ವೃತ್ತಿ ಜೀವನದ 1500ನೇ ಪಂದ್ಯ ಗೆದ್ದ ಫೆಡರರ್

ಬಸೆಲ್, ಅ 22 : ಸ್ವಿಜರ್ಲೆಂಡ್ ಸ್ಟಾರ್ ಟೆನಿಸ್ ಆಟಗಾರ ರೋಜರ್ ಫೆಡರರ್ ಅವರು ವೃತ್ತಿ ಜೀವನದ 1500ನೇ ಪಂದ್ಯದಲ್ಲಿ ಗೆದ್ದು ಸಂಭ್ರಮಿಸಿದರು.

ಸ್ವಿಜರ್ಲೆಂಡ್ನ ಬಸೆಲ್ನಲ್ಲಿ ಸ್ವಿಸ್ ಒಳಾಂಗಣದಲ್ಲಿ ನಡೆಯುತ್ತಿರುವ ಎಟಿಪಿ ಟೂನರ್ಿಯಲ್ಲಿ ರೋಜರ್ ಫೆಡರರ್ ಅವರು ಜರ್ಮನಿಯ ಅರ್ಹತಾ ಆಟಗಾರ ಪೀಟರ್ ಗೊಜೊವ್ಜಿಕ್ ವಿರುದ್ಧ 6-2, 6-1 ನೇರ ಸೆಟ್ಗಳಲ್ಲಿ ಗೆದ್ದು ಎರಡನೇ ಸುತ್ತಿಗೆ ಪ್ರವೇಶ ಮಾಡಿದರು. ಫೆಡರರ್ ಪಾಲಿಗೆ ಸ್ವಿಸ್ ಒಳಾಂಗಣದಲ್ಲಿ ಸತತ 21 ಗೆಲುವು ಇದಾಗಿದೆ. 

ವೃತ್ತಿ ಜೀವನದ 1500ನೇ ಪಂದ್ಯ ಅತ್ಯುತ್ತಮವಾಗಿತ್ತು. ಪಂದ್ಯದಲ್ಲಿ ಆಡುವಾಗ ನನ್ನ ಹೆಜ್ಜೆಗಳು ಸ್ಪ್ರಿಂಗ್ ರೀತಿ ವತರ್ಿಸುತ್ತಿದ್ದವು. ಚೆಂಡಿಗೆ ಬಹುಬೇಗ ತಲುಪುತ್ತಿದ್ದೆ.  ಇಲ್ಲಿನ ವಾತಾವರೆಣಕ್ಕೆ ಹೊಂದಿಕೊಳ್ಳು ಸಾಕಷ್ಟು ಸಮಯ ತೆಗೆದುಕೊಳ್ಳದೇ ಇದ್ದದ್ದೂ ಇನ್ನಷ್ಟು ಉತ್ಸಾಹ ಹೆಚ್ಚಿಸಿತು. 

ವಿಶೇಷವಾಗಿ ಒಳಾಂಗಣದಲ್ಲಿ ಪೀಟರ್ ಅಪಾಯಕಾರಿ ಆಟಗಾರ ಎಂದು ಗೊತ್ತು. ಹಲವು ಅರ್ಹತಾ ಸುತ್ತುಗಳಲ್ಲಿ ಆಡಿ ಪಳಾಗಿದ್ದಾರೆ. ಇವರ ಸ್ಕೊರ್ಗಳು ಅದ್ಭುತವಾಗಿವೆ. ಎಂದು ಪಂದ್ಯದ ಬಳಿಕ ಫೆಡರರ್ ಹೇಳಿದರು. 

ವಿಶ್ವದ 3 ನೇ ಶ್ರೇಯಾಂಕದ ಫೆಡರರ್, 10ನೇ ಬಸೆಲ್ ಕೀರೀಟದ  ಹಾದಿ ಯಲ್ಲಿದ್ದು  ವೃತ್ತಿ ಜೀವನದ ಒಟ್ಟಾರೆ 103ನೇ ಪ್ರಶಸ್ತಿ ಗೆಲ್ಲುವ ತುಡಿತದಲ್ಲಿದ್ದಾರೆ. ಇವರು ಮುಂದಿನ ಸುತ್ತಿನ ಪಂದ್ಯದಲ್ಲಿ ಡಸನ್ ಲ್ಯಾಜೋವಿಚ್ ವಿರುದ್ಧ ಸೆಣಸಲಿದ್ದಾರೆ.