ಆರ್ಥಿಕ ಪ್ರಗತಿಗೆ ರೈತರು ಜಮೀನುಗಳಲ್ಲಿ ಶ್ರೀಗಂಧ ಬೆಳೆಯಬೇಕು

ಲೋಕದರ್ಶನ ವರದಿ

ರಾಣೆಬೆನ್ನೂರು11: ಕೃಷಿ ಪ್ರಧಾನವಾದ ಭಾರತ ದೇಶದಲ್ಲಿ ಕೃಷಿಕರು ಈ ದೇಶಕ್ಕೆ ಅನ್ನ ನೀಡುವ ಅನ್ನದಾತರಾಗಿದ್ದಾರೆ.  ಪ್ರಸ್ತುತ ದೇಶಕ್ಕೆ ಅನ್ನ ನೀಡುವ ರೈತ ಮತ್ತೊಬ್ಬರಿಗೆ ಕೊಡುವವನೇ ಹೊರತು, ಬೇಡುವವನಲ್ಲ.  ಆದರೆ, ಸತತ ಬರಗಾಲ, ಅನಿಯಮಿತ ಮಳೆಯ ಕಾರಣದಿಂದಾಗಿ ರೈತ ಆರ್ಥಿಕವಾಗಿ ಸಂಕಷ್ಟವನ್ನು ಅನುಭವಿಸುತ್ತಿದ್ದಾನೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ  ಭಾರತಿ ಕುಮಾರ ಜಂಬಿಗಿ ಹೇಳಿದರು. 

ಅವರು ಶನಿವಾರ ತಾಲೂಕಿನ ಮೇಡ್ಲೇರಿ ಹೋಬಳಿಯ ಹರನಗಿರಿ ಗ್ರಾಮದ ಶ್ರೀ ದಾನಮ್ಮದೇವಿ ದೇವಸ್ಥಾನದ ಆವರಣದಲ್ಲಿ ಆಯೋಜಿಸಿದ್ದ,  ಶ್ರೀಗಂಧ ಬೆಳೆ ಬೆಳೆಯುವ ಪದ್ಧತಿ ಕುರಿತು ನಡೆದ ರೈತ ಕಾರ್ಯಾಗಾರದ ಅಧ್ಯಕ್ಷತೆವಹಿಸಿ ಮಾತನಾಡಿದರು. 

ಇತಿಹಾಸದ ರೈತ ಕೇವಲ ಒಂದೇ ಬೆಳೆಗೆ ಒಗ್ಗಿಕೊಳ್ಳದೇ ವರ್ಷದುದ್ದಕ್ಕೂ ತನ್ನ ಬದುಕನ್ನು ನಡೆಸುವ ಉದ್ದೇಶದಿಂದ ಬಹುಬೆಳೆ ಪದ್ಧತಿ ಅನುಸರಿಸಿಕೊಂಡು ಬಂದಿದ್ದರ ಪರಿಣಾಮ ಅವರು ಅಂದು ಬರಗಾಲ ಬಂದರೂ ಎದುರಿಸುವ ಶಕ್ತಿ ಹೊಂದಿದ್ದರು.  ಆದರೆ, ಇಂದು ಹೊಸ-ಹೊಸ ಪದ್ಧತಿಗಳನ್ನು ಅಳವಡಿಸಿಕೊಂಡು ಆರ್ಥಿಕವಾಗಿ ಸಭಲರಾಗುವ ನಿಟ್ಟಿನಲ್ಲಿ ಮುಂದಾಗಬೇಕಾದ ಅಗತ್ಯವಿದೆ ಎಂದರು.

     ಶ್ರೀಗಂಧ ಬೆಳೆಗಾರರ ಮತ್ತು ಬಳಕೆದಾರರ ಅಭಿವೃದ್ಧಿ ಸಂಶೋಧನಾ ಸಂಘದ ರಾಜ್ಯಾಧ್ಯಕ್ಷ ಬಿ.ಆರ್.ರಘುರಾಮ್ ಅವರು ಮಾತನಾಡಿ ರೈತರು ತಮ್ಮ ಜಮೀನಿನಲ್ಲಿ ಬಹುಲಾಭಾಂಶ ನೀಡುವ ಮತ್ತು ಯಾವುದೇ ನಷ್ಟಹೊಂದದೇಆರ್ಥಿಕವಾಗಿ ಪರಿಪೂರ್ಣತೆ ಮತ್ತು ಸಫಲತೆ ಪಡೆಯುವ ಮಹತ್ವದ ಶ್ರೀಗಧದ ಬೆಳೆ ಬೆಳೆಯಲು ಮುಂದಾಗಬೇಕು ಎಂದು ರೈತರಿಗೆ ಕರೆ ನೀಡಿದರು.   

