ಹೊರ ರಾಜ್ಯದವರಿಗೆ ಸಾಂಸ್ಥಿಕ ಕ್ವಾರಂಟೈನ್ ನಿಂದ ವಿನಾಯಿತಿ.

ಬೆಂಗಳೂರು,  ಮೇ 26, ಹೊರರಾಜ್ಯದಿಂದ ಕರ್ನಾಟಕಕ್ಕೆ ಬರುವ ಯಾವುದೇ ವ್ಯಕ್ತಿ ಕೊರೊನಾ ಪರೀಕ್ಷೆಯಲ್ಲಿ   ನೆಗೆಟಿವ್ ಎಂಬ ವರದಿ ಹೊಂದಿದ್ದರೆ, ಬಂದಿದ್ದರೆ ಅಂತಹವರಿಗೆ  ಸಾಂಸ್ಥಿಕ ಕ್ವಾರಂಟೈನ್ ನಿಂದ ವಿನಾಯಿತಿ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ.ಮಹಾರಾಷ್ಟ್ರ, ಗುಜರಾತ್, ತಮಿಳುನಾಡು, ದೆಹಲಿ,ರಾಜಸ್ಥಾನ ಹಾಗೂ ಮಧ್ಯಪ್ರದೇಶದಿಂದ ಬರುವವರಿಗೆ ಕಡ್ಡಾಯವಾಗಿ 7 ದಿನಗಳ ಸಾಂಸ್ಥಿಕ ಕ್ವಾರಂಟೈನ್  ಮಾಡಲಾಗುವುದು ಎನ್ನಲಾಗಿದೆ.
 ಉಳಿದ ರಾಜ್ಯಗಳಿಂದ ಬರುವವರು 14 ದಿನಗಳ ಕಾಲ ಹೋಂ ಕ್ವಾರಂಟೈನ್ ಗೆ ಒಳಪಡಬೇಕು ಎಂದು ಸರ್ಕಾರ ಈ ಮೊದಲು ಹೇಳಿದ್ದರೂ  ಇದೀಗ ಯಾವುದೇ ರಾಜ್ಯದಿಂದ ಬಂದರೂ  ಅವರ ವೈದಕೀಯ ಫಲಿತಾಂಶ  ವರದಿ ನೆಗೆಟಿವ್ ಎಂದು ಬಂದರೆ ಸಾಂಸ್ಥಿಕ ಕ್ವಾರಂಟೈನ್ ಇಲ್ಲ ಎಂದು ಹೇಳಿದೆ.ಯಾವುದೇ ರಾಜ್ಯದಿಂದ ಆಗಮಿಸುವ ವ್ಯಕ್ತಿಯು ಐಸಿಎಂಆರ್ ನಿಂದ ಅಂಗೀಕೃತವಾಗಿರುವ ಪ್ರಯೋಗಾಲಯಗಳಿಂದ ಕೊರೊನಾ ಪರೀಕ್ಷೆ ಮಾಡಿಸಿರುವ  ಬಗ್ಗೆ ನೆಗೆಟಿವ್ ವರದಿ ಸಲ್ಲಿಸಿದರೆ ಸಾಂಸ್ಥಿಕ ಕ್ವಾರಂಟೈನ್ ನಿಂದ ವಿನಾಯಿತಿ ನೀಡಲಾಗುವುದು.