ಮಹಿಳಾ ಪ್ರಧಾನ ಸಮಾಜ ನಿರ್ಮಾಣದ ಅಗತ್ಯವಿದೆ - ಭೀಮಶಿ ಪೂಜೇರಿ

ಮಹಿಳಾ ಪ್ರಧಾನ ಸಮಾಜ ನಿರ್ಮಾಣದ ಅಗತ್ಯವಿದೆ - ಭೀಮಶಿ ಪೂಜೇರಿ  There is a need to build a women-centric society - Bhimashi Poojeri

ಲೋಕದರ್ಶನ ವರದಿ 

        ಮೂಡಲಗಿ 16 : ಭಾರತದಲ್ಲಿ ಪುರಷ ಪ್ರಾದಾನ್ಯತೆ ಹೆಚ್ಚಾಗಿದ್ದು ಮಹಿಳೆಯರನ್ನು ಸಮಾಜದ ಪ್ರದಾನ ವ್ಯವಸ್ಥೆಯಲ್ಲಿ ಅವಕಾಶ ನೀಡಿ ಮಹಿಳಾ ಪ್ರದಾನ ಸಮಾಜದ ಸೃಷ್ಟಿಯನ್ನು ಮಾಡುವುದು ಇಂದಿನ ಅಗತ್ಯವಾಗಿದೆ ಅಲ್ಲದೇ ಇಂದು ಅತೀ ಹೆಚ್ಚು ಹೆಣ್ಣು ಮಕ್ಕಳ ಭ್ರೂಣ ಹತ್ಯೆ, ಮಹಿಳಾ ದೌಜ್ಯನ್ಯಗಳು ಹೆಚ್ಚಾಗಿದ್ದು ಅವುಗಳನ್ನು ಹೋಗಲಾಡಿಸುವದರ ಜೊತೆಗೆ ಮಹಿಳೆಯರನ್ನು ಪೂಜ್ಯತಾ ಭಾವನೆಯಿಂದ ಕಾಣುವುದು ಅಗತ್ಯವಿದೆ ಎಂದು ಇಟ್ನಾಳದ ಪ್ರಾಥಮಿಕ ಶಾಲೆಯ ಶಿಕ್ಷಕರಾದ ಭೀಮಶಿ ಪೂಜೇರಿ ಹೇಳಿದರು.  

ಪಟ್ಟಣದ ಸಮೀಪ ಇಟ್ನಾಳ ಗ್ರಾಮದ ಮಾದವಾನಂದ ದೇವಸ್ಥಾನದಲ್ಲಿ ಆರ್‌. ಡಿ. ಎಸ್‌. ಕಲಾ, ವಾಣಿಜ್ಯ, ವಿಜ್ಞಾನ, ಸಮಾಜಕಾರ್ಯ  ಪದವಿ ಮಹಾವಿದ್ಯಾಲಯದ ವಿದ್ಯಾರ್ಥಿಗಳ ವಾರ್ಷಿಕ ಎನ್‌. ಎಸ್‌. ಎಸ್‌. ಶಿಬಿರದ ಮೂರನೇ ದಿನದ ಉಪನ್ಯಾಸದಲ್ಲಿ ಮಾತನಾಡಿ ಮಹಿಳೆಯರು ಸ್ವಾವಲಂಬನೆ ಜೀವನ ರೂಪಿಸಿಕೊಳ್ಳಲು ಅಗತ್ಯ ಪರಿಸರವನ್ನು ನಾವುಗಳು ಒದಗಿಸಬೇಕು ಮಹಿಳೆ ಎಲ್ಲಾ ರಂಗದಲ್ಲಿ ಬೆಳವಣಿಗೆಯನ್ನು ಸಾಧಿಸುವಂತೆ ಪ್ರೋತ್ಸಾಹ ನೀಡುವುದು ಇಂದಿನ ಅಗತ್ಯವಾಗಿದೆ ಎಂದರು.  

           ಗ್ರಾಮದ ಹಿರಿಯರಾದ ಧರೇಪ್ಪಾ ಮತ್ನಾಳ ಮಾತನಾಡಿ ಮಹಿಳೆಯರ ಸ್ಥಾನಮಾನಗಳನ್ನು ಹೆಚ್ಚಿಸುವಲ್ಲಿ ಸರಕಾರ ಅನೇಕ ಯೋಜನೆಗಳನ್ನು ರೂಪಿಸಿದ್ದು ಅವುಗಳ ಸದುಪಯೋಗವಾಗಬೇಕು ಮಹಿಳೆಯರು ತಮ್ಮ ಆತ್ಮ ರಕ್ಷಣೆಗೆ ಇರುವ ಕಾನೂನು ವ್ಯವಸ್ಥೆಯನ್ನು ತಿಳಿದುಕೊಂಡಿರಬೇಕೆಂದರು. 

ಕಾಲೇಜಿನ ಉಪನ್ಯಾಸಕಿ ಸ್ಪೂರ್ತಿ ಈಟಿ ಮಾತನಾಡಿ ಮಹಿಳೆಯರ ರಕ್ಷಣೆಗೋಸ್ಕರ ಅನೇಕ ಕಾನೂನು ವ್ಯವಸ್ಥೆಗಳ ಜೊತೆಗೆ ಸರಕಾರ ಮಹಿಳಾ ಸಬಲೀಕರಣಕ್ಕೆ ಸಂಬಂಧಿಸಿದಂತೆ ವಿವಿಧ ಕಾರ್ಯಕ್ರಮಗಳಿದ್ದು ಅವುಗಳ ಸದುಪಯೋಗವನ್ನು ಪ್ರತಿಯೊಬ್ಬ ಮಹಿಳೆ ಪಡೆದುಕೊಳ್ಳುವಂತೆ ಸಲಹೆ ನೀಡುವುದು ಅಗತ್ಯ ಇದೆ ಎಂದರು.  

         ಇಟನಾಳದ ಪಿಕೆಪಿಎಸ್ ನ ಸದಸ್ಯರಾದ ಮಹಾಂತೇಶ ಬೆನ್ನಳ್ಳಿ ಅಧ್ಯಕ್ಷತೆ ವಹಿಸಿಕೊಂಡಿದ್ದರು ಕಾರ್ಯಕ್ರಮದಲ್ಲಿ ಮಲ್ಲಪ್ಪ ಹಾಲಳ್ಳಿ, ಶಂಕರಗೌಡ ಪಾಟೀಲ, ಗೋವಿಂದ ಪೂಜೇರಿ, ಬಸವರಾಜ ಮುತ್ನಾಳ ಮಲ್ಲಪ್ಪಾ ದಾನಿಹಾಳ ಉಪನ್ಯಾಸಕರಾದ ಕಿರಣ ಪಟ್ಟಣಶೆಟ್ಟಿ ಸುನೀಲ ಸತ್ತಿ, ಶಾಂತಾ ವೆಂಕಟಾಪೂರ, ಸವಿತಾ ವೆಂಕಟಾಪೂರ, ಘಟಕಾಧಿಕಾರಿ ರಾಜು ಪತ್ತಾರ ಮತ್ತಿತ್ತರರು ಹಾಜರಿದ್ದರು. ಶಂಕರ ಕರಬನ್ನವರ ನಿರೂಪಿಸಿದರು ದೀಪಾ ಉಪ್ಪಾರ ಸ್ವಾಗತಿಸಿದರು. ಸ್ವಾತಿ ಹುಲಕುಂದ ವಂದಿಸಿದರು.