ನಕಲಿ ಮಾಸ್ಕ್ ಮಾರಾಟ ದಂಧೆ : ಸಿಸಿಬಿ ದಾಳಿ

ಬೆಂಗಳೂರು,  ಮಾ 31  ಸಿಲಿಕಾನ್ ಸಿಟಿಯಲ್ಲಿ ನಕಲಿ ಎನ್-95 ಮಾಸ್ಕ್ ಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದ ತಂಡದ  ಮೇಲೆ   ಸಿಸಿಬಿ ತಂಡದಾಳಿ ನಡೆಸಿ  ಅಪಾರ ಪ್ರಮಾಣದ ಮಾಸ್ಕ್ ಗಳನ್ನು ಜಪ್ತಿ ಮಾಡಿದೆ.  ಬಾಣಸವಾಡಿಯ ಜಿಯಾಸ್ ಇಂಜಿನಿಯರಿಂಗ್ ಡಯಾಬಿಟಿಕ್ ಕೇಂದ್ರದಲ್ಲಿ ಎನ್-95 ಮಾಸ್ಕ್ ಗಳ ಹೆಸರಿನಲ್ಲಿ ಸಾಮಾನ್ಯ ಬಟ್ಟೆಯಲ್ಲಿ ತಾವೇ ತಯಾರಿಸಿದ ನಕಲಿ ಮಾಸ್ಕ್ ಗಳನ್ನು ಮಾರಾಟ ಮಾಡಲಾಗುತ್ತಿತ್ತು. ಜೊತೆ ಅವುಗಳ ಮೇಲೆ ಎನ್-95 ಸೀಲ್ ಗಳನ್ನು ಹಾಕಿ ಅಧಿಕ ಬೆಲೆ ನಿಗದಿ ಪಡಿಸಿ ಮಾರಾಟ ಮಾಡಲಾಗುತ್ತಿತ್ತು. ಈ ಕುರಿತು ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಸಿಸಿಬಿ ತಂಡ  ಲಕ್ಷಾಂತರ ಕ್ಷ ರೂಪಾಯಿ ಬೆಲೆಬಾಳುವ ಸಾವಿರಾರು ನಕಲಿ ಎನ್-95 ಮಾಸ್ಕ್ಗಳನ್ನು ವಶಪಡಿಸಿಸಕೊಂಡಿದ್ದು  ಕೋಟ್ಯಾಂತರ ರೂಪಾಯಿ ಬೆಲೆಯ  ಮಾಸ್ಕ್ಗಳನ್ನು ಮಾರಾಟ ಮಾಡಿರುವುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ .