ಮೋಡ ಮೂಸಕಿದ ವಾತಾವರಣ ಅತಂತ್ರದಲ್ಲಿ ರೈತರು
ಕಂಪ್ಲಿ 05: ಕಳೆದ ಎರಡ್ಮೂರು ದಿನದಿಂದ ಮೋಡ ಕವಿತ ವಾತಾವರಣ ಹಾಗೂ ಪ್ರಕೃತಿಯ ಬದಲಾವಣೆಗೆ ಕಂಪ್ಲಿ ಭಾಗದ ರೈತರ ಬದುಕು ಅತಂತ್ರವಾಗಿದ್ದು, ಕಟಾವು ಮಾಡಿದ ಭತ್ತ ರಾಶಿ ಸಂರಕ್ಷಣೆಗೆ ಹರಸಾಹಸಪಡುವಂತ ಪರಿಸ್ಥಿತಿ ರೈತರಲ್ಲಿ ನಿರ್ಮಾಣವಾಗಿದೆ.
ಹೌದು...! ಕಂಪ್ಲಿ ತಾಲೂಕಿನ ರೈತರಿಗೆ ಬೆಂಬಲ ಬೆಲೆ ಇಲ್ಲದಿರುವುದು ಒಂದೆಡೆಯಾದರೆ, ಮತ್ತೊದೆಡೆ ಪ್ರಕೃತಿಯ ಆಟಕ್ಕೆ ಕಟಾವು ಹಂತದ ಹಾಗೂ ಕಟಾವು ಮಾಡಿದ ಭತ್ತ ಉಳಿಸಿಕೊಳ್ಳುವುದು ಹರಸಾಹಸವಾಗಿದೆ.ಇನ್ನೇನು ಮುಂಗಾರು ಫಲಸನ್ನು ತೆಗೆದುಕೊಳ್ಳಬೇಕೆನ್ನುವಷ್ಟರಲ್ಲಿ ಮಳೆ ನೀರನ್ನು ಹೊತ್ತುಕೊಂಡು ಬಂದು ನಿಂತಂತಹ ಮೋಡದ ವಾತಾವರಣದಿಂದಾಗಿ ಬೆಳೆದ ಬೆಳೆಗಳು ರೈತರ ಕೈಯಿಂದ ಕೈತಪ್ಪುವ ಆತಂಕ ಮನೆ ಮಾಡಿದೆ ಕಂಪ್ಲಿ ಹಾಗೂ ಸಣಾಪುರ, ರಾಮಸಾಗರ, ನಂ.10 ಮುದ್ದಾಪುರ, ನೆಲ್ಲುಡಿ, ಸೇರಿದಂತೆ ತಾಲೂಕು ವ್ಯಾಪ್ತಿಯ ಬಹುತೇಕವಾಗಿ ಭತ್ತ ಬೆಳೆದು, ಈಗಾಗಲೇ ಕಟಾವು ಮಾಡುತ್ತಿದ್ದು, ಆದರೆ, ಈಗ ದರ ಇಲ್ಲದಿರಿವುದು ಒಂದು ಕಡೆಯಾದರೆ, ಮತ್ತೊಂದು ಕಡೆ ದಲ್ಲಾಳಿಗಳು ಬಾರದ ಪರಿಣಾಮ ಭತ್ತರ ರಾಶಿಗಳನ್ನು ಕೂಡಿಟ್ಟುಕೊಂಡು ಕಾಯುವಂತ ಸ್ಥಿತಿ ಅನ್ನದಾತರದ್ದಾಗಿದೆ. ಕಳೆದ ಮೂರ್ನಾಲ್ಕು ದಿನದಿಂದ ಮಳೆಯ ಮುನ್ಸೂಚನೆಯಂತೆ ಮೋಡ ಮುಚ್ಚಿಕೊಂಡು ಬರುತ್ತಿದೆ. ಮತ್ತು ವಾತಾವರಣದಲ್ಲಿ ಬದಲಾವಣೆಯ ಜತೆಗೆ ಸೀತ ಗಾಳಿಯು ಆವರಿಸಿದ್ದು, ರೈತರ ನಿದ್ದೆಗೆಡಿಸಿದೆ. ಕಂಪ್ಲಿ ತಾಲೂಕಿಲ್ಲಿ 18 ಸಾವಿರ ಹೆಕ್ಟರ್ ನಷ್ಟು ಬೆಳೆದ ಭತ್ತ ಬೆಳೆಗಳು ಕಟಾವಿಗೆ ಬಂದಿವೆ. ಈಗಾಗಲೇ ನೂರಾರು ಹೆಕ್ಟರ್ ನಷ್ಟು ಭತ್ತ ಕಟಾವು ಮಾಡಿದ್ದು, ಎಪಿಎಂಸಿಯಲ್ಲಿ ದಿನವಿಡಿ ಕಾಯುವಂತಾಗಿದೆ.
