ಧಾರವಾಡ 09; ವಿವಿಧ ಕಾಖರ್ಾನೆಗಳಲ್ಲಿ ಗುತ್ತಿಗೆ ಆಧಾರದಲ್ಲಿ ದುಡಿಯುತ್ತಿರುವ ಕಾಮರ್ಿಕರಿಗೂ ಸಹ ಖಾಯಂ ಸಿಬ್ಬಂದಿಗೆ ಒದಗಿಸುವ ಸಾರಿಗೆ ಸೌಕರ್ಯವನ್ನು ವಿಸ್ತರಿಸಬೇಕು. ಬೇಲೂರು ಕೈಗಾರಿಕಾ ಪ್ರದೇಶಕ್ಕೆ ವಾಯವ್ಯ ಕನರ್ಾಟಕ ರಸ್ತೆ ಸಾರಿಗೆ ಸಂಸ್ಥೆಯು ಬಸ್ಗಳನ್ನು ಹೆಚ್ಚಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದಶರ್ಿ ಆರ್.ಎಸ್. ಚಿಣ್ಣನ್ನವರ ಹೇಳಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು ವಿವಿಧ ಇಲಾಖೆಗಳ ಸಹಯೋಗದಲ್ಲಿ ಬೇಲೂರು ಕೈಗಾರಿಕಾ ಪ್ರದೇಶದ ಎಡಿಎಂ ಅಗ್ರೋ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್ನ ಸಭಾಂಗಣದಲ್ಲಿ ಕಾಮರ್ಿಕ ದಿನದ ಪ್ರಯುಕ್ತ ಆಯೋಜಿಸಿದ್ದ ಸರಕು ಸಾಗಣೆ ವಾಹನಗಳಲ್ಲಿ ಕಾನೂನು ಬಾಹಿರ ಪ್ರಯಾಣ ಕುರಿತ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸರಕು ಸಾಗಣೆ ಮತ್ತು ಕಟ್ಟಡ ನಿಮರ್ಾಣ ಸಾಮಗ್ರಿಗಳ ಪೂರೈಕೆ ವಾಹನಗಳಲ್ಲಿ ಕಾನೂನು ಬಾಹಿರ ಪ್ರಯಾಣ ರಾಜ್ಯದೆಲ್ಲೆಡೆ ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರವು ಹೈಕೋಟರ್ಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಅಜರ್ಿ ಸಲ್ಲಿಸಿತ್ತು, ಇದನ್ನು ಪರಿಗಣಿಸಿರುವ ಉಚ್ಛ ನ್ಯಾಯಾಲಯವು ಇಂತಹ ಪ್ರಯಾಣದ ನಿಯಂತ್ರಣಕ್ಕೆ ಕಡಿವಾಣ ಹಾಕಲು ಸಕರ್ಾರಕ್ಕೆ ನಿದರ್ೇಶನ ನೀಡಿದೆ ಎಂದರು.
ಬೇಲೂರು ಕೈಗಾರಿಕಾ ಪ್ರದೇಶದಲ್ಲಿರುವ ಕಾಖರ್ಾನೆಗಳು ಖಾಯಂ ಸಿಬ್ಬಂದಿಗೆ ಒದಗಿಸುವ ಸಾರಿಗೆ ಸೇವೆಗಳನ್ನು, ಗುತ್ತಿಗೆ ಆಧಾರಿತ ಕಾಮರ್ಿಕರಿಗೂ ನಿಗದಿತ ಸ್ಥಳಗಳಿಂದ ಒದಗಿಸಲು ಕ್ರಮ ಕೈಗೊಳ್ಳಬೇಕು. ವಾಕರಸಾ ಸಂಸ್ಥೆಯು ಧಾರವಾಡ ಹೈಕೋರ್ಟನಿಂದ ಬೇಲೂರು ಕೈಗಾರಿಕಾ ಪ್ರದೇಶದ ವಿವಿಧ ಸ್ಥಳಗಳಿಗೆ ನಿಯಮಿತವಾಗಿ ಸಾರಿಗೆ ಸೌಲಭ್ಯ ಒದಗಿಸಬೇಕು ಎಂದು ಆರ್.ಎಸ್. ಚಿಣ್ಣನ್ನವರ ಸೂಚಿಸಿದರು.
ಉಪ ಸಾರಿಗೆ ಆಯುಕ್ತ ಹಾಗೂ ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ ರವೀಂದ್ರ ಕವಲಿ ಮಾತನಾಡಿ, ಸರಕು ಸಾಗಣೆ ವಾಹನಗಳಲ್ಲಿ ಪ್ರಯಾಣ ನಡೆಯುತ್ತಿರುವದನ್ನು ನ್ಯಾಯಾಂಗ ವ್ಯವಸ್ಥೆಯೇ ಗುರುತಿಸಿ ನಿಯಂತ್ರಿಸಲು ಮುಂದಾಗಿದೆ. ಸರಕು ಮತ್ತು ಕಟ್ಟಡ ನಿಮರ್ಾಣ ಸಾಮಗ್ರಿ ಪೂರೈಕೆ ವಾಹನಗಳಲ್ಲಿ ಪ್ರಯಾಣಿಸುವುದು ಕಾನೂನು ಬಾಹಿರ 1980 ರ ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 86 ರ ಪ್ರಕಾರ ವಾಹನದ ರಹದಾರಿ, ಚಾಲನಾ ಅನುಜ್ಞಾ ಪತ್ರ ರದ್ದುಪಡಿಸಬಹುದು.
