ಲೋಕದರ್ಶನ ವರದಿ
ಶಿರಹಟ್ಟಿ 29: ತಾಲೂಕಿನ ಎಲ್ಲಾ ಇಲಾಖೆಗಳು ಎಸ್ಸಿ ಮತ್ತು ಎಸ್ಟಿ ಜನಾಂಗಕ್ಕೆ ಸರಕಾರದಿಂದ ಬರುವ ಎಲ್ಲ ಯೋಜನೆಗಳನ್ನು ಸಮಪರ್ಕವಾಗಿ ಒದಗಿಸಬೇಕು. ಎಸ್ಸಿ ಮತ್ತು ಎಸ್ಟಿ ಎಂದ ಮಾತ್ರಕ್ಕೆ ನಿರ್ಲಕ್ಷ ಧೋರಣೆಯನ್ನು ಅನುಸರಿಸಿದರೆ ನಿಮ್ಮ ಮೇಲೆ ನಿರ್ಧಾಕ್ಷಣ್ಯವಾಗಿ ಎಫ್ಐಆರ್ ದಾಖಲಿಸುವ ಅವಕಾಶವಿದೆ. ಆದ್ದರಿಂದ ಜಾಗೃತಿಯಿಂದ ಕರ್ತವ್ಯ ನಿರ್ವಹಣೆಯನ್ನು ಮಾಡಬೇಕೆಂದು ತಹಶೀಲ್ದಾರ ಯಲ್ಲಪ್ಪ ಗೋಣೆಣ್ಣವರ ತಾಲೂಕ ಮಟ್ಟದ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಅವರು ಪಟ್ಟಣದ ತಹಶೀಲ್ದಾರ ಕಚೇರಿಯಲ್ಲಿನ ಸಭಾಭವನದಲ್ಲಿ ತಾಲೂಕ ಮಟ್ಟದ ಪರಿಶಿಷ್ಠ ಜಾತಿ ಹಾಗೂ ಪರಿಶಿಷ್ಠ ವರ್ಗದವರ ಮೇಲಿನ ದೌರ್ಜನ್ಯ ನಿಯಂತ್ರಣ ಜಾಗೃತಿ ಸಮಿತಿ ತ್ರೈಮಾಸಿಕ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
72 ವರ್ಷದ ಹನುಮಂತಪ್ಪ ಲಮಾಣಿ ಎಂಬ ವೃದ್ಧನ ಮೇಲೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ದೌರ್ಜನ್ಯ ನಡೆಸಿರುವುದನ್ನು ಖಂಡಿಸಿ ಸಮಿತಿ ಸದಸ್ಯ ಜಾನು ಲಮಾಣಿ ತೀವೃ ತರಾಟೆಗೆ ತೆಗೆದುಕೊಂಡರು. ಆ ವಯೋವೃದ್ದನನ್ನು ಅರಣ್ಯ ಇಲಖೆಯ ಸಿಬ್ಬಂದಿಗಳು ಸಿಕ್ಕಾಪಟ್ಟಿಯಾಗಿ ಥಳಿಸಿ ಹೋಗಿದ್ದಾರೆ. ಆ ವ್ಯಕ್ತಿ ಕೇಸ್ ದಾಖಲಿಸುತ್ತಾರೆ ಎಂದು ಗೊತ್ತಾದ ತಕ್ಷಣ ವಿನಂತಿಸಿಕೊಂಡಿದ್ದಾರೆ. ಜೊತೆಗೆ ಹೊಡೆದ ಹೊಡತಕ್ಕೆ ಆಸ್ಪತ್ತೆಯನ್ನು ಸೇರಿದ್ದರು ಯಾವೊಬ್ಬ ಅಧಿಕಾರಿ ಆತನ ಬಗ್ಗೆ ಗಮನ ಹರಿಸಿಲ್ಲ. ಇದರು ಆಧಿಕಾರಿಗಳಿಂದ ನಡೆದ ದೌರ್ಜನ್ಯ ಎಂದು ಆಕ್ರೋಶಿತರಾದರು.
ಸಭೆಗೆ ಅರಣ್ಯ ಇಲಾಖೆಯ ಅಧಿಕಾರಿ ಬರದೇ ಆದೀನ ಅಧಿಕಾರಿ ಉಪಸ್ಥಿತರಿದ್ದರರಿಂದ ತಹಶೀಲ್ದಾರ ಮಧ್ಯ ಪ್ರವೇಶಿಸಿ ಮಾಹಿತಿ ಪಡೆದು ಮುಂದಿನ ಕ್ರಮಕ್ಕೆ ಮುಂದಾಗಲಾಗುವುದು ಎಂದು ಹೇಳಿದರು.
ತಾಲೂಕಿನಲ್ಲಿನ ಪ್ರತಿ ಗ್ರಾಮದಲ್ಲಿ ಪ್ರತಿ ತಿಂಗಳಲ್ಲಿ ಒಂದು ಬಾರಿ ದಲಿತ ಸಭೆಯನ್ನು ನಡೆಸಬೇಕು ನಿಯಮಾವಳಿ ಇದ್ದರೂ, ಈವರೆಗೆ ಒಂದೂ ಸಭೆಯನ್ನು ನಡೆಸದೇ ಇರುವುದು ಇಲಾಖೆ ಅನುಸರಿಸುತ್ತಿರುವ ನಿರ್ಲಕ್ಷ ಎಂದು ದೂರಿದರು. ಸಭೆಗೆ ಆಗಮಿಸಿದ್ದ ಇಲಾಖೆಯ ಸಿಬ್ಬಂದಿ ಈಗಾಗಲೆ ಸಭೆಯನ್ನು ಜರುಗಿಸಲಾಗಿದೆ. ಅದಕ್ಕೆ ಸಂಬಂದಿಸಿದಂತಹ ಕಾಗದ ಪತ್ರಗಳನ್ನು ಪೂರೈಸಲಾಗುವುದು ಎಂದು ಹೇಳಿದರು.
ಪಶು ಭಾಗ್ಯ ಯೋಜನೆಯಲ್ಲಿ ಅರ್ಹ ಫಲಾನುಭವಿಗಳಿಗೆ ಸೌಲಭ್ಯ ಒದಗಿಸಿ ಪಶುಭಾಗ್ಯ ಯೋಜನೆಯಲ್ಲಿ ಶಾಸಕರು ಸೂಚಿಸಿದ ಫಲಾನುಭವಿಗಳನ್ನೇ ಆಯ್ಕೆ ಮಾಡಿ, ಆದರೆ ಆಯ್ಕೆಯಾದ ಎಲ್ಲ ಫಲಾನುಭವಿಗಳು ಹಸುಗಳನ್ನು ಖರೀದಿ ಮಾಡಿ, ಹೈನುಗಾರಿಕೆಯನ್ನು ಆರಂಭಿಸಿ ಅದರಿಂದ ಲಾಭ ಪಡೆದುಕೊಂಡು ಆಥರ್ಿಕವಾಗಿ ಸಬಲರಾಗಬೇಕು. ಹಸುಗಳನ್ನೇ ಖರೀದಿ ಮಾಡದೇ ಇರವವರಗೆ ಈ ಯೋಜನೆಯನ್ನು ಒದಗಿಸಬಾರದು ಎಂದು ಜಾನು ಲಮಾಣಿ ಪಶು ವೈದ್ಯಾಧಿಕಾರಿ ಓಲೇಕಾರರವರಿಗೆ ಸೂಚಿಸಿದರು.
ಅರಣ್ಯದ ಅಂಚಿನಲ್ಲಿ ವಾಸಿಸುವವರನ್ನು ಒಕ್ಕಲೆಬ್ಬಿಸಬೇಡಿ ತಾಲೂಕಿನ ಕೆರಳ್ಳಿತಾಂಡೆ ಅರಣ್ಯದ ಅಂಚಿನಲ್ಲಿ ವಾಸಿಸುವವರು ಕಾಯ್ದೆಯ ಪ್ರಕಾರವಾಗಿ ಮೂರು ತೆಲೆಮಾರುಗಳಿಂದ ವಾಸಿಸುತ್ತಿದ್ದರೆ ಅವರನ್ನು ಒಕ್ಕಲೆಬ್ಬಿಸುವುದು ಕಾಯ್ದೆ ಬಾಹಿರ, ಅರಣ್ಯ ಸಿಬ್ಬಂದಿಗಳು ಜೆಸಿಬಿಯಿಂದ ಅವರನ್ನು ಒಕ್ಕಲೆಬ್ಬಿಸುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಇನ್ನೊಂದು ಕಡೆ ಅದೇ ಗ್ರಾಮದಲ್ಲಿ ಅದೇ ಸ್ಥಳದಲ್ಲಿ ವಾಸಿಸುವವರಿಗೆ ಮನೆ ಉತಾರಗಳನ್ನು ನೀಡುತಿದ್ದಾರೆ. ಇದು ಹೇಗೆ ಎಂದು ಜಾನು ಲಮಾಣಿ ತಹಶೀಲ್ದಾರರವರನ್ನು ಪ್ರಶ್ನಿಸಿದರು. ತಹಶೀಲ್ದಾರರವರು ಮಾತನಾಡಿ ಅವರಿಗೆ ಉತಾರ ಕೊಡವುದಕ್ಕೆ ಬರುವುದಿಲ್ಲ. ಅಧಿಕಾರಿಗಳಿಂದ ಮಾಹಿತಿ ಪಡೆದು ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ಸಭೆಯಲ್ಲಿ ತಾಪಂ ಅಧ್ಯಕ್ಷೆ ಗಿರಿಜವ್ವ ಲಮಾಣಿ, ಜಾಗೃತಿ ಸಮಿತಿಯ ಸದಸ್ಯ ಹಾಲಪ್ಪ ಸಂಕದಾಳ, ತಾಪಂ ಇಒ ಡಾ. ನಿಂಗಪ್ಪ ಓಲೇಕಾರ ಹಾಗೂ ತಾಲೂಕ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.