ಲೋಕದರ್ಶನ ವರದಿ
ಶಿರಹಟ್ಟಿ 18: ಸರಕಾರದಿಂದ ಮೆಕ್ಕೆಜೋಳದ ಬೆಂಬಲ ಬೆಲೆಯ ಖರೀದಿ ಕೇಂದ್ರವನ್ನು ಪ್ರಾರಂಭಿಸುವಂತೆ ತಾಲೂಕಿನ ಕನಕವಾಡ ಗ್ರಾಮದ ಸುತ್ತಲಿನ ರೈತರು ಮತ್ತು ಕರವೇ ವತಿಯಿಂದ ತಹಶೀಲ್ದಾರರಿಗೆ ಮನವಿ ನೀಡಲಾಯಿತು.
ಈ ವೇಳೆ ಮಾತನಾಡಿದ ವೀರೇಶರಡ್ಡಿ ಕಾಮರಡ್ಡಿ ಈ ಭಾಗದ ಜನರ ಮುಖ್ಯ ಬೆಳೆ ಮೆಕ್ಕೆ ಜೋಳವಾಗಿದೆ. ಆದರೆ ಈ ಬೆಳೆಗೆ ಉತ್ತಮ ಬೆಲೆ ಮತ್ತು ಮಾರುಕಟ್ಟೆಯಿಲ್ಲದೆ ರೈತರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಈಗಾಗಲೇ ರೈತರ ಅನೇಕ ಬೆಳೆಗಳನ್ನು ಸರಕಾರ ಬೆಂಬಲ ಬೆಲೆಗೆ ಖರೀದಿಸುತ್ತಿದ್ದು ಮೆಕ್ಕೆ ಜೋಳವನ್ನು ಕೂಡಾ ಬೆಂಬಲ ಬೆಲೆಗೆ ಖರೀದಿಸಿವ ಕೇಂದ್ರವನ್ನು ಪ್ರಾರಂಭಿಸಿ ರೈತರನ್ನು ಕಷ್ಟದಿಂದ ಹೊರತರಬೇಕು,ಇದು ಶೀಘ್ರದಲ್ಲಿ ಕೈಗೂಡದಿದ್ದರೆ ರೈತರಿಂದ ಹೋರಾಟ ಕೈಗೊಳ್ಳಬೇಕಾಗುವದು ಎಂದು ಎಚ್ಚರಿಸಿದರು.
ಕರವೇ ತಾಲೂಕ ಅಧ್ಯಕ್ಷ ಬಸವರಾಜ ವಡವಿ, ದೇವೇಂದ್ರ ಸಿಂದೆ, ಎಮ್. ಎ. ಮಕಾಂದಾರ, ಮಾಬುಸಾಬ ಢಾಲಾಯತ, ಸಿ.ಜಿ.ಅರಹುಣಸಿ, ಎ.ವಿ.ಡಂಬಳ, ಶರಣಪ್ಪ ಸೂತಾರ, ಬಸಪ್ಪ ಡಂಬಳ, ಅಶೋಕ ಡಂಬಳ ಮುಂತಾದವರು ಇದ್ದರು.