ಬೆಳಗಾವಿ 15: ಬೆಳಗಾವಿಯ ಸಪ್ತಸ್ವರ ಸಂಗೀತ ವಿದ್ಯಾಲಯದ ರಜತ ಮಹೋತ್ಸವ ಸಂಭ್ರಮ ಕಾರ‌್ಯಕ್ರಮವು ಸಪ್ತಸ್ವರ ವಿದ್ಯಾರ್ಥಿ ವೃಂದ ಇವರಿಂದ ನಗರದ ಐ.ಎಂ.ಇ.ಆರ್ ಸಭಾಗೃಹದಲ್ಲಿ ಎರಡು ದಿನಗಳ ಕಾಲ ಇದೇ ಜನೇವರಿ ಶನಿವಾರ 18 ಹಾಗೂ ರವಿವಾರ 19 ರಂದು ಮಧ್ಯಾಹ್ನ 3.30ಕ್ಕೆ ಜರುಗಲಿದೆ ಎಂದು ವಿದ್ಯಾಲಯದ ಸಂಸ್ಥಾಪಕ ಸಂಚಾಲಕರಾದ ಗಾನ ವಿದುಷಿ ನಿರ್ಮಲಾ ಪ್ರಕಾಶ ಅಯ್ಯರ ಹೇಳಿದರು.
ಸುದ್ದಿಗೋಷ್ಠಿಯಲ್ಲಿಇಂದು ಮಾತನಾಡಿದ ಅವರು, ಅಂದು ಬೆಳಗಾವಿ ರಾಣಿಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಸಿ.ಎಂ ತ್ಯಾಗರಾಜ ಅವರು ರಜತ ಮಹೋತ್ಸವ ಕಾರ‌್ಯಕ್ರಮವನ್ನು ಉದ್ಘಾಟಿಸಲಿದ್ದು. ಧಾರವಾಡದ ಹಿರಿಯ ಸಾಹಿತಿಗಳಾದ ಪ್ರೊ.ರಾಘವೇಂದ್ರ ಪಾಟೀಲ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಜನೇವರಿ 18 ಶನಿವಾರರಂದು ಸಂಗೀತ ಕಾರ‌್ಯಕ್ರಮ ಜರುಗಲಿದ್ದು, ಅಂದು ಚಿಕ್ಕಮಕ್ಕಳಾದ ಸ್ವರಾ, ಹರ್ಷಿಣಿ, ದೇವಿಪಪ್ರಸಾದ, ಸಾನ್ವಿಕಾ ಎಂ, ಅದಿತಿಕುಲಕರ್ಣಿ, ಕೃತ್ತಿಕಾ, ಆರಾಧ್ಯ ಸಿ, ನೀಹಾರಿಕಾ, ವೀನೀತ, ಶ್ರೀನಿಕಾ, ಆದ್ವಿಕ್, ಆದ್ಯಾ, ಅದಿತಿ ಪಿ, ಎಲೈನ್, ಪೂರ್ವಿ ಎಚ್, ಸೋನಾಕ್ಷಿ, ಪ್ರಾಂಜಲ್, ಪಿ. ವಿವಾನ್‌ಎಚ್, ಪ್ರಜ್ವಲ್, ಅನಯ, ಆದ್ಯ ಪಿ, ಆಯುಷ್ಯ್‌ಇವರುಕಾರ‌್ಯಕ್ರಮ ನೀಡಲಿದ್ದಾರೆ ಎಂದರು.ರಾಗ ಪಂಚಮಿ ಕಾರ‌್ಯಮದಲ್ಲಿ ಗುಂಪು-1 ರಲ್ಲಿ “ರಾಗ ಭೂಪ” ವನ್ನು ಸಿಯಾ, ಚಾರ್ವಿ, ಸ್ತುತಿ, ಮೈತ್ರೇಯಿ, ಖುಷಿ ಕೆ, ತನ್ಮಯ ಪ್ರಸ್ತುತಪಡಿಸುವರು. ಗುಂಪು-2ರಲ್ಲಿ “ರಾಗ ಭೀಮಪಲಾಸ” ವನ್ನುಕವಿತಾ, ಮೇಧಾ ಬಿ, ಗೌರಿ, ಶಿಲ್ಪಾ, ಶ್ರೀಲೇಖಾ, ಈಶಾನಿ ಪ್ರಸ್ತುತಪಡಿಸುವದು.