ದಾಂಡೇಲಿಯ ಕಾಡಂಚಿನ ಗ್ರಾಮಗಳಲ್ಲಿ ಪ್ರಾಣಿಗಳ ಭೀತಿ
Fear of animals in the forest villages of Dandeli
ದಾಂಡೇಲಿ - 28 : ದಾಂಡೇಲಿಯ ಕಾಡಂಚಿನ ಗ್ರಾಮಗಳಲ್ಲಿ ಕಾಡು ಪ್ರಾಣಿಗಳ ಉಪಟಳದಿಂದ ಜನರಲ್ಲಿ ಭೀತಿ ಸೃಷ್ಟಿಯಾಗಿದೆ.. ಕಾಡಿನಲ್ಲಿ ಕರಡಿಗಳ ಸಂಖ್ಯೆ ಹೆಚ್ಚಳದಿಂದ ಅವು ಕೂಡಾ ಮನುಷ್ಯನ ಮೇಲೆ ದಾಳಿ ನಡೆಸಿ ಕಚ್ಚಿ ಗಾಯಗೊಳಿಸಿರುವ ಘಟನಗಳು ನಡೆದಿದೆ. ಇತ್ತಿಚೆಗೆಂತೂ ಆನೆ ಮತ್ತು ಮಾನವ ಸಂಘರ್ಷ ಉಲ್ಬಣಗೊಳ್ಳುತ್ತಿದೆ. ಕಾಡುಗಳನ್ನು ಬಿಟ್ಟು ಆಹಾರಕ್ಕಾಗಿ ಆನೆಗಳು ಊರೊಳಗೆ ನುಗ್ಗಿ ಬೆಳೆನಾಶ ಮಾಡುತ್ತಿದೆ. ರಸ್ತೆಯ ಮೇಲೆ ನಿಂತು ವಾಹನಗಳನ್ನು ತಡೆದು ನಿಲ್ಲಿಸಿರುವ ಘಟನೆ ಕೂಡಾ ನಡೆಯುತ್ತಲೇ ಇದೆ. ಸದ್ಯಕ್ಕಂತೂ ಆನೆಯಿಂದ ಜೀವ ಹಾನಿಯಾದ ಅಥವಾ ದಾಳಿ ಮಾಡಿದ ಮಾಹಿತಿ ಇಲ್ಲ. ಆದರೆ, ಜನರಲ್ಲಿ ಮಾತ್ರ ಭೀತಿಯ ವಾತಾವರಣ ಸೃಷ್ಟಿಯಾಗಿದೆ.
ದಾಂಡೇಲಿಯಲ್ಲಿ 25 ವರ್ಷಗಳ ಹಿಂದೆ ವನ್ಯಜೀವಿ ಇಲಾಖೆ ಕಾರ್ಯಾರಂಭಗೊಂಡ ನಂತರ ವನ್ಯ ಜೀವಿಗಳ ಸಂಖ್ಯೆ ಹೆಚ್ಚಿದೆ. ವನ್ಯಜೀವಿಗಳ ಹೆಚ್ಚಳದಿಂದ ಗ್ರಾಮಸ್ಥರು ,ರೈತರು, ಆತಂಕದಲ್ಲಿದ್ದಾರೆ. ಕಾಡಂಚಿನ ಪ್ರದೇಶಗಳಲ್ಲಿ ದನಕರು, ಎಮ್ಮೆ, ಕುರಿಗಳ ಮೇಲೆ ಕಾಡು ಪ್ರಾಣಿಗಳ ದಾಳಿ ನಿರಂತರವಾಗಿದೆ. ಇದರಿಂದ ಕೃಷಿ ಚಟುವಟಿಕೆಗಳಿಗೆ ಅಡಚಣೆಯಾಗಿದೆ. ಕೆಲ ಗ್ರಾಮಗಳಲ್ಲಿ ಗ್ರಾಮಸ್ಥರು ನಡೆದುಕೊಂಡು ಹೋಗುವದಕ್ಕೂ ಭೀತಿಯುಂಟಾಗಿರುವದು ಸಮಸ್ಯೆಯಾಗಿದೆ. ಇತ್ತಿಚೆಗೆಗಂತೂ ಕಾಡಾನೆ, ಕಾಡು ಹಂದಿ, ಕಾಡುಕೋಣ ಗದ್ದೆ ತೋಟಗಳಲ್ಲಿ ನುಗ್ಗಿ ಬೆಳೆ ತಿಂದು ಹಾನಿಯನ್ನುಂಟು ಮಾಡುತ್ತಿದೆ. ಕಾಡು ಪ್ರಾಣಿಗಳ ಹಾವಳಿಯಿಂದ ತತ್ತರಿಸಿರುವ ಗ್ರಾಮಸ್ಥರಿಗೆ ಹೊಸ ಆತಂಕ ಸೃಷ್ಟಿಯಾಗಿದೆ.
ಅರಣ್ಯ ಇಲಾಖೆ ವನ್ಯಜೀವಿಗಳಿಂದ ಗಾಯಗೊಂಡವರಿಗೆ ಮತ್ತು ಮೃತ ಪಟ್ಟ-್ವರಿಗೆ ಸರ್ಕಾರದಿಂದ ಬರುವ ಪರಿಹಾರ ಧನ ನೀಡಿ ಕೈ ತೊಳೆದುಕೊಳ್ಳುತ್ತದೆ. ಆದರೆ ಮಾನವ -ಪ್ರಾಣಿ ಸಂಘರ್ಷ ಮಿತಿ ಮೀರಿರುವ ಸಂದಿಗ್ದ ಪರಿಸ್ಥಿತಿ ಎದುರಾಗುತ್ತಿದ್ದು, ಕಾಡಂಚಿನ ಜನರಿಗೆ ಸೂಕ್ತ ಭದ್ರತೆ ಒದಗಿಸುವಲ್ಲಿ ಅರಣ್ಯ ಇಲಾಖೆ, ವನ್ಯ ಜೀವಿ ಸಂರಕ್ಷಣಾ ವಿಭಾಗ ಕಾರ್ಯಪ್ರವರ್ತವಾಗಬೇಕಿದೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 