ಬೆಂಗಳೂರು, ಫೆ.14, ಸಚಿವ ಆನಂದ್ ಸಿಂಗ್ ಅವರಿಗೆ ಅರಣ್ಯ ಖಾತೆ ಕೊಟ್ಟಿರುವುದು "ಸಂಬಳವಿಲ್ಲದೇ ಕುರಿ ಕಾಯಲು ತೋಳವನ್ನು ನೇಮಿಸಿದಂತಾಗಿದೆ ಎಂದು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.ಆನಂದ್ ಸಿಂಗ್ಗೆ ನಿಜಕ್ಕೂ ನೈತಿಕತೆ ಇರುವುದೇ ಆದಲ್ಲಿ ಅರಣ್ಯ ಇಲಾಖೆ ಖಾತೆಗೆ ರಾಜೀನಾಮೆ ಕೊಡಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಭಾಗಿಯಾಗಿದ್ದು ಅರಣ್ಯ ಕಾಯಿದೆಯಡಿ ದೂರು ದಾಖಲಾಗಿರುವ ಆನಂದ್ ಸಿಂಗ್ ಅಂತವರಿಗೆ ಅರಣ್ಯ ಇಲಾಖೆಯ ಖಾತೆ ನೀಡಿದ್ದಾರೆ. ಪ್ರಕರಣ ಎದರಿಸುತ್ತಿರುವವರನ್ನೇ ಸಚಿವರನ್ನಾಗಿ ನೇಮಿಸಿರುವುದು ಬಿಜೆಪಿ ಭ್ರಷ್ಟಾಚಾರ ಪೋಷಕ ಸರ್ಕಾರವೆನ್ನುವುದಕ್ಕೆ ಸಾಕ್ಷಿ ಎಂದು ಕುಟುಕಿದರು.ಯಡಿಯೂರಪ್ಪ ತಕ್ಷಣವೇ ಅರಣ್ಯ ಖಾತೆ ಹಿಂಪಡೆಯಬೇಕು ಇಲ್ಲವೇ ಆನಂದ್ ಸಿಂಗ್ ರಾಜೀನಾಮೆ ಕೊಡಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದರು.