ಎಫ್‌.ಎಲ್‌.ಎನ್ ಕಲಿಕಾ ಹಬ್ಬ

FLN Kalika Habba

ಧಾರವಾಡ 20: ತರಗತಿ ಕೊಠಡಿಯ ನಾಲ್ಕು ಗೋಡೆಗಳ ನಡುವೆ ನಡೆಯುವ ಕಲಿಕೆ ಮಕ್ಕಳಿಗೆ ಹೆಚ್ಚು ಸಂತಸವನ್ನು ನೀಡಲಾರದು. ತಾವು ಕಲಿತ ಪಾಠಗಳನ್ನೇ ವಿಭಿನ್ನವಾಗಿ ಸ್ಪರ್ಧಾತ್ಮಕ ಚಟುವಟಿಕೆಗಳ ಮೂಲಕ ತೆರೆದಿಟ್ಟರೆ, ಮಕ್ಕಳಿಗೆ ಕಲಿಕೆಯೇ ಒಂದು ಹಬ್ಬವಾಗುತ್ತದೆ. ಈ ನಿಟ್ಟಿನಲ್ಲಿ ಸಮಗ್ರ ಶಿಕ್ಷಣ ಕರ್ನಾಟಕ ವತಿಯಿಂದ ಈ ಶೈಕ್ಷಣಿಕ ವರ್ಷದ ಫೆಬ್ರವರಿಯಲ್ಲಿ 1 ರಿಂದ 5 ನೇ ತರಗತಿ ಮಕ್ಕಳಿಗೆ "ಮೂಲಭೂತ ಸಾಕ್ಷರತೆ ಮತ್ತು ಸಂಖ್ಯಾಜ್ಞಾನದ ಚಟುವಟಿಕೆಗಳ ಬಲವರ್ಧನೆಗೆ "ಕಲಿಕಾ ಹಬ್ಬ ನಡೆಸುತ್ತಿದೆ. 

ದೇಶದಲ್ಲೇ ಮೊದಲು ಎಫ್‌.ಎಲ್‌.ಎನ್ ಹಬ್ಬವನ್ನು ಶಾಲಾ ಶಿಕ್ಷಣ ಇಲಾಖೆ ಸಂಘಟಿಸಿದೆ. ರಾಜ್ಯದ 4103 ಕ್ಲಸ್ಟರ್‌ಗಳಲ್ಲಿ ನಡೆದ ಈ ವಿಶಿಷ್ಟ ಕಾರ್ಯಕ್ರಮದಲ್ಲಿ ಒಂಬತ್ತು ಲಕ್ಷಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದಾರೆ. 21ಸಾವಿರ ಶಿಕ್ಷಕರು ಈ ಹಬ್ಬವನ್ನು ಆಯೋಜಿಸಲು ಸಂನ್ಮೂಲ ವ್ಯಕ್ತಿಯಾಗಿ ಹಾಗೂ ನೀರ್ಣಾಯಕರಾಗಿ ಸುಮಾರು 30 ಸಾವಿರ ಶಾಲೆಗಳ ಒಂದು ಲಕ್ಷದಷ್ಟು ಶಿಕ್ಷಕರು ನೇರವಾಗಿ ಭಾಗವಹಿಸಿದ್ದಾರೆ. ಇಂತದ್ದೊಂದು ಅಭೂತಪೂರ್ವ ಕಾರ್ಯಕ್ರಮವು ಹಬ್ಬವಾಗಿ ಮುಗಿಯುತ್ತದೆ. ಆದರೆ, ಹಬ್ಬದ ಸ್ಪೂರ್ತಿ ಮತ್ತು ಸಂಭ್ರಮಗಳು ತರಗತಿ ಕೋಣೆಯ ನಿತ್ಯದ ರೂಢಿಯಾಗಿ ಮುಂದುವರಿಯಲಿದೆ. 

2020ರ ಪಠ್ಯಕ್ರಮ ನೆಲೆಗಟ್ಟು ಅನುಭವಾತ್ಮಕ ಕಲಿಕೆಗೆ ಮಹತ್ವ ನೀಡಿದ್ದಲ್ಲದೆ, ಮಗುವೇ ಜ್ಞಾನದ ನಿರ್ಮಾತೃರಾಗಬೇಕು ಎನ್ನುತ್ತದೆ. 2027 ಕ್ಕೆ ಎಫ್‌.ಎಲ್‌.ಎನ್ ಮೂಲ ಜ್ಞಾನ ನಿತ್ಯ ಜೀವನದಲ್ಲಿ  ಅನ್ವಯ ಪೂರ್ತಿಗೊಂಡು ಭಿನ್ನ ದಾರಿಗೆ ಹೊರಳುವುದು ಅಷ್ಟು ಸುಲಭವಲ್ಲ. ಈ ಪ್ರಯತ್ನಕ್ಕೆ ಶಿಕ್ಷಣದ ಎಲ್ಲ ಭಾಗಿದಾರರ ಬೆಂಬಲ ಅವಶ್ಯಕ. ಅನುಭವ ಕೇಂದ್ರಿತ ವಿಧಾನಗಳನ್ನು ಮುಂದುವರಿಸುವ ನಿಟ್ಟಿನಲ್ಲಿ ಮಾಡಬಹುದಾದ ಪ್ರಯತ್ನಗಳ ಕಲಿಕಾ ಹಬ್ಬವು ತರಗತಿ ಕೋಣೆಯ ಗೋಡೆಗೆ ತೆರೆದ ದೊಡ್ಡ ಕಿಟಕಿಯಾಗಿದೆ. ಕಲಿಕೆಯ ಸಂಭ್ರಮವನ್ನು ಸಮುದಾಯದ ಕಣ್ಣೆದುರು ಹಿಡಿಯುವ ಪ್ರಯತ್ನವನ್ನು ಕಲಿಕಾ ಹಬ್ಬದ ಮೂಲಕ ಮಾಡಲಾಗುತ್ತಿದೆ. 

ಎಫ್‌.ಎಲ್‌.ಎನ್ ಕಲಿಕಾ ಹಬ್ಬ ಎಂದರೆ? 

ಮೂಲಭೂತ ಸಾಕ್ಷರತೆ ಮತ್ತು ಸಂಖ್ಯಾಶಾಸ್ತ್ರ ಓದುವುದು, ಬರೆಯುವುದು ಮತ್ತು ಗಣಿತಶಾಸ್ತ್ರದಲ್ಲಿನ ಮೂಲಭೂತ ಕೌಶಲ್ಯಗಳನ್ನು ಸೂಚಿಸುತ್ತದೆ. ಅವುಗಳನ್ನು ನಿಜ ಜೀವನದ ಸನ್ನಿವೇಶಗಳಿಗೆ ಅನ್ವಯಿಸುವ ಸಾಮರ್ಥ್ಯವನ್ನು ಒಳಗೊಂಡಿರುತ್ತದೆ ಇದನ್ನೆ ಎಫ್‌.ಎಲ್‌.ಎನ್‌. ಆದರೇ ಕಲಿಕೆಯು ಹಬ್ಬವಾಗಬೇಕೆಂದರೆ ಕಲಿಕೆಯ ಕ್ರಿಯೆಯು ಮಗುವಿಗೆ ಸಂಭ್ರಮವಾಗಬೇಕು. ಮಗುವಿಗಷ್ಟೇ ಅಲ್ಲ, ಊರಿಗೆ ಊರೇ ಸಂಭ್ರಮಪಟ್ಟರಷ್ಟೇ ಅಲ್ಲವೇ ಹಬ್ಬ? ಅಪರಿಮಿತ ಸ್ವಾತಂತ್ರ-್ಯ ಮತ್ತು ಸಂತೋಷ ಮಾತ್ರ ಮಗುವಿಗೆ ಹಬ್ಬದ ಸಡಗರವನ್ನು ಉಂಟುಮಾಡಬಲ್ಲದು. ತನ್ನದೇ ಲೋಕವೊಂದನ್ನು ವಿಸ್ತರಿಸಿಕೊಳ್ಳುತ್ತಾ ಮಗುವು ಎಲ್ಲ ಸೀಮೆಗಳನ್ನು ಉಲ್ಲಂಘಿಸಿ ವಿಶ್ವಮಾನವನಾಗಲು ಇಂತಹ ಸಡಗರ ಅನಿವಾರ್ಯ ಕೂಡಾ. ಮಕ್ಕಳ ಸಂತಸ ಮತ್ತು ಚೈತನ್ಯವನ್ನೇ ಬಂಡವಾಳ ಮಾಡಿಕೊಂಡ ಕಲಿಕೆಯ ಹಬ್ಬ. 

