ವಿದ್ಯಾರ್ಥಿನಿಯರು ಸಮಗ್ರ ಅಭಿವೃದ್ದಿಯತ್ತ ಸಾಗಲು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳು ಅತ್ಯಂತ ಸಹಕಾರಿಯಾಗಿದೆ
ರಾಣಿಬೆನ್ನೂರ 19: ವಿದ್ಯಾರ್ಥಿನಿಯರು ಸಮಗ್ರ ಅಭಿವೃದ್ದಿಯತ್ತ ಸಾಗಲು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳು ಅತ್ಯಂತ ಸಹಕಾರಿಯಾಗಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ಡಾ. ಆರ್.ಎಂ. ಕುಬೇರ್ಪ ಹೇಳಿದರು.
ಇಲ್ಲಿನ ಹಲಗೇರಿ ರಸ್ತೆಯ ಬಿ.ಎ.ಜೆ.ಎಸ್.ಎಸ್. ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯದಲ್ಲಿ 2024-25 ನೇ ಸಾಲಿನ ಪ್ರಥಮ ವರ್ಷದ ವಿದ್ಯಾರ್ಥಿನಿಯ ಸ್ವಾಗತ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿನಿಯರು ಮೊಬೈಲ್ ಬಳಕೆಯಿಂದ ದೂರವಿದ್ದು ಗ್ರಂಥಾಲಯದ ಬಳಕೆ ಮಾಡಿಕೊಂಡು ಪುಸ್ತಕ ಓದುವ ಹವ್ಯಾಸ ಬೆಳಸಿಕೊಂಡರೆ ಬದುಕು ಹಸನಾಗುತ್ತದೆ ಎಂದರು.
ಪ್ರಾಚಾರ್ಯ ಡಾ. ಸುರೇಶ ಬಣಕಾರ, ಪ್ರೋ.ಎಚ್. ಎ. ಬಿಕ್ಷಾವರ್ತಿಮಠ, ಪ್ರೊ. ದೇವರಾಜ ಹಂಚಿನಮನಿ, ದೀಪಾ ಬಾಗನಕಟ್ಟಿ, ರಿಯಾನಾ ಬಾನು, ವಿದ್ಯಾಶ್ರೀ. ಕೆ.ಕೆ, ಆಡಳಿತ ಮಂಡಳಿ ಸದಸ್ಯರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದರು.
ಫೋಟೊ19ಆರ್‌ಎನ್‌ಆರ್01ರಾಣಿಬೆನ್ನೂರ: ಇಲ್ಲಿನ ಹಲಗೇರಿ ರಸ್ತೆಯ ಬಿ.ಎ.ಜೆ.ಎಸ್.ಎಸ್. ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯದಲ್ಲಿ 2024-25 ನೇ ಸಾಲಿನ ಪ್ರಥಮ ವರ್ಷದ ವಿದ್ಯಾರ್ಥಿನಿಯ ಸ್ವಾಗತ ಸಮಾರಂಭವನ್ನು ಡಾ. ಆರ್.ಎಂ. ಕುಬೇರ್ಪ ಉದ್ಘಾಟಿಸಿದರು.