ಮಳೆ ಬಂದರೆ ಸಾಕು ರಾಶಿ ತೊಯ್ದು ಹಸಿಯಾಗಿ, ಮತ್ತಷ್ಟು ರೈತರ ಮೇಲೆ ಹೊರೆ ಬೀಳುತ್ತದೆ. ಕಂಪ್ಲಿ ಭಾಗದಲ್ಲಿ ರೈತರ ಭತ್ತದ ಫಸಲು ಬಂದಿದ್ದು, ಮಳೆ ಆತಂಕದ ವಾತಾವರಣಕ್ಕೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ ದರ ಕುಸಿತ ಹಾಗೂ ಆಗೊಮ್ಮೆ ಈಗೊಮ್ಮೆ ಬೀಳುವ ಜಿಟಿಜಿಟಿ ಮಳೆಗೆ ಭತ್ತದ ಕಾಳು ಮೊಳಕೆಯೊಡೆಯುವ ಆತಂಕ ಮನೆ ಮಾಡಿದೆ.ರೈತರ ಸಂಕಷ್ಟವನ್ನರಿತು ಸೂರ್ಯ ಬೆಳೆಕು ಚೆಲ್ಲಿದರೆ, ರೈತರ ಬದುಕಲ್ಲಿ ಬೆಳಕು ಬರುತ್ತದೆ..ಕಂಪ್ಲಿ ಸೇರಿದಂತೆ ಜಿಲ್ಲೆಯ ಏಳು ಕಡೆ ಅತಿ ಶೀಘ್ರದಲ್ಲೇ ಭತ್ತ ಖರೀದಿ ಕೇಂದ್ರ ತೆರೆಯಲಾಗಿದೆ ಈಗಲಾದರೂ ಸರ್ಕಾರ ಮತ್ತು ಅಧಿಕಾರಿಗಳು ಭತ್ತ ಖರೀಧಿ ಮಾಡಲು ಮುಂದಾಗಬೇಕುಎಂದರು.ಕಂಪ್ಲಿ ನಗರ ಘಟಕ, ಕ.ರಾ.ರ.ಸಂ ಹಾಗೂ ಹಸಿರು ಸೇನೆ. ಅಧ್ಯಕ್ಷ,.ತಿಮ್ಮಪ್ಪ.ನಾಯಕ.ಮಾತನಾಡಿ.ವಾತಾವರಣದಿಂದಾಗಿ ರೈತರು ಸಂಕಷ್ಟದಲ್ಲಿದ್ದಾರೆ. ವ್ಯಾಪಾರಸ್ಥರು ಭತ್ತ ಖರೀದಿಸಲು ಬರುತ್ತಿಲ್ಲ. ಬಿಸಿಲು ಮರೆಮಾಚಿದ ರಾಶಿ ಆರಿಸಲು ಸಮಸ್ಯೆಯಾಗಿದೆ. ಭತ್ತ ಕಟಾವು ಮಾಡಲು ಯಂತ್ರಗಳಿಗೆ ಡಿಮ್ಯಾಂಡ್ ಬಂದಿದೆ. ಅತ್ಯಧಿಕ ದರ ಕೇಳುತ್ತಿದ್ದಾರೆ. ಭತ್ತ ದರ ಇಲ್ಲ. ಕೊಯ್ಲು ಯಂತ್ರದ ದರ ಹೆಚ್ಚಾಗಿದೆ. ಇದರಿಂದ ರೈತರಿಗೆ ದಿಕ್ಕುದೋಚದಂತಾಗಿದೆ..ರೈತರಕಷ್ಟಗಳಿಗೆಸರ್ಕಾರ ಸಂಕಷ್ಟಕ್ಕೆ.ಸ್ಪಂದಸಲು.ಮುಂದಾಗಬೇಕು.ಎಂದರು