ಕಲಿಕಾ ಹಬ್ಬದಲ್ಲಿ ಏಳು ಚಟುವಟಿಕೆಯ. ಪ್ರತಿ ಕಾರ್ನರಿನಲ್ಲಿಯೂ ಗಂಟೆಗಳಷ್ಟು ಕಾಲ ಚಟುವಟಿಕೆ ನಡೆಸಿದ ತಂಡವು ಮುಂದಿನ ಚಟುವಟಿಕೆಯಗೆ ಮಗು ಬೇರೆ ಕೊಠಡಿಗೆ  ತೆರಳುತ್ತದೆ. ಪ್ರತಿ ಮಗುವೂ ದಿನಗಳಲ್ಲಿ ಎಲ್ಲ ಕಾರ್ನರ್‌ಗಳನ್ನು ಭೇಟಿಯಾಗಿ ಹಲವು ಚಟುವಟಿಕೆಗಳನ್ನು ನಡೆಸುತ್ತದೆ. ಮಕ್ಕಳು ಕಲಿಯುವ ಸಂಭ್ರಮವನ್ನು ದೊಡ್ಡವರು ಕಣ್ತುಂಬಿಕೊಳ್ಳಲು ಇಲ್ಲಿ ಅವಕಾಶ ಕಲ್ಪಿಸಲಾಗಿದೆ ಹಾಗೂ ಈ ಬಾರಿ ಭಾಗವಹಿಸಲು ಅವಕಾಶ ನೀಡಲಯಿತು. ತರಗತಿ ಕೋಣೆಯು ತನ್ನ ಸ್ಮರಣೆ ಆಧಾರಿತ ಕಲಿಕೆಯ ವಿಧಾನಗಳಿಂದ ಹೊರಬರಲು ಕಲಿಕೆಯ ಕುರಿತಾದ ಸಮಾಜದ ದೃಷ್ಟಿಕೋನದಲ್ಲೇ ಬದಲಾವಣೆ ಬೇಕು. 

ಬೆಳ್ಳಿಗಟ್ಟಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶಿಷ್ಟ ಕಲಿಕಾ ಹಬ್ಬ; 

ಗಟ್ಟಿ ಓದು, ಕಥೆ, ವಿನೋದ್ ಕೈಬರಹ, ಸಂತೋಷದಾಯಕ ಗಣಿತ, ಮೆಮೊರಿ ಪರೀಕ್ಷೆ, ರಸಪ್ರಶ್ನೆ ಪೋಷಕರು ಮತ್ತು ಮಕ್ಕಳ ಸಹ ಸಂಬಂಧದ ವಲಯ ಹೀಗೆ ಏಳು ವಲಯಗಳಲ್ಲಿ ಅತ್ಯಂತ ಆಕರ್ಷಣೀಯವಾದ ಚಟುವಟಿಕೆಯನ್ನು ಏರಿ​‍್ಡಸಲಾಗಿತ್ತು. ನಿರ್ವಾಹಕರು ತಮ್ಮ ತಮ್ಮ ವಲಯಗಳಲ್ಲಿ ಅತ್ಯಾಕರ್ಷಕ ಚಟುವಟಿಕೆಗಳನ್ನು ಮಾಡುವುದರಿಂದ ಕಲಿಕಾ ಭಾಗವನ್ನು ಯಶಸ್ವಿಗೊಳಿಸಲು ಸಹಕರಿಸಿದರು. 

ಕಲಿಕಾ ಹಬ್ಬವು ಶೈಕ್ಷಣಿಕ ಪರಿಸರದ ಬೆಂಬಲ ವ್ಯವಸ್ಥೆಯನ್ನು ಗಟ್ಟಿಗೊಳಿಸುವುದು. ಪರಸ್ಪರ ಹಂಚಿಕೊಂಡ ಕಲಿಕೆಯ ಅನುಭವಗಳು ಮಕ್ಕಳ ಹಾಗೂ ಒಂದು ಶಾಲೆಯ ಸಾಮೂಹಿಕ ಬೆಳವಣಿಗೆ ಮತ್ತು ಸುಧಾರಣೆಯನ್ನು ಪ್ರೋತ್ಸಾಹಿಸುತ್ತವೆ ಎಂದು ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿಗಳಾದ  ಕುಮಾರ್ ಕೆ.ಎಫ್ ಹೇಳಿದರು. 

ಅವರು ಮನಗುಂಡಿ ಕ್ಲಸ್ಟರ ಮಟ್ಟದ ಕಲಿಕ ಹಬ್ಬವು ಬೆಳ್ಳಿಗಟ್ಟಿ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡ ಕಲಿಕಾ ಹಬ್ಬ ಮುಖ್ಯ ಅತಿಥಿಯಾಗಿ ಮಾತನಾಡುತ್ತಾ ಮಕ್ಕಳು ಮತ್ತು ಶಿಕ್ಷಕರು ಜೊತೆಯಾಗಿ ಪೋಷಕರನ್ನು ಹಾಗೂ ಸಮುದಾಯದ ಸದಸ್ಯರನ್ನು ಪರಸ್ಪರ ಭೇಟಿಯಾಗಲು, ಅವರನ್ನು ಸಂತಸದಾಯಕ ವಾತಾವರಣದ ಕಡೆಗೆ ಸ್ವಾಗತಿಸಲು ಮತ್ತು ಕಲಿಕೆಯ ಅವಕಾಶವನ್ನು ಸಮುದಾಯದೊಂದಿಗೆ ವಿಸ್ತರಿಸಲು ಕ್ಲಸ್ಟರ್ ಮಟ್ಟದಲ್ಲಿ ಕಲಿಕಾ ಹಬ್ಬವನ್ನು ಆಯೋಜಿಸಲು ಉದ್ದೇಶಿಸಲಾಗಿದೆ. ಇದರಿಂದಾಗಿ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಆ ಕ್ಲಸ್ಟರ್ ಒಳಗಿನ ಶಾಲೆಗಳು ತಮ್ಮೊಳಗಿರುವ ಉತ್ತಮ ಅಭ್ಯಾಸಗಳನ್ನು ಪರಸ್ಪರ ಹಂಚಿಕೊಳ್ಳಲು ಒಂದು ವೇದಿಕೆಯನ್ನು ಒದಗಿಸಿದಂತಾಗುತ್ತದೆ ಎಂದರು. 

ಮನಗುಂಡಿ ಗ್ರಾಮ ಪಂಚಾಯಿತಿದ ಅಧ್ಯಕ್ಷರಾದ ಬಸವಣ್ಣೆವ್ವ ಅಮ್ಮಿನಭಾವಿ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು. ನಂತರ ಮಾತನಾಡಿ, ಕಲಿಕಾ ಹಬ್ಬ ವಿದ್ಯಾರ್ಥಿಗಳ ಜೀವನಕ್ಕೆ ಬೆಳಕಾಗಲಿ. ಪಾಲಕರು ಪೋಷಕರು ವಿದ್ಯಾರ್ಥಿಗಳಿಗೆ ಉತ್ತಮ ಸಂಸ್ಕಾರವನ್ನು ಬೆಳೆಸಲಿ ಹಾಗೂ, ಸರ್ಕಾರಿ ಶಾಲೆಗೆ ಸೇರಿಸಿ ಎಂಬ ಕಿವಿ ಮಾತನ್ನು ಹೇಳಿದರು. ಮಕ್ಕಳನ್ನು ವಿವಿಧ ಕಲಿಕಾ ಆಟಗಳಲ್ಲಿ ಮತ್ತು ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಾಗ, ತರಗತಿ ಪ್ರಕ್ರಿಯೆಯಲ್ಲಿ ನೀರೀಕ್ಷಿತ ಕಲಿಕಾ ಫಲಶೃತಿಯನ್ನು ಪಡೆಯಲು ಸಾಧ್ಯವಿದೆ. 

ಎಸ್,ಡಿ,ಎಮ್‌.ಸಿ ಅಧ್ಯಕ್ಷರಾದ ವಿರುಪಾಕ್ಷಿ ಬ ಕಂಚನಳ್ಳಿ ಮಾತನಾಡುತ್ತಾ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬವು ಸಹಯೋಗದ ಕಲಿಕೆಗೆ ಸ್ಥಳಾವಕಾಶವನ್ನು ನೀಡುವ ಮೂಲಕ, ಸಮುದಾಯದೊಳಗಿನ ವಿವಿಧ ಭಾಗೀದಾರರ ಭಾಗವಹಿಸುವಿಕೆಯನ್ನು ಉತ್ತೇಜಿಸಬೇಕೆನ್ನುವುದು ಇಲಾಖೆಯ ಪ್ರಮುಖ ಆಶಯವಾಗಿದೆ.ಇದರಿಂದ ಸರಕಾರಿ ಶಾಲೆಯಲ್ಲಿ ಕಲಿತ ಉನ್ನತ ಸ್ಥಾನದಲ್ಲಿ ಏರಲು ಸಾಧ್ಯವಾಗಿದೆ, ಆಗಾಗಿ ಮಕ್ಕಳು ಸರಕಾರಿ ಶಾಲೆಯಲ್ಲಿ ಗುಣಮಟ್ಟ ಶಿಕ್ಷಣ ಪಡೆಯಲು ಸಾಧ್ಯವಾಗಿದೆ ಎಂದರು. 

ಬಿಆರಪಿ ಎಸ್,ವಿ.ಸಂತಿ, ಮಾಲತೇಶ ನಿಂಕ್ಕನವರ, ಮುಖ್ಯಾಧ್ಯಾಪಕರಾದ ಮಾರುತಿ ಛಬ್ಬಿ,ಗ್ರಾಮ ಪಂಚಾಯತಿಯ ಅಧ್ಯಕ್ಷರು, ಸರ್ವಸದಸ್ಯರುಗಳು, ಎಸ್,ಡಿ,ಎಮ.ಸಿ ಅಧ್ಯಕ್ಷರು, ಸರ್ವಸದಸ್ಯರುಗಳು, ಬೆಳ್ಳಿಗಟ್ಟಿ ಶಾಲೆಯ ಎಲ್ಲ ಶಿಕ್ಷಕರು.ವಿವಿಧ ಶಾಲೆಯಿಂದ ಆಗಮಿಸಿದ ಸಂಪನ್ಮೂಲ ವ್ಯಕ್ತಿಗಳು, ಮುಖ್ಯಾಧ್ಯಾಪಕರು ಹಾಗೂ ಶಿಕ್ಷಕರ ವೃಂದ ಉಪಸ್ಥಿತರಿದ್ದರು. 

ಕೊನೆಯಲ್ಲಿ ಪ್ರತಿ ವಲಯದಲ್ಲಿಯೂ ಸ್ಪರ್ಧೆಯನ್ನು ನಡೆಸಿ ವಿಜೇತರಿಗೆ ಹಾಗೂ ವಿವಿಧ ಶಾಲೆಗಳಿಂದ ಆರಂಭಿಸಿದಂತಹ ಎಲ್ಲ ವಿದ್ಯಾರ್ಥಿಗಳಿಗೂ ಕೂಡ ಬಹುಮಾನವನ್ನು ವಿತರಿಸಲಾಯಿತು.ಒಟ್ಟಾರೆ ಇಲಾಖೆಯ ವಿನೂತನ ಕಾರ್ಯಕ್ರಮ ಮಕ್ಕಳಲ್ಲಿ ಶೈಕ್ಷಣಿಕ ಜ್ಞಾನವನ್ನು ಹೆಚ್ಚಿಸುವುದಲ್ಲದೆ ಸಂತಸದಾಯಕ ಕಲಿಕೆಯ ಮೂಲಕ ವಿದ್ಯಾರ್ಥಿಗಳ ಮನೋವಿಕಾಸಕ್ಕೆ ಕಾರಣವಾಯಿತು. 

