ಅಕ್ರಮ ಭೂಮಿ ಸಕ್ರಮ ಮಾಡುವಂತೆ ರೈತರ ಮನವಿ

ಬೆಳಗಾವಿ : ಸಾಗುವಳಿ ಮಾಡುತ್ತಿರುವ ಅಕ್ರಮ ಭೂಮಿಯನ್ನು ಸಕ್ರಮವಾಗಿ ಮಾಡುವಂತೆ ಒತ್ತಾಯಿಸಿ ಖಾನಾಪೂರ ತಾಲೂಕಿನ ಹಲವಾರು ರೈತರು ಒತ್ತಾಯಿಸಿದ್ದಾರೆ. ಈ ಭೂಮಿಯನ್ನೆ ನಂಬಿ ಜೀವನ ಸಾಗುಸುತ್ತಿರುವ ನಮ್ಮಗೆ ಭೂಮಿ ಸಿಗದೆ ಇದ್ದಲ್ಲಿ ಸಾಮೂಹಿಕ ಆತ್ಮಹತ್ಯೆಯ ದಾರಿ ಹಿಡಿಯಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿಗಳಿಗೆ ಮನವರಿಕೆ ಮಾಡಿಕೊಂಡಿದ್ದಾರೆ.  

ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿದ ಗುರುವಾರ ದಿನದಂದು ಆಗಮಿಸಿದ ಜಿಲ್ಲೆಯ ಖಾನಾಪೂರ ತಾಲೂಕಿನ ನೂರಾರು ರೈತರು ಈ ಕುರಿತು ಜಿಲ್ಲಾಧಿಕಾರಿಗಳಿಗೆ ಮನವಿಯೊಂದನ್ನು ಸಲ್ಲಿಸಿ, ಕಳೆದ 50 ವರ್ಷಗಳಿಂದ ಖಾನಾಪೂರ ತಾಲೂಕಿನಲ್ಲಿ ವಾಸಿಸುತ್ತ ಅರಣ್ಯ ಪ್ರದೇಶದಲ್ಲಿನ ಭೂಮಿಯನ್ನು ಸಾಗುವಳಿ ಮಾಡಿಕೊಂಡು ಉಪಜೀವನವನ್ನು ಸಾಗಿಸುತ್ತಿದ್ದೇವೆ. ಖಾನಾಪೂರ ತಾಲೂಕಿನಲ್ಲಿ ಉದ್ಯೋಗಗಳು ಕಡಿಮೆ ಪ್ರಮಾಣದಲ್ಲಿದ್ದು, ಈ ಹಿನ್ನೆಲೆಯಲ್ಲಿ ವ್ಯವಸಾಯಕ್ಕೆ ಯಾವ ದಾರಿ ಇಲ್ಲಿ ಇರುವದಿಲ್ಲ. ಇಲ್ಲಿ ದಿನನಿತ್ಯ ಉದ್ಯೋಗ ದೊರೆಯುವದಿಲ್ಲ. ಈ ನಿಟ್ಟಿನಲ್ಲಿ ತಾವು ಖಾನಾಪೂರ ತಾಲೂಕಿನಲ್ಲಿ ಕೆಲವು ಅರಣ್ಯ ಪ್ರದೇಶದಲ್ಲಿ ಬರುವ ಭೂಮಿಯನ್ನು ಸಾಗುವಳಿ ಮಾಡುತ್ತ ಸುಮಾರು 40ರಿಂದ 50 ವರ್ಷದ ವರೆಗೆ ಕಾಲ ಕಳೆದಿದ್ದೇವೆ. 

ಸದ್ಯ ಅರಣ್ಯ ಅಧಿಕಾರಿಗಳು ಈ ಸಾಗುವಳಿ ಭೂಮಿಯನ್ನು ಬಂದಾಗಿರುವ ತಯಾರಿಯಲ್ಲಿ ಇದ್ದಾರೆ. ಈ ಹಿನ್ನೆಲೆ ಆ ಅಧಿಕಾರಿಗಳನ್ನು ಭೂಮಿ ಸಾಗುವಳಿಯನ್ನು ತಡೆಯದಂತೆ ಸಮಜಾಯಿಸಿ ನೀಡುವ ಮೂಲಕ ನಮಗೆ ನ್ಯಾಯ ದೊರಕಿಸಿ ಕೋಡುವಂತೆ ವಿನಂತಿಸಲಾಗಿದೆ. ಲೋಕ ನ್ಯಾಯಾಲಯದಲ್ಲಿ ಈ ಕುರಿತು ಬಿಲ್ ಪಾಸಾಗಿದ್ದು, ಈ ಭೂಮಿಯ ಕುರಿತು ದಾಖಲಾತಿಗಳನ್ನು ನೀಡುವಂತೆ ಸೂಚಿಲಾಗಿದ್ದು, ದಾಖಲಾತಿಗಳನ್ನು ಕೂಡಾ ಸಲ್ಲಿಸಲಾಗಿದೆ. ಈ ಇಲಾಖೆಯು ತಮ್ಮ ಆಧಿನದಲ್ಲಿದ್ದು, ಇದರ ಕುರಿತು ನ್ಯಾಯ ನೀಡಬೇಕು. ಇಲ್ಲವಾದಲ್ಲಿ ಖಾನಾಪೂರ ತಾಲೂಕಿನ ಎಲ್ಲ ರೈತರು ಉಪವಾಸ ಸತ್ಯಾಗ್ರವನ್ನು ಹಮ್ಮಿಕೊಳ್ಳಬೇಕಾದ ಅನಿವಾರ್ಯತೆ ಉಂಟಾಗುತ್ತದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ತಮಗೆ ಈ ಭೂಮಿಯನ್ನು ಸಕ್ರಮ ಮಾಡಿ ಜೀವನ ನಡೆಸಲು ಅನುವು ಮಾಡಿ ಕೊಡುವಂತೆ ವಿನಂತಿಸಿಕೊಂಡಿದ್ದಾರೆ. ಇಂದಿನ ಪ್ರತಿಭಟನೆಯಲ್ಲಿ ಹಲವಾರು ರೈತರು ಭಾಗವಹಿಸಿದ್ದರು.