶಾಧಿಕಾರಿಯಾಗಿ ರಾಜು ಕವೇ, ಕಾನೂನು ಸಲಹೆಗಾರರಾಗಿ ಪಂಪಣ್ಣ ಪಾಚಂಗೆ ಅಯ್ಕೆಯಾಗಿದ್ದು ಇವರನ್ನು ಸಹಿತ ಇದೇ ವೇಳೆ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸಮುದಾಯದ ಹಿರಿಯ ಮುಖಂಡರಾದ ಕೆ.ರಾಮಮೂರ್ತಿ, ಶ್ರೀನಿವಾಸಮೂರ್ತಿ, ಮಹೇಂದ್ರರಾವ್ ಸಾಸನಿಕ್, ರಾಮಯ್ಯ, ಕರಿಬಸಪ್ಪ ಪಾಚಂಗೆ, ಕೌಶಲ್ಯ, ನಾಗರಾಜಪ್ಪ ಅಟಗ ಇನ್ನಿತರರು ಇದ್ದರು.