ಸೆಕ್ಷನ್ 53 ಹಾಗೂ 54 ರನ್ವಯ ನೋಂದಣಿಯನ್ನೇ ರದ್ದುಗೊಳಿಸಲು ಅವಕಾಶವಿದೆ. ಕಾಖರ್ಾನೆಗಳೂ ಸಹ ತಮ್ಮ ಕಾಮರ್ಿಕರಿಗೆ ಈ ಕುರಿತು ತಿಳುವಳಿಕೆ ಮೂಡಿಸಬೇಕು, ಸೂಚನಾ ಫಲಕಗಳನ್ನು ಹಾಕಬೇಕು ಎಂದರು.
ಹುಬ್ಬಳ್ಳಿ ಉಪವಿಭಾಗದ ಜಿಲ್ಲಾ ಕಾಮರ್ಿಕ ಅಧಿಕಾರಿ ತರನ್ನುಂ ಬಂಗಾಲಿ ಮಾತನಾಡಿ, ಗುಲಾಮಗಿರಿ ಪದ್ಧತಿ ಜೀವಂತವಾಗಿದ್ದ ಕಾಲದಲ್ಲಿ ಅಮೇರಿಕಾದ ಚಿಕ್ಯಾಗೋ ನಗರದಲ್ಲಿ 1886 ರ ಮೇ 1 ರಂದು ಸಂಘಟಿತರಾಗಿ ಹೋರಾಟ ಆರಂಭಿಸಿದ ಪರಿಣಾಮವಾಗಿ ಕಾಮರ್ಿಕರ ದುಡಿಯುವ ಸಮಯ ಎಂಟು ಗಂಟೆಗಳಿಗೆ ನಿಗದಿಯಾಯಿತು. ಇದರ ನೆನಪಿಗೆ ಪ್ರತಿವರ್ಷ ಮೇ 1 ರಂದು ಕಾಮರ್ಿಕರ ದಿನ ಆಚರಿಸಲಾಗುತ್ತಿದೆ.
ಭಾರತದಲ್ಲಿ 1923 ರಲ್ಲಿ ಮದ್ರಾಸ್ ನಗರದಲ್ಲಿ ಕಾಮರ್ಿಕರು ಮತ್ತು ರೈತರು ಸಮಾವೇಶಗೊಂಡು ಕಾಮರ್ಿಕ ಚಳುವಳಿಗೆ ನಾಂದಿ ಹಾಡಿದರು. ಇದರಿಂದಾಗಿ ಕಾಲಕ್ರಮೇಣವಾಗಿ ಕಾಮರ್ಿಕ ಕಲ್ಯಾಣದ ಆಶಯ ಹೊತ್ತ ಸುಮಾರು 26 ಕಾಯ್ದೆಗಳು ಜಾರಿಗೆ ಬಂದವು ಎಂದರು.
ಎಡಿಎಂ ಅಗ್ರೋ ಇಂಡಸ್ಟ್ರೀಸ್ ತಾಂತ್ರಿಕ ಮುಖ್ಯಸ್ಥ ರವಿಕುಮಾರ ಓರಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವಾಕರಸಾಸಂ ಉಪಮುಖ್ಯ ಕಾಮರ್ಿಕ ಮತ್ತು ಕಲ್ಯಾಣಾಧಿಕಾರಿ ಶಶಿಧರ ಕುಂಬಾರ, ಗರಗ ಪಿಎಸ್ಐ ಎಸ್.ಆರ್.ಕ ಣವಿ, ವಾತರ್ಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿದರ್ೇಶಕ ಮಂಜುನಾಥ ಡೊಳ್ಳಿನ, ವಾತರ್ಾ ಸಹಾಯಕ ಸುರೇಶ ಹಿರೇಮಠ, ಆರ್ಟಿಓ ನಿರೀಕ್ಷಕರಾದ ನಾಗೇಶ ಮುಂಡಾಸ, ರಮೇಶ ಮಾಳಗಿ ಮತ್ತಿತರರು ವೇದಿಕೆಯಲ್ಲಿದ್ದರು.
ಅನೀಲ ತೇರದಾಳ ಸ್ವಾಗತಿಸಿದರು, ದಾವಲ್ಬಿ ನದಾಫ್ ಪ್ರಾಥರ್ಿಸಿದರು. ಭುವನೇಶ್ವರಿ ಕೋಟಿಮಠ ಕಾರ್ಯಕ್ರಮ ನಿರೂಪಿಸಿದರು. ಬಿ.ಆರ್.ಜಾಧವ ವಂದಿಸಿದರು.