ಖ್ಯಾತ ಉರ್ದು ಲೇಖಕ ಪದ್ಮಶ್ರೀ ಮುಜ್‍ತಾಬ ಹುಸೇನ್ ನಿಧನ

ಹೈದರಾಬಾದ್, ಮೇ 27,ಖ್ಯಾತ ಉರ್ದು ಲೇಖಕ ಮತ್ತು ಹಾಸ್ಯಗಾರ ಮುಜ್‍ತಾಬ ಹುಸೇನ್ ಬುಧವಾರ ಇಲ್ಲಿನ ತಮ್ಮ ನಿವಾಸದಲ್ಲಿ ನಿಧನ ಹೊಂದಿದ್ದಾರೆ. ಅವರಿಗೆ 87 ವರ್ಷ ವಯಸ್ಸಾಗಿತ್ತು. ಉರ್ದು ಸಾಹಿತ್ಯಕ್ಕೆ ನೀಡಿದ ಅಪಾರ ಕೊಡುಗೆಗಾಗಿ ಹುಸೇನ್ ಅವರಿಗೆ 2007 ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಅವರ ಕೃತಿಗಳನ್ನು ಇಂಗ್ಲಿಷ್, ರಷ್ಯನ್ ಮತ್ತು ಜಪಾನೀ ಭಾಷೆಗಳಲ್ಲದೆ ಅನೇಕ ಭಾರತೀಯ ಭಾಷೆಗಳಿಗೆ ಅನುವಾದಿಸಲಾಗಿದೆ.ಉರ್ದು ದಿನ ಪತ್ರಿಕೆಗಳಲ್ಲಿ ಹುಸೇನ್ ಕೃತಿಗಳು ಮತ್ತು ಅಂಕಣಗಳು ತುಂಬಾ ಜನಪ್ರಿಯವಾಗಿದ್ದವು.ಹುಸೇನ್‍ ಅವರು ಹಾಸ್ಯಗಾರರಾಗಿದ್ದು, ಅನೇಕ ಹಾಸ್ಯ ಲೇಖನಗಳನ್ನು ಬರೆದಿದ್ದರು.