    ಸರ್ಕಾರ  ಈ ಬೆಳೆಯನ್ನು ಬೆಳೆಯಲು ಅನೇಕ ರೀತಿಯ ಆರ್ಥಿಕ ಸಹಾಯ ಮತ್ತು ರಿಯಾಯಿತಿ ದರದಲ್ಲಿ ಸಸಿಗಳನ್ನು ವಿತರಣೆ ಮಾಡಲು ಮುಂದಾಗುತ್ತಲಿದೆ.  

 ಇದರ ಪ್ರಯೋಜನವನ್ನು ಪಡೆಯಲುಪ್ರತಿಯೊಬ್ಬರು ಮುಂದಾಗಬೇಕು.  ಇದೇ ಸಂದರ್ಭದಲ್ಲಿ ಮೈದೂರು ಪ್ಲಾಟ್, ನೂಕಾರಪುರ ತಾಂಡಾ ಸೇರಿದಂತೆ ಮತ್ತಿತರೆ ಗ್ರಾಮಾಂತರ ಪ್ರದೇಶದಲ್ಲಿ ರೈತರೇ ಆಯೋಜಿಸಿದ್ದ, ಕಾರ್ಯಕ್ರಮದಲ್ಲಿ ಕಾರ್ಯಾಗಾರ  ಏರ್ಪಡಿಸಲಾಗಿತ್ತು.  

       ಮುಖ್ಯ ಅತಿಥಿಯಾಗಿದ್ದ, ಚಿತ್ರದುರ್ಗ ಧರಣಿ ಸಂಸ್ಥೆಯ ಪ್ರಧಾನ ಕಾರ್ಯದಶರ್ಿ ರಮಾನಾಗರಾಜು ಅವರು ಮಾತನಾಡಿ   ಇತಿಹಾಸದಲ್ಲಿ ಕನ್ನಡ ನಾಡು ಶ್ರೀಗಂಧದ ನಾಡು ಎಂದು ಗುರುತಿಸಿಕೊಂಡಿತ್ತು.  ಆದರೆ, ಇಂದು ಇಂತಹ ಶ್ರೀಗಂಧದ ನಾಡಿನಲ್ಲಿ ಗಂಧವೇ ಕಾಣದೇ ಬರಡು ಅನುಭವಿಸುತ್ತಿದ್ದೇವೆ.  ಯುವಕರು ಈ ನಿಟ್ಟಿನಲ್ಲಿ ಚಿಂತನೆ ನಡೆಸಿ ತಮ್ಮ ಸಮಗ್ರ ಆರ್ಥಿಕ ಪ್ರಗತಿಗೆ ಶ್ರೀಗಂಧವನ್ನು ಬೆಳೆಸುವುದರ ಮೂಲಕ ಪುನ; ಈ ನಾಡನ್ನು ಗಂಧದ ನಾಡನ್ನಾಗಿ ಪರಿವತರ್ಿಸಲು ಮುಂದಾಗಬೇಕಾಗಿದೆ ಎಂದರು. 

ಹನುಮಂತಪ್ಪ ಚಳಗೇರಿ, ಶಿವಣ್ಣ ಕುರುಬರಹಳ್ಳಿ, ರಮೇಶ ಹರನಗಿರಿ, ಎಂ.ಎಚ್.ಪಾಟೀಲ, ತಾರೇಗೌಡ, ಲಕ್ಷ್ಮಣಗೌಡ ತಿಮ್ಮಣ್ಣ,  ಲಿಂಗಪ್ಪ ಶಿರಾ, ಭೀಮಣ್ಣ ಲಮಾಣಿ, ರಾಮಣ್ಣ, ಲಕ್ಷ್ಮಣ ಲಮಾಣಿ, ಹನುಮಂತರಾಯಪ್ಪ ಬುಕ್ಕಾಪಟ್ಟಣ ಸೇರಿದಂತೆ ಮತ್ತಿತರ ಗಣ್ಯರು ಗ್ರಾಮೀಣ ಪ್ರದೇಶದ ರೈತರು ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ರೈತರಿಗೆ ನೂರಾರು ಶ್ರೀಗಂಧದ ಸಸಿಗಳನ್ನು ಉಚಿತವಾಗಿ ವಿತರಿಸಲಾಯಿತು.