ನವದೆಹಲಿ, ನವೆಂಬರ್ 9 : ಅಯೋಧ್ಯೆ ಪ್ರಕರಣದ ಸುಪ್ರೀಂ ಕೋರ್ಟ್ ತೀರ್ಪನ್ನು ಎಲ್ಲರೂ ಅಂಗೀಕರಿಸಬೇಕು ಮತ್ತು ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡಬೇಕು ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಶನಿವಾರ ಹೇಳಿದ್ದಾರೆ. ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ನಮ್ಮದು ಪ್ರಜಾಪ್ರಭುತ್ವ ರಾಷ್ಟ್ರವಾಗಿರುವುದರಿಂದ ಎಲ್ಲರೂ ಒಪ್ಪಿಕೊಳ್ಳಬೇಕು ಎಂದು ಗಡ್ಕರಿ ಸುದ್ದಿಗಾರರಿಗೆ ತಿಳಿಸಿದರು. ಪ್ರತಿಯೊಬ್ಬರೂ ಶಾಂತಿ ಮತ್ತು ಸಾಮರಸ್ಯವನ್ನು ಕಾಪಾಡಬೇಕು ಎಂದು ಅವರು ಮನವಿ ಮಾಡಿದರು. ಅಯೋಧ್ಯೆಯ ತೀಪು ಐತಿಹಾಸಿಕವಾಗಿದ್ದು, ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡಬೇಕು ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ. ಸುಪ್ರೀಂ ಕೋರ್ಟ್ ಶನಿವಾರ ವಿವಾದಿತ ಅಯೋಧ್ಯೆ ಸ್ಥಳವನ್ನು ರಾಮ ಜನ್ಮಭೂಮಿ ನ್ಯಾಸ್ಗೆ ನೀಡಿ ತೀಪು ನೀಡಿದೆ. ಮಸೀದಿ ನಿರ್ಮಿಸಲು ಐದು ಎಕರೆ ಪರ್ಯಾಯ ಭೂಮಿಯನ್ನು ಸುನ್ನಿ ವಕ್ಫ್ ಬೋರ್ಡ್ಗ್ ನೀಡಿದೆ. ಈ ಆದೇಶವನ್ನು ಜಾರಿಗೆ ತರಲು ಮೂರು ತಿಂಗಳೊಳಗೆ ಯೋಜನೆಯನ್ನು ರೂಪಿಸುವಂತೆ ನ್ಯಾಯಾಲಯ ಕೇಂದ್ರ ಸರ್ಕಾರಕ್ಕೆ ಆದೇಶಿಸಿದೆ. ಭಾರತದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಐವರು ನ್ಯಾಯಾಧೀಶರ ಸಾಂವಿಧಾನಿಕ ಪೀಠವು 40 ದಿನಗಳ ಕಾಲ ಪ್ರಕರಣದ ವಿಚಾರಣೆಯ ನಂತರ ಇಂದು ಐತಿಹಾಸಿಕ ತೀಪು ನೀಡಿದೆ. ಈ ಮಧ್ಯೆ ಮಧ್ಯಸ್ಥಿಕೆದಾರರ ಸಂಧಾನ ವಿಫಲವಾಗಿತ್ತು. ಕೇಂದ್ರವು ರೂಪಿಸಲಿರುವ ಈ ಯೋಜನೆಯು ದೇವಾಲಯದ ನಿರ್ವಹಣೆ ಮತ್ತು ನಿರ್ಮಾಣಕ್ಕಾಗಿ ಒಂದು ಟ್ರಸ್ಟ್ ಅನ್ನು ಹೊಂದಿರಲಿದ್ದು, ಒಳ ಮತ್ತು ಹೊರ ಪ್ರಾಂಗಣವನ್ನು ಈ ಟ್ರಸ್ಟ್ಗೆ ಹಸ್ತಾಂತರಿಸಲಾಗುತ್ತದೆ. ನಿರ್ಮೊಹಿ ಅಖಾರ ಅವರು ಮೊಕದ್ದಮೆ ಸಲ್ಲಿಸುವಾಗ ಸಮಯ ಮೀರಿತ್ತು. ಹಾಗಾಗಿ ಅವರ ಅಜರ್ಿಯನ್ನು ವಜಾಗೊಳಿಸಲಾಗಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.