ರೈತರು ಶ್ರಮದಾನ ಮಾಡಲು ಮುಂದಾಗಿದ್ದಾರೆ: ಶ್ರೀಕಾಂತ

ಲೋಕದರ್ಶನ ವರದಿ

ಶಿಗ್ಗಾವಿ: ರೈತರ ಜೀವಜಲವಾದ ಕೆರೆಗಳಲ್ಲಿ ಇಂದು ಬಹುತೇಕವಾಗಿ ನೀರು ಇಲ್ಲದಾಗಿದೆ. ಸಧ್ಯ ಮುಂಗಾರು ಆರಂಭವಾಗಿದೆ. ಕೆರೆಗಳಲ್ಲಿ ಬೆಳೆದು ನಿಂತಿರುವ  ಗಿಡ, ಗಂಟಿಗಳನ್ನ ತೆಗೆದು ಕೆರೆ ರಕ್ಷಣೆ ಮಾಡಲು ಸ್ವತಃ ತಾಲೂಕಿನ ಗಂಗ್ಯಾನೂರ ಗ್ರಾಮದ ರೈತರು ಶ್ರಮದಾನ ಮಾಡಲು ಮುಂದಾಗಿದ್ದಾರೆ ಜೊತೆಗೆ ಭಾರತ ಸೇವಾ ಸಂಸ್ಥೆಯ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ ಅವರೂ ಸಹಿತ ಸಾತ್ ನೀಡಿದರು.

ಕೆರೆಕಟ್ಟಿಗಳು ಜನರ ಜೀವನಾಡಿಯಾಗಿದ್ದು, ಸರಿಯಾಗಿ ಮಳೆ ಬಾರದೇ ಕೆರೆಗಳು ಭತ್ತಿ ಹೋಗುತ್ತಿವೆ. ಇನ್ನು ಕೆಲವು ಕೆರೆಗಳು ತ್ಯಾಜ್ಯ ವಸ್ತುಗಳನ್ನು ಹಾಕಿ ಪುರಾತನ ಕೆರೆಗಳು ಮುಚ್ಚಿಹೋಗುತ್ತಿವೆ. ಅಂತಹ ಸಂದರ್ಭದಲ್ಲಿ ಶಿಗ್ಗಾವಿ ಪಟ್ಟಣದಲ್ಲಿ ಗಂಗ್ಯಾನೂರಿಗೆ ಹೋಗುವ ದಾರಿಯಲ್ಲಿನ ಕಾಡನಕಟ್ಟಿ ಕೆರೆಯಲ್ಲಿನ ಗಿಡಗಟ್ಟಿ, ತ್ಯಾಜ್ಯ ವಸ್ತುಗಳನ್ನು ಸ್ವಚ್ಚಗೊಳಿಸುವ ಕಾರ್ಯವನ್ನು ಇಲ್ಲಿನ ರೈತರು ಸ್ವಯಂ ಪ್ರೇರಿತರಾಗಿ ಶ್ರಮದಾನ ಮಾಡಿ ಕೆರೆಗಳ ಉಳಿವಿಗಾಗಿ ಶ್ರಮಿಸಿದರು.

ಪಟ್ಟಣದಲ್ಲಿನ ರೈತರು ಸಹ ಕೆರೆ, ಜಮೀನಿನ ತೆರೆಗೆ ಪಾವತಿಸುತ್ತೇವೆ. ಆದರೂ  ಕಾಡನಕಟ್ಟಿ ಕೆರೆ ಪಟ್ಟಣದ ವ್ಯಾಪ್ತಿಯಲ್ಲಿ ಬರುವುದರಿಂದ ಸ್ವಚ್ಚ ಮಾಡುವ, ನೀರು ತುಂಬಿಸುವ ಮತ್ತು ಹೂಳು ತೆಗೆಯುವ ಸಕರ್ಾರದ  ಯೋಜನೆಗಳಲ್ಲಿ ಬರುತ್ತಿಲ್ಲ. ಪಟ್ಟಣದಲ್ಲಿರುವ ರೈತರಿಗೆ ಯಾವುದೇ ಸೌಲಭ್ಯಗಳಿಲ್ಲ. ಹೀಗಾಗಿ ಪಟ್ಟಣದಲ್ಲಿನ ರೈತರು ಕೃಷಿ ಮಾಡಬಾರದೇ ? ಎಂಬ ಪ್ರಶ್ನೆ ಕಾಡುತ್ತಿದೆ. ಸುಮಾರು ನಾಲ್ಕು ಎಕರೆ ಜಮೀನಿನಲ್ಲಿರುವ ಈ ಕೆರೆಗೆ ಕಾಯಕಲ್ಪ ನೀಡಬೇಕು ಎಂದು ಆಗ್ರಹಿಸಿ ಸಂಬಂಧಿಸಿದ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದ್ದೇವೆ.

        ಈ ವರೆಗೆ ಯಾವುದೇ ಪ್ರಯೋಜನವಾಗಿಲ್ಲ. ಕರೆ ಸುತ್ತಲಿನ ಜಮೀನುಗಳ ರೈತರು ತಾವೇ ಸ್ವತಃ ತಡೆ ಗೋಡೆಗಳನ್ನು ನಿಮರ್ಿಸಿಕೊಂಡಿದ್ದೇವೆ ಎಂದು ರೈತ ಸಂತೋಷ ಕಟಗೆ ಹೇಳುತ್ತಾರೆ.

ಪಟ್ಟಣದಲ್ಲಿನ ನಿವಾಸಿಗಳು ತ್ಯಾಜ್ಯ ವಸ್ತುಗಳನ್ನು ನಿತ್ಯ ಈ ಕೆರೆಗೆ ಬಂದು ಹಾಕುತ್ತಿರುವುದರಿಂದ ನೀರು ದುವರ್ಾಸನೆೆ ಬರುತ್ತಿದೆ. ಅಲ್ಲದೆ ತ್ಯಾಜ್ಯ ವಸ್ತುಗಳೆ ತುಂಬಿ ಹೋಗಿವೆ. ಕಳೆದ 40 ವರ್ಷಗಳಿಂದ ಹೂಳು ತೆಗೆಯುವ ಕೆಲಸ ಮಾಡಿಲ್ಲ. 

ಸಕಾಲದಲ್ಲಿ ಸರಿಯಾಗಿ ಮಳೆ ಬಾರದೇ ಮತ್ತು ಸತತ ಬರಗಾಲದಿಂದ ರೈತರು ಕಂಗೆಟ್ಟು ಹೋಗಿದ್ದಾರೆ. ಸಧ್ಯ ಮುಂಗಾರು ಆರಂಭವಾಗಿದ್ದು, ಅಲ್ಪ-ಸ್ವಲ್ಪ ಮಳೆ ಬಂದಾಗಲೂ ಸಹ ಕೆರೆಯಲ್ಲಿ ನೀರು ನಿಲ್ಲಬೇಕು. ಇದರಿಂದ ಬಂದ್ ಆಗಿರುವ ರೈತರ ಕೊಳವೆಬಾವಿಗಳು ಮತ್ತೆ ರಿಚಾಜರ್್ ಆಗುತ್ತವೆ. ಅಧಿಕಾರಿಗಳು ಕೆರೆ ಅಭಿವೃದ್ಧಿ ಮಾಡ್ತಾರೆ ಅಂತ ಕಾಯ್ಕೊಂಡು ಕುತ್ಕೋಳೋಕೆ ಆಗಲ್ಲ. ಹೀಗಾಗಿ ಇಂದು ಸ್ವತಃ ರೈತರೆಲ್ಲರೂ ಸೇರಿ ಶ್ರಮದಾನ ಮಾಡಲು ಬಂದಿದ್ದೇವೆ ಎಂದು ರೈತ ಶಿವಪ್ಪ ಕರೆಪ್ಪನವರ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಶಿಗ್ಗಾವಿಯಿಂದ ಗಂಗೀಬಾವಿಗೆ ಹೋಗುವ ಮುಖ್ಯ ರಸ್ತೆಯಲ್ಲಿರುವ ಈ ಕರೆ ಸುತ್ತಲು ತಡೆ ಗೋಡೆಗಳ ನಿಮರ್ಾಣ ಮಾಡಬೇಕು.

  ಪಟ್ಟಣ, ನಗರ ಹಾಗೂ ಗ್ರಾಮೀಣ ಪ್ರದೇಶದ ರೈತರಲ್ಲಿ ತಾರತಮ್ಯತೆ ದೂರಾಗಬೇಕು. ಸರ್ವ ರೈತರಿಗೂ ಸಮಾನ ಯೋಜನೆಗಳನ್ನು ಅನುಷ್ಠಾನಕ್ಕೆ ತರಬೇಕು ಎಂದು ರೈತರು ಆಗ್ರಹಿಸುತ್ತಾರೆ

ರೈತ ಮುಖಂಡರಾದ ನಿಂಗಪ್ಪ ಗಂಗ್ಯಾನೂರ, ಗುಡ್ಡಪ್ಪ ಸುಣಗಾರ, ಮುದಕಪ್ಪ ಹಾಳಿ, ಮಂಜುನಾಥ ನಾಗರರಹೂಳಿ, ಚಂದ್ರು ಹಾದಿಮನಿ, ಬಸವಲಿಂಗಯ್ಯ ನಾಗರಬಾವಿಮಠ, ಮಂಜು ಸುಣಗಾರ, ಸಹದೇವಪ್ಪ ಬಾರಕೇರ ಸೇರಿದಂತೆ ಅನೇಕ ರೈತರು ಇದ್ದರು.