ಜಾತ್ರಾ ಮಹೋತ್ಸವಗಳು ಎಲ್ಲ ಸಮಾಜದ ಪರಂಪರೆ ಮತ್ತು ಐಕ್ಯತೆಯನ್ನು ಪ್ರತಿಬಿಂಬಿಸುವ ಮಹತ್ವದ ಹಬ್ಬ : ಡಾ. ಶೈಲೇಂದ್ರ ಬೆಲ್ದಾಳೆ

ಜಾತ್ರಾ ಮಹೋತ್ಸವಗಳು ಎಲ್ಲ ಸಮಾಜದ ಪರಂಪರೆ ಮತ್ತು ಐಕ್ಯತೆಯನ್ನು ಪ್ರತಿಬಿಂಬಿಸುವ ಮಹತ್ವದ ಹಬ್ಬ : ಡಾ. ಶೈಲೇಂದ್ರ ಬೆಲ್ದಾಳೆ Fair festivals are important festivals that reflect the heritage and unity of all societies: Dr. Sha

ಬೀದರ್ 15 : ಜಾತ್ರಾ ಮಹೋತ್ಸವವು ಗ್ರಾಮದಲ್ಲಿ ಭಕ್ತಿ, ಸಂಸ್ಕೃತಿ ಮತ್ತು ಸಹೋದರತ್ವವನ್ನು ಬೆಳೆಸುವ ಮಹತ್ವದ ಪರಂಪರೆಅಲ್ಲಮಪ್ರಭುವಿನ ಈ ಪವಿತ್ರ ಜಾತ್ರಾ ಮಹೋತ್ಸವವು ಗ್ರಾಮದಲ್ಲಿ ಭಕ್ತಿ, ಸಂಸ್ಕೃತಿ ಮತ್ತು ಸಹೋದರತ್ವವನ್ನು ಬೆಳೆಸುವ ಮಹತ್ವದ ಪರಂಪರೆ ಆಗಿದೆ ಎಂದು ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ ಅವರು ಹೇಳಿದರು. ಬೀದರ್ ದಕ್ಷಿಣ ಕ್ಷೇತ್ರದ ಅಷ್ಟೂರ ಗ್ರಾಮದಲ್ಲಿರುವ ಸುಪ್ರಸಿದ್ಧಅಲ್ಲಮಪ್ರಭು ದೇವಸ್ಥಾನದ ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ದೇವರ ದರ್ಶನ ಪಡೆದು ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು. 

ಜಾತ್ರಾ ಮಹೋತ್ಸವವು ಗ್ರಾಮದ ಎಲ್ಲ ಸಮಾಜದ ಪರಂಪರೆ ಮತ್ತು ಐಕ್ಯತೆಯನ್ನು ಪ್ರತಿಬಿಂಬಿಸುವ ಮಹತ್ವದ ಹಬ್ಬವಾಗಿದ್ದು, ಎಲ್ಲರ ಜೀವನದಲ್ಲಿ ಶಾಂತಿ, ಸಮೃದ್ಧಿ ಮತ್ತು ಸುಖವನ್ನು ತರಲಿ ಎಂದು ಹಾರೈಸಿದರು.ಅಷ್ಟೂರ ಗ್ರಾಮದ ಸುಪ್ರಸಿದ್ಧ ಅಲ್ಲಮಪ್ರಭು ದೇವಸ್ಥಾನದಲ್ಲಿ ನಡೆಯುತ್ತಿರುವ ಈ ಪವಿತ್ರ ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ ನನಗೆ ದೊರೆತಿರುವುದು ಬಹಳ ಸಂತೋಷದ ವಿಷಯವಾಗಿದೆ. ಈ ದೇವಸ್ಥಾನವು ನಮ್ಮ ಪ್ರದೇಶದ ಭಕ್ತಿ, ಸಂಸ್ಕೃತಿ ಹಾಗೂ ಪರಂಪರೆಯ ಪ್ರತೀಕವಾಗಿದೆ.ಶ್ರೀ ಅಲ್ಲಮಪ್ರಭುಗಳ ಆಶೀರ್ವಾದದಿಂದ ನಮ್ಮ ಎಲ್ಲರ ಜೀವನದಲ್ಲಿ ಶಾಂತಿ, ಸಮೃದ್ಧಿ ಮತ್ತು ಸುಖ ಸದಾ ನೆಲೆಸಿರಲಿ ಎಂದು ಪ್ರಾರ್ಥಿಸುತ್ತೇನೆ.  

ಜಾತ್ರಾ ಮಹೋತ್ಸವಗಳು ನಮ್ಮ ಸಮಾಜದಲ್ಲಿ ಭಕ್ತಿ, ಐಕ್ಯತೆ ಹಾಗೂ ಸಹೋದರತ್ವವನ್ನು ಬಲಪಡಿಸುವ ಮಹತ್ವದ ಕಾರ್ಯಕ್ರಮಗಳಾಗಿವೆ. ಇಂತಹ ಧಾರ್ಮಿಕ ಕಾರ್ಯಕ್ರಮಗಳು ನಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಮಹತ್ವದ ಪಾತ್ರ ವಹಿಸುತ್ತವೆ.ಈ ಜಾತ್ರೆಯನ್ನು ಯಶಸ್ವಿಯಾಗಿ ಆಯೋಜಿಸಿರುವ ದೇವಸ್ಥಾನದ ಸಮಿತಿ ಸದಸ್ಯರು ಹಾಗೂ ಗ್ರಾಮದ ಎಲ್ಲ ಭಕ್ತರಿಗೆ ಹೃದಯಪೂರ್ವಕ ಅಭಿನಂದನೆಗಳು.  

ಅಲ್ಲಮಪ್ರಭುಗಳ ಕೃಪೆ ಸದಾ ನಿಮ್ಮೊಂದಿಗಿರಲಿ ಎಂದು ಹಾರೈಸುತ್ತೇನೆ ಎಂದರು.ಈ ಸಂದರ್ಭದಲ್ಲಿ ಶ್ರೀಗಳಾದ ಸೋಮಶೇಖರ ಶಿವರಾಯ ವಡೆಯರ, ಶ್ರಿಮಂತ ವಡೇಯರ ದಿವ್ಯ ಸಾನಿಧ್ಯ ವಹಿಸಿದ್ದರು.ಗ್ರಾಮಪಂಚಾಯಿತಿ ಅಧ್ಯಕ್ಷ ಸಂಗಮೇಶ ಹಳ್ಳಿ, ಮುಖಂಡರಾದ ಶಿವಕುಮಾರ ಸ್ವಾಮಿ, ಶಶಿಧರ ಪಾಟೀಲ, ನಾಗೇಶ ಪಾಟೀಲ್, ಶಿವಕುಮಾರ ನಾಗಲಗಿದ್ದಿ, ರಾಹುಲ, ಬಸಯ್ಯ ಸ್ವಾಮಿ, ಉಮೇಶ ರತನಗೊಂಡ, ರಾಜಕುಮಾರ ಪಾಟೀಲ್, ಬಿಜೆಪಿ ಬೀದರ್ ದಕ್ಷಿಣ ಯುವ ಮೋರ್ಚಾ ಅಧ್ಯಕ್ಷ ಶಿವಕುಮಾರ ಸುಲ್ತಾನಪುರ, ಬಾಬು, ಆಕಾಶ ಕೋಟೆ ಮತ್ತಿತರರು ಉಪಸ್ಥಿತರಿದ್ದರು.