ಲೋಕದರ್ಶನ ವರದಿ
ರಾಯಬಾಗ 05: ಶಿಬಿರಾಥರ್ಿಗಳು ನಿಸ್ವಾರ್ಥ ಸೇವಾ ಮನೋಭಾವನೆ ಮೈಗೂಡಿಸಿಕೊಂಡು, ಶಿಬಿರದಲ್ಲಿ ಕಲಿತ ಒಳ್ಳೆಯ ಅನುಭವಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ವ್ಯಕ್ತಿತ್ವ ವಿಕಸನಗೊಳಿಸಿಕೊಳ್ಳಬೇಕೆಂದು ಪ್ರಾಚಾರ್ಯ ಎಲ್.ಎನ್.ಮರಾಠೆ ಹೇಳಿದರು.
ಇತ್ತಿಚೇಗೆ ರಾಯಬಾಗ ಗ್ರಾಮೀಣ ಭಾಗದ ಶಾಹು ಪಾರ್ಕನಲ್ಲಿ ರಾ.ವ್ಹಿ.ಸಂಯುಕ್ತ ಪ.ಪೂ.ಕಾಲೇಜಿನ ರಾಷ್ಟ್ರೀಸೇವಾ ಯೋಜನೆ ಘಟಕದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಏಳು ದಿನಗಳ ವಿಶೇಷ ವಾಷರ್ಿಕ ಶಿಬಿರದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.
ಪ್ರೌಢಶಾಲೆ ವಿಭಾಗದ ಉಪ ಪ್ರಾಚಾರ್ಯ ಪಿ.ಎಸ್. ಅಲಗೂರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಎಸ್.ಯು ಚಂದರಗಿ ಸ್ವಾಗತಿಸಿದರು, ಎ.ಎಂ.ಚೌಗುಲೆ ನಿರೂಪಿಸಿದರು, ಎಚ್.ಡಿ.ಗಡದೆ ವಂದಿಸಿದರು.