ಗುಂಪು-3ರಲ್ಲಿ “ರಾಗಯಮನ” ವನ್ನು ಲಯ, ಸಾನ್ವಿ ಎಂ, ಪ್ರಾಂಜಲ, ಖುಷಿ, ಸಾಯಿಶ್, ಅಮೂಲ್ಯ, ರೇಣುಕಾ, ಶ್ರಾವಣಿ, ಮಹಾಲಕ್ಷ್ಮಿ ಪ್ರಸ್ತುಪಡಿಸುವದು.ಗುಂಪು-4 ರಲ್ಲಿ “ರಾಗದುರ್ಗಾ” ವನ್ನು ಅನಘಾ, ಖುಷಿ, ಶ್ರೀವತ್ಸ, ಸಾಂಜನಾಯು, ಮನಸ್ವಿನಿ ಪ್ರಸ್ತುಪಡಿಸುವದು.ಗುಂಪು -5ರಲ್ಲಿ “ರಾಗದೇಸ”ವನ್ನು ಸುಷ್ಮಾ, ಗೀತಾಎಸ್, ಮೇಧಾ ಕೆ, ಸಂಜನಾ, ಅಮೃತಾ, ಪ್ರೋಕ್ಷಾ, ಅಶ್ವಿನಿ ಜೆ, ಪ್ರಸ್ತುಪಡಿಸುವದು. ನಂತರ ಲಘು ಸಂಗೀತ ಕಾರ‌್ಯಕ್ರಮ ಜರುಗಲಿದ್ದು, ಗಝಲ್, ಠುಮ್ರಿ ಮತ್ತು ಸುಗಮ ಸಂಗೀತವನ್ನು ಮೇಘನಾ ಕೆ, ನಿತ್ಯಾ ಶ್ರೀಪತಿ, ಸೃಷ್ಟಿ, ಪೂವಿ ಪ್ರಸ್ತುಪಡಿಸುವದು ಎಂದು ಹೇಳಿದರು.ಖ್ಯಾಲ್‌ಗಾಯನದಲ್ಲಿ “ರಾಗಜೋಗ್” ವನ್ನು ಪೂರ್ವಿಆರ್ ಮತ್ತು ಸೃಷ್ಟಿ ಬಿ ಪ್ರಸ್ತುಪಡಿಸುವುದರೊಂದಿಗೆ ಮೊದಲನೆ ದಿನದಕಾರ‌್ಯಕ್ರಮ ಮುಕ್ತಾಯವಾಗುವದು.ಜನೇವರಿ 19 ರಂದುರವಿವಾರ ಬೆಳಿಗ್ಗೆ 10.00 ಗಂಟೆಗೆ ಮತ್ತೆ ಸಂಗೀತ ಕಾರ‌್ಯಕ್ರಮಗಳು ಪ್ರಾರಂಭವಾಗಲಿದ್ದು, ಖ್ಯಾಲ ಗಾಯನದಲ್ಲಿ “ರಾಗ ಲಲಿತ” ವನ್ನು ಮೇಘನಾ ಕೆ ಮತ್ತು ನಿತ್ಯಾ ಪ್ರಸ್ತುತಪಡಿಸುವದು ಎಂದರು.
ಹಿರಿಯ ಸಾಹಿತಿ ಗಳಾದ ಶೀರೀಷ ಜೋಶಿ ಹಾಗೂ ಎಲ್.ಎಸ್.ಶಾಸ್ತ್ರಿ ಮಾತನಾಡಿ, ಈ ಸಮಾರಂಭದಲ್ಲಿ ಸಂಗೀತ ಸಂವಾದ ಕಾರ‌್ಯಕ್ರಮ ಜರುಗಲಿದ್ದು, ಕಾರ‌್ಯಕ್ರಮದಲ್ಲಿ “ಹಿಂದುಸ್ಥಾನಿ ಶಾಸ್ತ್ರಿಯ ಸಂಗೀತದ ಮೂಲಕ, ರಾಗ-ರಸ-ಬಂದಿಶ್‌ಗಳ ನಡುವಿನ ಅವಿಚ್ಛಿನ್ನ ಸಂಬಂಧ ಹಾಗೂ ವಿವಿಧ ಸಂಗೀತ ಶೈಲಿಗಳ ಸ್ವರೂಪ, ಅವುಗಳ ವೈಶಿಷ್ಟ್ಯ, ಮೊದಲಾದ ಅಂಶಗಳನ್ನು ತಾತ್ವಿಕ ಮತ್ತು ಪ್ರಾಯೋಗಿಕವಾಗಿತೆರೆದಿಡುವ ವಿಶಿಷ್ಟ ಕಾರ‌್ಯಕ್ರಮವನ್ನುತಜ್ಞ ಮಹನೀಯರಾದ ಮಂಜನಬೈಲು, ಎಲ್.ಎಸ್. ಶಾಸ್ತ್ರಿ, ನಂದನ ಹರ್ಲೆಕರ, ಶೀರೀಷ ಜೋಷಿ, ಪಂ.ಮಹೇಶ ಕುಲಕರ್ಣಿ, ನಾರಾಯಣ ಗಣಾಚಾರಿ, ಯೋಗೇಶ ರಾಮದಾಸ ನಡೆಸಿಕೊಡಲಿರುವರು ಎಂದು ಹೇಳಿದರು.
