ಬೆಳಗಾವಿ : ಸಾಲ ಮನ್ನಾ, ನೆರೆ ಪರಿಹಾರ ಸೇರಿದಂತೆ ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಜಿಲ್ಲೆಯ ಖಾನಾಪುರ ತಾಲೂಕಿನ ಗಂದಿಗವಾಡ ಗ್ರಾಮದ ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳ ಮೂಲಕ ಸಕರ್ಾರಕ್ಕೆ ಮನವಿಯೊಂದನ್ನು ಸಲ್ಲಿಸಿದರು.
ಬುಧವಾರ ದಿನದಂದು ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಖಾನಾಪುರ ತಾಲೂಕಿನ ಗಂದಿಗವಾಡ ಗ್ರಾಮದ ರೈತಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಕೆಲವು ಹೊತ್ತು ಪ್ರತಿಭಟನೆ ನಡೆಸಿದರು. ರೈತರು ಮತ್ತು ಗ್ರಾಮಸ್ಥರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿ ಮೂಲಕ ಸಕರ್ಾರಕ್ಕೆ ಮನವಿ ಸಲ್ಲಿಸಿದರು.
ಸುಪ್ರೀಂ ಕೋಟರ್್ ಆದೇಶದಂತೆ ಮಹದಾಯಿ ಯೋಜನೆ ಕಾಮಗಾರಿ ಪೂರ್ಣಗೊಳಿಸಲು ತ್ವರಿತ ಕ್ರಮಕೈಗೋಳ್ಳುವಂತೆ, ಸಾಲ ಮನ್ನಾ, ರೈತರಿಗೆ ಬ್ಯಾಂಕ್ ಅಧಿಕಾರಿಗಳಿಂದ ಆಗುತ್ತಿರುವ ಕಿರಿಕಿರಿ ತಡೆ, ನೆರೆ ಪರಿಹಾರಕ್ಕಾಗಿ ಸಮರ್ಪಕ ಸವರ್ೆ, ಸವರ್ೆ ಮರುಪರಿಶೀಲಿಸಿ ಪರಿಹಾರ ಬಿಡುಗಡೆ ಮತ್ತಿತರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ರೈತರು ಆಗ್ರಹಿಸಿದರು. ಕಾಂಗ್ರೆಸ್ ಸಕರ್ಾರ 2009ರಿಂದ 2017ರವರೆಗೆ ರೈತರು ಪಡೆದ 2 ಲಕ್ಷ ರೂ. ವರೆಗಿನ ಸಾಲವನ್ನು ಮನ್ನಾ ಮಾಡಲು ಆದೇಶಿಸಿತ್ತು. ಆದರೆ ಈ ಯೋಜನೆ ಅನುಷ್ಠಾನಗೊಂಡಿಲ್ಲ. 2006 ಮತ್ತು ಅದಕ್ಕೂ ಹಿಂದೆ ಸಾಲ ಮಾಡಿದ ರೈತರು ಇದುವರೆಗೂ ಮರುಪಾವತಿಸಲು ಆಗಿಲ್ಲ. ಅಂಥವರ ಸಾಲವನ್ನೂ ಸಕರ್ಾರ ಮನ್ನಾ ಮಾಡಬೇಕು ಎಂದು ಆಗ್ರಹಿಸಿದರು.
ಅಲ್ಲದೆ ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಭರವಸೆ ನೀಡಿದಂತೆ 1 ಲಕ್ಷ ರೂ. ವರೆಗಿನ ಕೃಷಿ ಸಾಲ ಮನ್ನಾ ಮಾಡಲು ಬಿಜೆಪಿ ಸಕರ್ಾರ ಮುಂದಾಗಬೇಕು ಎಂದು ರೈತರು ಆಗ್ರಹಿಸಿದರು. ನೆರೆ ಸಂತ್ರಸ್ತರಿಗೆ ಪರಿಹಾರ ನೀಡುವಲ್ಲೂ ಅಧಿಕಾರಿಗಳು ತಾರತಮ್ಯ ಎಸಗಿದ್ದಾರೆ. ಸಮರ್ಪಕ ಸವರ್ೆ ಆಗಿಲ್ಲ. ಕೂಡಲೇ ಸಕರ್ಾರ ಎಚ್ಚೆತ್ತು ರೈತರು, ಸಂತ್ರಸ್ತರಿಗೆ ಅನುಕೂಲ ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ರೈತರು ಸಕರ್ಾರವನ್ನು ಒತ್ತಾಯಿಸಿದರು. ಇಂದಿನ ಪ್ರತಿಭಟನೆಯಲ್ಲಿ ವಸಂತ ತಿಪ್ಪಣ್ಣವರ, ಮಹಾದೇವ ಸಾಗರೇಕರ, ಗಂಗವ್ವ ಹಿರೇಕರ, ಯಲ್ಲಪ್ಪ ಹಿರೇಕರ, ಗಂಗಪ್ಪ ಜುಂಜಾಳ್ಳಿ, ವಿಠ್ಠಲ ಸಾಗರೇಕರ ಸೇರಿದಂತೆ ಅನೇಕರ ರೈತರು ಭಾಗವಹಸಿದ್ದರು.