ರಾಣೇಬೆನ್ನೂರು ಜೂ.26: ತಾಲೂಕಿನ ಆರೇಮಲ್ಲಾಪೂರ ಗ್ರಾಮದ ಜನರಿಗೆ ಮನೆ ಹಾಗೂ ನಿವೇಶನ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಗ್ರಾಮದ ಶರಣ ಬಸವೇಶ್ವರ ಮಠದಲ್ಲಿ ಜುಲೈ 1ರಿಂದ 24 ಘಂಟೆಗಳ ಕಾಲ ಕೈಗೊಳ್ಳಲು ತೀಮರ್ಾನಿಸಿದ್ದ ಅಹೋರಾತ್ರಿ ಉಪವಾಸ ಸತ್ಯಾಗೃಹವನ್ನು ಜಿಲ್ಲಾಧಿಕಾರಿಗಳ, ತಹಸೀಲ್ದಾರರ, ತಾಪಂ ಇಓ ಮತ್ತು ಗ್ರಾಪಂ ಪಿಡಿಓರವರ ಭರವಸೆಯ ಮೇರೆಗೆ ಸತ್ಯಾಗೃಹವನ್ನು ಅನಿವಾರ್ಯವಾಗಿ ಮುಂದೂಡಲಾಗಿದೆ ಎಂದು ನಿವೇಶನರಹಿತರ ವೇದಿಕೆಯ ಅಧ್ಯಕ್ಷ ಪ್ರಣವಾನಂದರಾಮಸ್ವಾಮಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.