ಮನಗುಂಡಿ ಗ್ರಾಮ ಪಂಚಾಯಿತಿದ ಅಧ್ಯಕ್ಷರಾದ ಬಸವಣ್ಣೆವ್ವ ಅಮ್ಮಿನಭಾವಿ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು. ಕಲಿಕಾ ಹಬ್ಬವು ಶೈಕ್ಷಣಿಕ ಪರಿಸರದ ಬೆಂಬಲ ವ್ಯವಸ್ಥೆಯನ್ನು ಗಟ್ಟಿಗೊಳಿಸುವುದು. ಪರಸ್ಪರ ಹಂಚಿಕೊಂಡ ಕಲಿಕೆಯ ಅನುಭವಗಳು ಮಕ್ಕಳ ಹಾಗೂ ಒಂದು ಶಾಲೆಯ ಸಾಮೂಹಿಕ ಬೆಳವಣಿಗೆ ಮತ್ತು ಸುಧಾರಣೆಯನ್ನು ಪ್ರೋತ್ಸಾಹಿಸುತ್ತವೆ ಎಂದು ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿಗಳಾದ  ಕುಮಾರ್ ಕೆ.ಎಫ್ ಹೇಳಿದರು. 

ಗ್ರಾಮ ಪಂಚಾಯತಿಯ ಅಧ್ಯಕ್ಷರು, ಸರ್ವಸದಸ್ಯರುಗಳು, ಎಸ್,ಡಿ,ಎಮ.ಸಿ ಅಧ್ಯಕ್ಷರು, ಸರ್ವಸದಸ್ಯರುಗಳು, ಬಿಆರಸಿ,ಬಿಆರಪಿ, ಮುಖ್ಯಾಧ್ಯಾಪಕರಾದ, ಬೆಳ್ಳಿಗಟ್ಟಿ ಶಾಲೆಯ ಎಲ್ಲ ಶಿಕ್ಷಕರು.ವಿವಿಧ ಶಾಲೆಯಿಂದ ಆಗಮಿಸಿದ ಸಂಪನ್ಮೂಲ ವ್ಯಕ್ತಿಗಳು, ಮುಖ್ಯಾಧ್ಯಾಪಕರು ಹಾಗೂ ಶಿಕ್ಷಕರ ವೃಂದ ಉಪಸ್ಥಿತರಿದ್ದರು. 

ಕೊನೆಯಲ್ಲಿ ಪ್ರತಿ ವಲಯದಲ್ಲಿಯೂ ಸ್ಪರ್ಧೆಯನ್ನು ನಡೆಸಿ ವಿಜೇತರಿಗೆ ಹಾಗೂ ವಿವಿಧ ಶಾಲೆಗಳಿಂದ ಆರಂಭಿಸಿದಂತಹ ಎಲ್ಲ ವಿದ್ಯಾರ್ಥಿಗಳಿಗೂ ಕೂಡ ಬಹುಮಾನವನ್ನು ವಿತರಿಸಲಾಯಿತು.ಒಟ್ಟಾರೆ ಇಲಾಖೆಯ ವಿನೂತನ ಕಾರ್ಯಕ್ರಮ ಮಕ್ಕಳಲ್ಲಿ ಶೈಕ್ಷಣಿಕ ಜ್ಞಾನವನ್ನು ಹೆಚ್ಚಿಸುವುದಲ್ಲದೆ ಸಂತಸದಾಯಕ ಕಲಿಕೆಯ ಮೂಲಕ ವಿದ್ಯಾರ್ಥಿಗಳ ಮನೋವಿಕಾಸಕ್ಕೆ ಕಾರಣವಾಯಿತು.