ನಂತರ ಸಿಯಾ, ವರ್ಷಾ, ಪೂರ್ಣಿಮಾ, ಸಾನ್ವಿ, ಹರ್ಷಿಣಿ, ಆರಾಧ್ಯಾ ಕೆ. ಪೂರ್ವಿ, ಹರ್ಷಿಣಿ, ಋತ್ವಿಕಾ, ಸುಖಿ, ಸಾನ್ವಿಕಾ, ಸುನೇತ್ರಿ, ಆರುಹಿ, ಸಾನ್ನಿಧ್ಯಾ ಕೆ, ಪೂರ್ವಿ, ಶ್ರಾವ್ಯಾ ಪೂಜಾರಿ ಇವರುಗಳಿಂದ “ಭರತ ನಾಟ್ಯ” ಕಾರ‌್ಯಕ್ರಮ ಜರುಗಲಿದ್ದು. ಸ್ತುತಿ, ನೀಹಾರಿಕಾ, ಲಯಾ, ಸಾನ್ವಿ, ಡಾ.ಸುನಿತಾ, ಮಧುರಾ, ರೀತ್, ಶೇಫಾಲಿ ಕ್ಷೀರಸಾಗರ “ಕಥಕ್ ನೃತ್ಯ” ಪ್ರದರ್ಶಿಸಲಿರುವರು.ಅಂದು ಮಧ್ಯಾಹ್ನ ಅನಯ, ಲಯ, ಪ್ರಾಂಜಲ, ಖುಷಿ ಕೆ, ಖುಷಿ ಪಿ, ಸಿದ್ಧಾರ್ಥ, ಸೀಮಾ, ಯೋಗೇಶ ಎಂ ಹಾರ್ಮೋನಿಯಂ ವಾದನವನ್ನು ಪ್ರಸ್ತುಪಡಿಸಲಿದ್ದು, ವೇದಾಂತ, ಸುಕೃತ್, ವಿಹಾನ, ವಿವಾನ್, ಸಾನ್ವಿ, ದಿವ್ಯರಂಜ, ವೇದವೃತ, ಶುಕ್ಲಾಂಬರ, ಶ್ರೀಪೂರ್ಣ, ಸಿಂಧು, ದಕ್ಷ, ದೀಕ್ಷೀತ, ಸಮರ್ಥ, ಪ್ರಜ್ವಲ, ವರುಣ, ಪ್ರೇಮ “ತಬಲಾ ವಾದನ” ಪ್ರಸ್ತುತಪಡಿಸುವರು.
ಖ್ಯಾತಗಾಯನದಲ್ಲಿ ಶ್ರೀಪತಿ ದೇವ್‌ರಾಗ್ ಪೂರಿಯಾ ಕಲ್ಯಾಣ, ನಂತರ ವಿಧುಷಿ ನಿರ್ಮಲಾ ಪ್ರಕಾಶಅಯ್ಯರ್ ಹಾಗೂ ಪಂ.ಮಹೇಶ ಕುಲಕರ್ಣಿ, ಮುಂಬಯಿ ಅವರಿಂದ ಗಾಯನ ಕಾರ‌್ಯಕ್ರಮ ನಡೆಯಲಿದೆ ಎಂದು ನಿರ್ಮಲಾ ಪ್ರಕಾಶ ಅಯ್ಯರ್ ಹೇಳಿದರು.