ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಉಪಾಧ್ಯಕ್ಷರಿಗೆ ಸತ್ಕಾರ

Felicitation for President and Vice President of Sugar Factory

ವರದಿ: ಎಂ.ಬಿ. ಘಸ್ತಿ 

ಸಂಕೇಶ್ವರ 20: ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಬಸವರಾಜ ಕಲ್ಲಟ್ಟಿ, ಉಪಾಧ್ಯಕ್ಷ ಅಶೋಕ ಪಟ್ಟಣಶೆಟ್ಟಿ ಇವರು ಎಸ್‌.ಡಿ.ವ್ಹಿ.ಎಸ್‌. ಸಂಘದ ಕಾರ್ಯಾಧ್ಯಕ್ಷ ಹಾಗೂ ಮಾಜಿ ಸಚಿವ ಎ.ಬಿ. ಪಾಟೀಲರನ್ನು ಇವರು ಭೆಟ್ಟಿ ಮಾಡಿ ಕಾಯಕಯೋಗಿ ದಿ. ಬಸಗೌಡಾ ಅಪ್ಪಯ್ಯಗೌಡಾ ಪಾಟೀಲರ ಪ್ರತಿಮೆಗೆ ಹೂಮಾಲೆಯನ್ನು ಹಾಕಿದರು. 

ಇದೇ ಸಂದರ್ಭದಲ್ಲಿ ಮಾಜಿ ಸಚಿವ ಎ.ಬಿ.ಪಾಟೀಲರು ದಿ. ಅಪ್ಪಣ್ಣಗೌಡಾ ಪಾಟೀಲ ಹುಟ್ಟು ಹಾಕಿದ ಕಾರ್ಖಾನೆಯನ್ನು ಸರಿಯಾಗಿ ಆಡಳಿತ ನಡೆಸಿ ದೇಶದಲ್ಲಿ ಹೆಸರುವಾಸಿ ಮಾಡಲು ತಾವು ಪ್ರಯತ್ನ ಮಾಡಬೇಕೆಂದು ಎ.ಬಿ.ಯವರು ಪದಾಧಿಕಾರಿಗಳಿಗೆ ತಿಳಿಸಿದರು.  

ಇದೇ ಸಂದರ್ಭದಲ್ಲಿ ಆರ್‌.ಬಿ. ಪಾಟೀಲ, ಶಿವನಾಯಕ ನಾಯಿಕ, ಸೋಮಶೇಖರ ಅರಬೋಳೆ ಉಪಸ್ಥಿತರಿದ್ದರು, ಇದರಂತೆಯೇ ಶಂಕರಲಿಂಗ ಕೋ-ಆಪ್ ಸೌಹಾರ್ದ ಕ್ರೆಡಿಟ ನಿಯಮಿತ ಸಂಘದ ಅಧ್ಯಕ್ಷ ಹಾಗೂ ಮರಾಠಾ ಸಮಾಜದ ಹಿರಿಯ ಮುಖಂಡ ಬಾಳಕೃಷ್ಣ ಹತನೂರೆ ಇವರ ಶೇಂಗಾ ಆಯಿಲ ಮೀಲಿಗೆ ಭೆಟ್ಟಿ ನೀಡಿದರು ಬಾಳಕೃಷ್ಣ ಶಂ. ಹತನೂರೆ ಇವರು ಈ ಕಾರ್ಖಾನೆಯನ್ನು ಸಧೃಢವಾಗಿ ಬೆಳೆಸಿ ಪುನಃ ಮೆರಗನ್ನು ತರಬೇಕೆಂದು ಎಲ್ಲ ಸಂಚಾಲಕ ಮಂಡಳಿಯವರಿಗೆ ಶುಭ ಹಾರೈಸಿದರು. 

ಈ ಸಂದರ್ಭದಲ್ಲಿ ಮಾಜಿ ಪುರಸಭೆಯ ಅಧ್ಯಕ್ಷ ಬಂಡು ಹತನೂರೆ, ಸುರೇಶ ಹುಂಚ್ಯಾಳಿ, ಡಾ: ಜಯಪ್ರಕಾಶ ಕರಜಗಿ, ಶಂಕರರಾವ ಹೆಗಡೆ, ಪವನ ಪಾಟೀಲ, ಅಣ್ಣಪ್ಪಾ ಸಂಗಾಯಿ, ಹಾಗೂ ಮುಂತಾದವರು ಉಪಸ್ಥಿತರಿದ್ದರು.