ರೈತ ದಿನಾಚರಣೆ ವಿಷಮುಕ್ತ ಆಹಾರ ಬೆಳೆಯಿರಿ: ಶಿವಪ್ಪಗೌಡ ಬಿರಾದಾರ

ಲೋಕದರ್ಶನ ವರದಿ

ಸಿಂದಗಿ 17:ರೈತರು ಕೃಷಿಯಲ್ಲಿ ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಳ್ಳುವ ಮೂಲಕ ವಿಷಮುಕ್ತ ಆಹಾರ ಧಾನ್ಯಗಳನ್ನು ಬೆಳೆಯಿರಿ ಎಂದು ತಾಲೂಕಾ ಕೃಷಿಕ ಸಮಾಜದ ಅಧ್ಯಕ್ಷ ಶಿವಪ್ಪಗೌಡ ಬಿರಾದಾರ ಹೇಳಿದರು.

ಪಟ್ಟಣದ ಕೃಷಿ ಇಲಾಖೆಯ ಕಾಯರ್ಾಲಯದ ಸಭಾಭವನದಲ್ಲಿ ಜಿಲ್ಲಾ ಪಂಚಾಯತಿ ವಿಜಯಪುರ, ಕೃಷಿ ಇಲಾಖೆ ಸಿಂದಗಿ ಹಾಗೂ ತಾಲೂಕಾ ಕೃಷಿಕ ಸಮಾಜ ಇವರ ಸಂಯುಕ್ತಾಶ್ರಯದಲ್ಲಿ ಗುರುವಾರ ಹಮ್ಮಿಕೊಂಡ ರೈತರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ರೈತರು ಕೃಷಿಯಲ್ಲಿ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಳ್ಳುವ ಮೂಲಕ ತಮ್ಮ ಆಥರ್ಿಕತೆ ಹೆಚ್ಚಿಸಿಕೊಳ್ಳ ಬೇಕು. ಕೃಷಿಯಲ್ಲಿ ಹೆಚ್ಚು ರಾಸಾಯನಿಕ ಗೊಬ್ಬರ, ಔಷಧಿ ಬಳಸುವ ಬದಲು ಹೆಚ್ಚು ಸಾವಯವ ಕೃಷಿಗೆ ಹೆಚ್ಚು ಒತ್ತಡ ನೀಡಿ. ಲಭ್ಯವಿರುವ ನೀರನ್ನು ಸದ್ಬಳಕೆ ಮಾಡಿಕೊಂಡು ಕೃಷಿ ಮಾಡಿ. ಇಸ್ರೇಲ ದೇಶದಲ್ಲಿ ನೀರಿನ ಪ್ರಮಾಣ ಕಡಿಮೆ ಆದರೇ ಕೃಷಿಯಲ್ಲಿ ಮುಂದಿದ್ದಾರೆ. ಆದರೆ ನಮ್ಮಲ್ಲಿ ನೀರಾವರಿ ಇದ್ದ ಪ್ರದೇಶದಲ್ಲಿ ನೀರಿನ ವಿತರಣೆ ಕೊರತೆಯಿದೆ ಎಂದರು.

ಪ್ರಗತಿಪರ ರೈತ ಚಂದ್ರಶೇಖರ ದೇವರೆಡ್ಡಿ ಅವರು ಮಾತನಾಡಿ, ಕೃಷಿ ಅಭಿವೃದ್ಧಿಗೆ ಸರಕಾರ ನೀಡುವ ಸೌಲಭ್ಯಗಳನ್ನು ಸದುಪಯೋಗ ಪಡೆಸಿಕೊಂಡು ಕೃಷಿಯಲ್ಲಿ ಸಾಧನೆ ಮಾಡೋಣ. ಕೃಷಿ ಹೊಂಡ, ಸೋಲಾರ ಪಂಪಶೆಟ್ ಹೆಚ್ಚಿನ ಉತ್ತೇಜನ ಸರಕಾರ ನೀಡಲಿ ಎಂದರು. 

0ಪ್ರಗತಿಪರ ರೈತ ಭಾಗಪ್ಪಗೌಡ ಪಾಟೀಲ ಆಹೇರಿ, ಕೃಷಿ ಸಹಾಯಕ ನಿದರ್ೆಶಕ ಡಾ|ಎಚ್.ವಾಯ್.ಸಿಂಗೆಗೋಳ, ತಾಲೂಕಾ ಕೃಷಿಕ ಸಮಾಜದ ಉಪಾಧ್ಯಕ್ಷ ಎಸ್.ಬಿ.ದೇಸಾಯಿ, ನಿದರ್ೇಶಕರಾದ ಎಸ್.ಎನ್.ಪಾಟೀಲ ಮೋರಟಗಿ, ಎಸ್.ಬಿ.ಪಾಟೀಲ, ಯುವ ರೈತರಾದ ಶಾಂತಗೌಡ ಬಿರಾದಾರ ಗಬಸಾವಳಗಿ, ಶರಣು ಸಾಂಬಾ ಕಕ್ಕಳಮೇಲಿ ಅವರು ಮಾತನಾಡಿದರು. ಕೃಷಿ ಅಧಿಕಾರಿ ಯಾಶ್ಮಿನ್ ಠಾಣೆಧಾರ ಅವರು ವೇದಿಕೆ ಮೇಲೆ ಇದ್ದರು.

ಈ ಸಂದರ್ಭದಲ್ಲಿ ಕೃಷಿಯಲ್ಲಿ ಸಾಧನೆ ಮಾಡಿದ ಪ್ರಗತಿಪರ ರೈತರಾದ ಭಾಗಪ್ಪಗೌಡ ಪಾಟೀಲ ಆಹೇರಿ, ಚಂದ್ರಶೇಖರ ದೇವರೆಡ್ಡಿ, ಶಾಂತಗೌಡ ಬಿರಾದಾರ, ಶರಣು ಸಾಂಬಾ ಅವರನ್ನು ಸಿಂದಗಿ ತಾಲೂಕಾ ಕೃಷಿಕ ಸಮಾಜದ ಅಧ್ಯಕ್ಷ ಶಿವಪ್ಪಗೌಡ ಬಿರಾದಾರ ಅವರು ಸನ್ಮಾನಿಸಿ ಗೌರವಿಸಿದರು.

ತಾಲೂಕಾ ಕೃಷಿಕ ಸಮಾಜದ ನಿದರ್ೆಶಕರಾದ ಜಿ.ಬಿ.ನೆಲ್ಲಗಿ, ಸಿ.ಎಸ್.ಹೂಲಸೂರ, ಬಿ.ಬಿ.ಕನ್ನೊಳ್ಳಿ, ಆರ್.ಪಿ.ಬಿರಾದಾರ, ಆರ್.ಎಚ್.ಪೂಜಾರಿ, ಬಿ.ಜಿ.ಪಾಟೀಲ, ಎಸ್.ಎಂ.ಆನಂದಿ, ಸುರೇಖಾ ಬಡಾನೂರ, ಬಿ.ಜಿ.ಗುಮಶೆಟ್ಟಿ ಸೇರಿದಂತೆ ರೈತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.