ಲೋಕದರ್ಶನ ವರದಿ
ಶೇಡಬಾಳ 12: ಉಗಾರ ಖುರ್ದ ಪುರಸಭೆಯ 23 ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಕೇಲವೇ ಕೆಲವು ಸದಸ್ಯರು ಪುರಸಭೆಯ ಅಧಿಕಾರಿಯನ್ನು ತಮ್ಮ ಬುಟ್ಟಿಗೆ ಹಾಕಿಕೊಂಡು ತಮ್ಮ ಮನಬಂದ ವಾಡರ್ುಗಳಲ್ಲಿ ಅಭಿವದ್ಧಿ ಕಾರ್ಯಗಳು ಕೈಗೊಳ್ಳುತ್ತಿರುವುದು ಪ್ರಜಾಪ್ರಭುತ್ವಕ್ಕೆ ಮಾರಕ. ಇದನ್ನು ನಾವು ವಿರೋಧಿಸುತ್ತೇವೆಂದು ಉಪಾಧ್ಯಕ್ಷೆ ಸ್ವಾತಿ ಯೋಗೇಶ ಕುಂಬಾರ ಕೆಲ ಸದಸ್ಯರು ಪುರಸಭೆ ಕಚೇರಿ ಎದುರು ಉಪವಾಸ ಸತ್ಯಾಗ್ರಹ ಕೈಗೊಂಡಿದ್ದಾರೆ.
ಸೋಮವಾರ ದಿ.10 ರಂದು ಬೆಳಿಗ್ಗೆಯಿಂದ ಉಗಾರ ಪುರಸಭೆ ಕಚೇರಿ ಎದುರಿಗೆ ಪುರಸಭೆ ಉಪಾಧ್ಯೆಕ್ಷೆ ಸ್ವಾತಿ ಯೊಗೇಶ ಕುಂಬಾರ ಇವರ ನೇತೃತ್ವದಲ್ಲಿ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದಾರೆ.
ಬೇಡಿಕೆಗಳು:
ಪುರಸಭೆ ಅಧಿಕಾರಿಗಳು ರಾಜ್ಯ ಹಣಕಾಸು ಆಯೋಗ ಮತ್ತು 14ನೇ ಹಣಕಾಸಿನ ಯೋಜನೆಯಡಿಯಲ್ಲಿ 4.6 ಕೋಟಿ ರೂ. ವೆಚ್ಚದ ಅಭಿವೃದ್ಧಿ ನಕ್ಷೆ ತಯಾರಿಸುವಾಗೆಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಯೋಜನೆ ಮಂಜೂರಿಗಳಿಸಲು ಪ್ರಸ್ತಾವಣೆ ಸಲ್ಲಿಸಿದರು. ಇದನ್ನು ವಿರೋಧಿಸಿ ಪ್ರತಿಯೊಂದು ವಾಡರ್ಿನ ಸದಸ್ಯರ ಬೇಡಿಕೆಗಳನ್ನು ಗಮನಿಸಿ ಕಾಮಗಾರಿಗಳು ಮಂಜೂರುಗೊಳಿಸಬೇಕೆಂಬ ಬೇಡಿಕೆ ಮುಂದಿಟ್ಟು ಉಪವಾಸ ಸತ್ಯಾಗ್ರಹ ಕೈಗೊಂಡಿದ್ದೇವೆ ಎಂದು ಮಂಜುನಾಥ ತೇರದಾಳೆ ಹೇಳಿದರು.
ಅಧಿಕಾರಿಗಳ ಸ್ಪಂದನೆ:
ಸದಸ್ಯರು ಕೈಗೊಂಡ ಉಪವಾಸ ಸ್ಥಳಕ್ಕೆ ಕಿರಿಯ ಅಭಿಯಂತ ವರ್ಧಮಾನ ಹುದ್ದಾರ, ಮತ್ತು ಪುರಸಭೆ ಮುಖ್ಯಾಧಿಕಾರಿ ರವಿ ಬಾಗಲಕೋಟೆ ಭೇಟಿನೀಡಿ ಸದಸ್ಯರ ಸಮಸ್ಯೆಗಳು ಆಲಿಸಿದರು.
ಲೋಕಸಭಾ ಚುನಾವಣೆ ಪೂರ್ವದಲ್ಲಿ ಮೇಲಾಧಿಕಾರಿಗಳು ತುರ್ತವಾಗಿ ಪ್ರಸ್ತಾವಣೆ ಕೇಳಿದ್ದರು. ಆ ಸಂದರ್ಭದಲ್ಲಿ ಎಲ್ಲ ವಾಡರ್ುಗಳ ಸದಸ್ಯರ ಕಾಮಗಾರಿಗಳಲ್ಲಿಯ ಕೆಲವನ್ನು ಮಾತ್ರ ತುತರ್ಾಗಿ ಕಳುಹಿಸಿ ಕೊಡಲಾಗಿತ್ತು. ಆದರೆ, ಸದಸ್ಯರು್ರುಪವಾಸ ಸತ್ರಾಗ್ರ ಮಾಡುತ್ತಿರುವದರಿಂದ ಸ್ಥಳಕ್ಕೆ ಭೆಟ್ಟಿ ನೀಡಿ ಅವರ ಅಹವಾಲನ್ನು ಸ್ವೀಕರಿಸಿ ಶುಕ್ರವಾ ತುತರ್ಾಗಿ ಸಭೆ ಕರೆದು ಹೊಸ ಕಾಮಗಾರಿಗಳ ಯೋಜನೆ ತಯಾರಿಸುವದಾಗಿ ಹೇಳಿದ ಬಳಿಕ ಸದಸ್ಯರು ಉಪವಾಸ ಸತ್ಯಾಗ್ರಹವನ್ನು ಸಾಯಂಕಾಲ ಹಿಂದಕ್ಕೆ ಪಡೆದರು.
ಉಪವಾಸ ಸತ್ಯಾಗ್ರಹದಲ್ಲಿ ಸದಸ್ಯರಾದ ಮಂಜುನಾಥ ತೇರದಾಳೆ, ವಿಜಯ ಆಸೂದೆ, ಮದನ ದೇಶಿಂಗೆ, ಹುಸೇನಸಾಬ ಶೇಖ್, ಭೀಮು ಬಸ್ತವಾಡೆ, ಯೊಗೇಶ ಕುಂಬಾರ, ಶಂಕರ ವಾಘಮೋಡೆ, ಪ್ರಕಾಶ ಥಬಾಜ್, ಪರಶುರಾಮ ನಾಯಿಕ, ದೀಪಾಲಿ ಶಿಂಗೆ, ಮಾಜಿ ಗ್ರಾಪಂ ಆಧ್ಯಕ್ಷ ಸಂಜಯ ಪಾಟೀಲ, ಪರಸಪ್ಪಾ ನಾಯಿಕ, ಸೇರಿದಂತೆ ಕೆಲ ಸಾರ್ವಜನಿಕರು ಪಾಲ್ಗೊಂಡು ಚರ್ಚಿಸಿದರು.