ನವದೆಹಲಿ, ಏ 17, ಲಾಕ್ ಡೌನ್ ಅವಧಿಯಲ್ಲಿ ಶಾಲಾ ಶುಲ್ಕವನ್ನು ಹೆಚ್ಚಳ ಮಾಡದಂತೆ ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಶುಕ್ರವಾರ ಆದೇಶ ಹೊರಡಿಸಿದ್ದಾರೆ. ಈ ಕುರಿತು ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ ಅವರು, ಖಾಸಗಿ ಶಾಲೆಗಳು ಮುಂದಿನ ಮೂರು ತಿಂಗಳವರೆಗೆಡ ಯಾವುದೇ ಶುಲ್ಕ ಪಡೆಯುವಂತಿಲ್ಲ. ಕೇವಲ ಟ್ಯೂಷನ್ ಶುಲ್ಕ ಮಾತ್ರ ಪಡೆಯಬೇಕು, ಅದೂ ತಿಂಗಳುಗಳಿಗೆ ಮಾತ್ರ ಎಂದು ತಿಳಿಸಿದರು. ಜೊತೆಗೆ, ಖಾಸಗಿ ಶಾಲೆಗಳಿಗೆ ಲಾಕ್ ಡೌನ್ ಅವಧಿಯಲ್ಲಿ ಯಾವುದೇ ಸಾರಿಗೆ ಶುಲ್ಕವನ್ನು ಪಡೆಯಲು ಅವಕಾಶ ಕಲ್ಪಿಸುವುದಿಲ್ಲ ಎಂದರು. ಜೊತೆಗೆ, ಆನ್ ಲೈನ್ ಶಾಲಾ ತರಗತಿಗಳಲ್ಲಿ ಕೂಡ ಯಾವುದೆ ಮಕ್ಕಳು ಶುಲ್ಕ ಪಾವತಿಸಿಲ್ಲ ಎಂದು ಪಟ್ಟಿಯಿಂದ ಕೈಬಿಡುವಂತಿಲ್ಲ ಎಂದು ಸೂಚಿಸಿದರು. ಖಾಸಗಿ ಶಾಲೆಗಳು ತಮ್ಮ ಸಿಬ್ಬಂದಿಗೆ ಕಾಲಕಾಲಕ್ಕೆ ವೇತನ ಪಾವತಿಸಬೇಕು ಎಂದು ಹೇಳಿದರು.