ಲಾಕ್ ಡೌನ್ ನಿಂದ ಕೃಷಿ ಮಳಿಗೆಗಳು, ಚಹಾ ಕೈಗಾರಿಕೆಗಳಿಗೆ ವಿನಾಯಿತಿ: ಕೇಂದ್ರದ ಆದೇಶ

ನವದೆಹಲಿ, ಏ 4, ಕೋವಿಡ್ 19 ಹಿನ್ನೆಲೆಯಲ್ಲಿ ದೇಶಾದ್ಯಂತ ಘೋಷಿಸಿರುವ ಲಾಕ್ ಡೌನ್ ನಿಂದ ಕೃಷಿ ಸಂಬಂಧಿತ ಅಂಗಡಿಗಳು, ಚಹಾ ಕೈಗಾರಿಕೆ ಮತ್ತಿತರ ಕೆಲ ಸೇವೆಗಳಿಗೆ ವಿನಾಯಿತಿ ನೀಡಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ಹೇಳಿದೆ.ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ಈ ಕುರಿತು ನಾಲ್ಕನೇ ಹೆಚ್ಚುವರಿ ವಿನಾಯಿತಿ ಮಾರ್ಗಸೂಚಿ ಹೊರಡಿಸಿದೆ. ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಬಲ್ಲಾಳ್  ರಾಜ್ಯ ಸರ್ಕಾರಗಳಿಗೆ ಪತ್ರ ಬರೆದಿದ್ದಾರೆ. ಹೆದ್ದಾರಿಗಳಲ್ಲಿ ಪೆಟ್ರೋಲ್ ಬಂಕ್ ಗಳು, ಸರಕು ಸಾಗಾಣೆ ವಾಹನಗಳ ದುರಸ್ತಿ ಅಂಗಡಿಗಳು, ಚಹಾ ಕೈಗಾರಿಕೆಗೆ ವಿನಾಯಿತಿ ಕೊಡಲಾಗಿದೆ. ಚಹಾ ಪ್ಲಾಂಟೇಷನ್ ಗಳಲ್ಲಿ ಗರಿಷ್ಠ ಶೇ 50 ರಷ್ಟು ಮಂದಿ ಕಾರ್ಯನಿರ್ವಹಿಸಲು ಅವಕಾಶ ನೀಡಲಾಗಿದೆ ಎಂದು ತಿಳಿಸಿದ್ದಾರೆ. ವಿನಾಯಿತಿ ನೀಡಿರುವ ಸೇವೆಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಜತೆಗೆ ಶುಚಿತ್ವಕ್ಕೆ ಒತ್ತು ನೀಡಬೇಕು ಎಂದು ಸಹ ಸಲಹೆ ಮಾಡಿದ್ದಾರೆ.